Recent Posts

Tuesday, May 5, 2026

ದಕ್ಷಿಣ ಕನ್ನಡ

ಜಿಲ್ಲೆದಕ್ಷಿಣ ಕನ್ನಡಮೈಸೂರುಸುದ್ದಿ

  ಮೇ.22  ರಂದು ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ ವಿದ್ಯುತ್‌ ದೀಪಗಳಿಂದ ಅಲಂಕೃತವಾದ ಭವ್ಯ ರಂಗಮಂಟಪದಲ್ಲಿ ಕರಾವಳಿಯ ಗಂಡುಕಲೆ ಪ್ರದರ್ಶನ -ಕಹಳೆ ನ್ಯೂಸ್

ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನ ಬಯಲಾಟ ಬಹಳ ಅದ್ದೂರಿಯಾಗಿ ನಡೆಯಲಿದೆ. ಮೇ 22 ನೇ ಗುರುವಾರ ಸಂಜೆ 6 ಗಂಟೆಗೆ ಗಾನ ಗಂಧರ್ವ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ವಿದ್ಯುತ್‌ ದೀಪಗಳಿಂದ ಅಲಂಕೃತವಾದ ಭವ್ಯ ರಂಗಮಂಟಪದಲ್ಲಿ ಮಹಿಷಾಸುರನ ಅಬ್ಬರದೊಂದಿಗೆ ಬಹಳ...
ದಕ್ಷಿಣ ಕನ್ನಡಬಂಟ್ವಾಳಬೆಳ್ತಂಗಡಿಮಂಗಳೂರುಸುದ್ದಿ

ದಕ್ಷಿಣ ಕನ್ನಡ‌ ಜಿಲ್ಲೆಯ 12 ಗ್ರಾಮಗಳಲ್ಲಿ 10 ಸೆಂ.ಮೀ.ಗೂ ಅಧಿಕ ಮಳೆ -ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ‌ ಜಿಲ್ಲೆ 12 ಗ್ರಾಮಗಳಲ್ಲಿ ಬುಧವಾರ ಬೆಳಿಗ್ಗೆ 8.30 ರವರೆಗಿನ 24 ಗಂಟೆಗಳಲ್ಲಿ 10 ಸೆಂ.ಮೀ. ಗೂ ಅಧಿಕ ಮಳೆಯಾಗಿದೆ. ನೀರುಮಾರ್ಗದಲ್ಲಿ ಅತಿ ಹೆಚ್ಚು (15.7 ಸೆಂಮೀ) ಮಳೆ‌ ದಾಖಲಾಗಿದೆ. ಮೇರಮಜಲುವಿನಲ್ಲಿ 14.7, ಕೋಟೆಕಾರ್‌ನಲ್ಲಿ 12.8, ಪುದು ಗ್ರಾಮದಲ್ಲಿ 12.6, ಬಗಡಬೆಳ್ಳೂರಿನಲ್ಲಿ 12, ತಲಪಾಡಿಯಲ್ಲಿ 11.5, ಕಿನ್ಯದಲ್ಲಿ 11.1, ಐಕಳದಲ್ಲಿ 10.8, ಮುನ್ನೂರಿನಲ್ಲಿ 10.75, ಅಮ್ಟಾಡಿಯಲ್ಲಿ 10.7, ರಾಯಿಯಲ್ಲಿ 10.1 ಹಾಗೂ ಪಡುಮಾರ್ನಾಡಿನಲ್ಲಿ 10.05 ಸೆಂ.ಮೀ ಮಳೆಯಾಗಿದೆ ಎಂದು...
ದಕ್ಷಿಣ ಕನ್ನಡಮಂಗಳೂರುಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದುವರಿದ ಮಳೆ :ಹಲವೆಡೆ ಮರಗಳು ಬಿದ್ದು, ಮಣ್ಣು ಕುಸಿದು ಹಾನಿ -ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಸುರಿದ ಮಳೆ ಬುಧವಾರವೂ ಮುಂದುವರೆದಿದೆ. ಹಲವೆಡೆ ಮರಗಳು ಬಿದ್ದು, ಮಣ್ಣು ಕುಸಿದು ಹಾನಿ ಉಂಟಾಗಿದೆ. ನಗರದಲ್ಲಿ ಮಂಗಳವಾರ ರಾತ್ರಿ ಬಿಟ್ಟು ಬಿಟ್ಟು ಮಳೆಯಾಗಿದೆ. ಬುಧವಾರ ನಸುಕಿನಲ್ಲಿ ಮಳೆ ನಿಂತಿತ್ತು. ಬೆಳಿಗ್ಗೆ 8ರ ಬಳಿಕ ತುಂತುರು ಮಳೆ ಮತ್ತೆ ಶುರುವಾಗಿದೆ. ಉಳ್ಳಾಲ ತಾಲ್ಲೂಕಿನ ಸಜಿಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ಇಸಮ್ಮ ಅವರ ಮನೆಗೆ ಪಕ್ಕದ ಮಸೀದಿಯ ಆವರಣ ಗೋಡೆ ಬಿದ್ದು ಭಾಗಶಃ ಹಾನಿಯಾಗಿದೆ....
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಅಭಿವೃದ್ಧಿ ಶೂನ್ಯ ದುರಾಡಳಿತದ ಕರಾಳತೆ ಮೆಲುಕು ಹಾಕಿಸಿದೆ: ಸಂಸದ ಕ್ಯಾ. ಚೌಟ -ಕಹಳೆ ನ್ಯೂಸ್

ಮಂಗಳೂರು: ರಾಜ್ಯದಲ್ಲಿ ಭ್ರಷ್ಟಕೂಪ ಆಡಳಿತ ನೀಡಿ, ಉಚಿತ ಗ್ಯಾರಂಟಿಗಳ ಮುಖವಾಡ ಧರಿಸಿಕೊಂಡು ಜನಸಾಮಾನ್ಯರ ಮೇಲೆ ಬೆಲೆಯೇರಿಕೆಗಳ ಬರೆ ಎಳೆದು ಕರ್ನಾಟಕವನ್ನು ಸಾಲದ ಸುಳಿಗೆ ಸಿಲುಕಿಸಿ ದಿವಾಳಿತನದತ್ತ ಸಾಗುವಂತೆ ಮಾಡುವ ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಡ್ಡಗಾಲು ಹಾಕಿ ಅಭಿವೃದ್ಧಿಯನ್ನು ಕುಂಟಿತಗೊಳಿಸಿರುವುದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಎರಡು ವರ್ಷದ ಸಾಧನೆಗಳು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ ಲೇವಡಿ ಮಾಡಿದ್ದಾರೆ. ಕರ್ನಾಟಕವನ್ನು ಶೂನ್ಯ ಅಭಿವೃದ್ಧಿಗೆ ತಳ್ಳಿರುವ ಕಾಂಗ್ರೆಸ್‌ ತಮ್ಮ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಅರುಣ್ ಕುಮಾರ್ ಬೋರು ಗುಡ್ಡೆ ತನ್ನ ಸರ್ವಸ್ವವನ್ನು ಸಮಾಜ ಸೇವೆಗಾಗಿ ಅರ್ಪಿಸಿದವರು : ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ – ಕಹಳೆ ನ್ಯೂಸ್

ಬಂಟ್ವಾಳ :ಅರುಣ್ ಕುಮಾರ್ ಬೋರು ಗುಡ್ಡೆ ತನ್ನ ಸರ್ವಸ್ವವನ್ನು ಸಮಾಜ ಸೇವೆಗಾಗಿ ಅರ್ಪಿಸಿದವರು. ಎಂದು ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಬಣ್ಣಿಸಿದರು. ಅವರು ಸತ್ಯಶ್ರೀ ಕಲ್ಯಾಣ ಮಂಟಪ, ಪಾಣೆಮಂಗಳೂರು ಇಲ್ಲಿ ಬಂಟ್ವಾಳ ಭಾರತೀಯ ಜನತಾ ಪಾರ್ಟಿ, ನರಿಕೊಂಬು, ಓಂ ಶ್ರೀ ಗೆಳೆಯರ ಬಳಗ (ರಿ.), ನ್ಯಾಲ ನರಿಕೊಂಬು,ಶ್ರೀ ದೇವಿ ಯುವಕ ಮಂಡಲ, ನ್ಯಾಲ ಕಾಪಿಕಾಡು,ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ (ರಿ.), ನರಿಕೊಂಬು ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕಲೆ ಮೂಲಕ ಸಂದೇಶ ಉತ್ತಮ ನೀಡಬಹುದು: ಚಂದ್ರಶೇಖರ ಕೆ. ಶೆಟ್ಟಿ-ಕಹಳೆ ನ್ಯೂಸ್

ಮಂಗಳೂರು : ಕಲೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಲು ಸಾಧ್ಯವಿದೆ. ಹಾಗಾಗಿ ಅವುಗಳನ್ನು ವಿರೂಪಗೊಳಿಸುವ ಕೆಲಸ ಮಾಡಬಾರದು ಎಂದು ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಕೆ. ಶೆಟ್ಟಿ ಅವರು ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಕಲಾವಿದರು ಅವಿದ್ಯಾವಂತರಾಗಿದ್ದರೂ ತಮ್ಮ ಬದುಕಿನಲ್ಲಿ ನೈತಿಕ ಪ್ರಜ್ಞೆಯನ್ನು ಹೊಂದಿದ್ದರು. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮನಸ್ಸನ್ನು ವಿರೂಪಗೊಳಿಸುವ ಕೆಲಸ...
ದಕ್ಷಿಣ ಕನ್ನಡಮಂಗಳೂರುಸಿನಿಮಾಸುದ್ದಿ

ಮಂಗಳೂರಿನ ಭಾರತ್ ಮಹಲ್ ನಲ್ಲಿ ಅದ್ಧೂರಿಯಾಗಿ ತೆರೆಕಂಡ “ಜೇವನ್” ಕೊಂಕಣಿ ಚಲನಚಿತ್ರ – ಕಹಳೆ ನ್ಯೂಸ್

ಮಂಗಳೂರು : ಮಂಗಳೂರಿನ ಭಾರತ್ ಮಹಲ್ ನಲ್ಲಿ ಕೊಂಕಣಿ ಚಲನಚಿತ್ರ ಜೇವನ್ ಬಹಳ ಉತ್ಸಾಹ ವಿಜೃಂಭಣೆಯಿಂದ ತೆರೆಕಂಡಿತು. ಸಂದರ್ಭದಲ್ಲಿ ದೀಪ ಬೆಳಗಿಸುವ ಮುಖಾಂತರ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈ , ದಾಯಿಜೀ ವಲ್ರ್ಡ್ ನ ಸ್ಥಾಪಕ ಅಧ್ಯಕ್ಷರಾದ ವಾಲ್ಟರ್ ನಂದಳಿಕೆ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾ ರಿಸ್, ಯೂತ್ ಆಫ್ ಜಿ.ಎಸ್.ಬಿ. ಸ್ಥಾಪಕರಾದ ನರೇಶ ಶೆಣೈ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಭಾಷಾ ಕಾರ್ಯಾಗಾರದ ಉದ್ಘಾಟನೆ; ಭಾಷಾಶಿಕ್ಷಕರ ಜವಾಬ್ದಾರಿ ಹಿರಿದು: ಡಾ. ಪಂಕಜ್ ದ್ವಿವೇದಿ -ಕಹಳೆ ನ್ಯೂಸ್

ಪುತ್ತೂರು : ಭಾಷಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಲವಾರು ಚಟುವಟಿಕೆಗಳನ್ನು ನೀಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡಬೇಕು. ಪರೀಕ್ಷೆಗಳಷ್ಟೇ ಚಟುವಟಿಕೆಗಳು ಕೂಡಾ ವಿದ್ಯಾರ್ಥಿಗಳಿಗೆ ಅಗತ್ಯ. ಭಾಷಾ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ಕಲಿಸುವ ಮೂಲಕ ಉತ್ತಮ ನಾಗರಿಕರನ್ನು ಹುಟ್ಟುಹಾಕಬೇಕು. ಭಾರತದಲ್ಲಿರುವ ವೈವಿಧ್ಯಯ ಸಂಸ್ಕೃತಿಯ ಜನರ ನಡುವೆ ಏಕತೆಯನ್ನು ಬೆಳೆಸುವ ಜವಾಬ್ದಾರಿ ಭಾಷಾ ಶಿಕ್ಷಕರ ಮೇಲಿದೆ ಎಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಸಹಾಯಕ ನಿರ್ದೇಶಕ ಡಾ.ಪಂಕಜ್ ದ್ವಿವೇದಿ ಹೇಳಿದರು. ಅವರು...
1 134 135 136 137 138 727
Page 136 of 727