Thursday, May 7, 2026

ದಕ್ಷಿಣ ಕನ್ನಡ

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಧಾರಾಕಾರ ಮಳೆಯ ನಡುವೆಯೇ ನಡುರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದ ಕಾರು -ಕಹಳೆ ನ್ಯೂಸ್

ಮಂಗಳೂರು ನಗರದ ಕುಲಶೇಖರ ಕಲ್ಪನೆ ಬಳಿ‌ ನಡುರಸ್ತೆಯಲ್ಲಿಯೇ ಕಾರೊಂದು ಧಗಧಗನೇ ಹೊತ್ತಿ ಉರಿದ ಘಟನೆ ನಡೆದಿದೆ. ರವಿವಾರ ಮಧ್ಯಾಹ್ನ 12ಗಂಟೆಗೆ ಈ ಘಟನೆ ನಡೆದಿದೆ. ಸ್ವಿಫ್ಟ್ ಡಿಸಾಯರ್ ಟ್ಯಾಕ್ಸಿಯಲ್ಲಿ ಮೊದಲಿಗೆ ಹೊಗೆ ಕಾಣಿಸಿಕೊಂಡಿದೆ. ಬಳಿಕ ಕಾರು ಸಂಪೂರ್ಣ ಧಗಧಗನೇ ಹೊತ್ತಿ ಉರಿದಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಕಾರಿನಲ್ಲಿ ಬೆಂಕಿಯ ಜ್ವಾಲೆ ಏಳುತ್ತಿರುವ ದೃಶ್ಯ ವೀಡಿಯೋದಲ್ಲಿ ದಾಖಲಾಗಿದೆ.‌ ಸದ್ಯ ಸ್ಥಳದಲ್ಲಿದ್ದವರೇ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಈ ಕಾರು ಯಾರಿಗೆ ಸೇರಿದ್ದು,...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು: ಹುಕ್ಕಾ ಬಾರ್‌ ಮೇಲೆ ಸಿಸಿಬಿ ದಾಳಿ: ಮೂವರ ಬಂಧನ -ಕಹಳೆ ನ್ಯೂಸ್

ಮಂಗಳೂರು: ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡನಾಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಹುಕ್ಕಾ ಬಾರ್‌ ಮೇಲೆ ಸಿಸಿಬಿ ಪೊಲೀಸರು ಭಾನುವಾರ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಕಂಕನಾಡಿಯ ಮ್ಯಾಕ್ ಮಾಲ್‌ನ ಪಾರ್ಕಿಂಗ್‌ನಲ್ಲಿ ಬ್ಲ್ಯಾಕ್ ಮೂನ್ ರೆಸ್ಟೊ ಕಫೆ ಎಂಬ ಹೆಸರಿನಲ್ಲಿ ಕೊಠಡಿಯೊಂದರಲ್ಲಿ ಬಾರ್ ನಡೆಸುತ್ತಿದ್ದ ಸಿದ್ದಿಕ್, ಅಬ್ದುಲ್ ನಾಸಿರ್ ಮತ್ತು ಸಫ್ವಾನ್ ಎಂಬವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ. 2024ರಲ್ಲಿ ಕೆಫೆಟೇರಿಯಾ ನಡೆಸಲು ಮಂಗಳೂರು ಮಹಾನಗರಪಾಲಿಕೆಯಿಂದ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿಹೆಚ್ಚಿನ ಸುದ್ದಿ

ರಸ್ತೆ ಬದಿ ಕುಸಿದು ನೀರಿನ ಪೈಪ್‌ ಲೈನ್ ಗೆ ಹಾನಿ ; 5 ಪಂಚಾಯತ್ ಗಳಿಗೆ ನೀರಿಲ್ಲ- ಕಹಳೆ ನ್ಯೂಸ್

ಬಂಟ್ವಾಳ: ಮಣಿಹಳ್ಳ- ಅಜಿಲಮೊಗರು ರಸ್ತೆಯ ಅಲ್ಲಿಪಾದೆ ಅಣೆಜ ತಿರುವಿನಲ್ಲಿ ರಸ್ತೆ ಅರ್ಧ ಕುಸಿದಿರುವ ಜತೆಗೆ ಬಹುಗ್ರಾಮ ಕುಡಿಯುವ ನೀರಿನ ಪೈಪ್‌ ಲೈನ್ ಸಂಪೂರ್ಣ ಕುಸಿದು ಸುಮಾರು 5 ಪಂಚಾಯತ್ ಗಳಿಗೆ ನೀರಿಲ್ಲದಂತಾಗಿದೆ. ಇಲ್ಲಿ ಕಳೆದ ವರ್ಷ ರಸ್ತೆ ಕುಸಿದಿದ್ದು, ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ಕಾಮಗಾರಿ ವಿಳಂಬವಾಗಿ ಆರಂಭಗೊಂಡು ಈ ಬಾರಿ ಮತ್ತೆ ಕುಸಿದು ಮೇ 25 ರ ರವಿವಾರ ದಂದು ನೀರಿನ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ -ಕಹಳೆ ನ್ಯೂಸ್

ಮಂಗಳೂರು: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾಡು,ಹೊರನಾಡು ಮತ್ತು ವಿದೇಶಗಳಲ್ಲಿರುವ ವಿವಿಧ ಕ್ಷೇತ್ರಗಳ 74 ಮಂದಿ ಸಾಧಕರನ್ನು ಗುರುತಿಸಿ ಈ ಬಾರಿಯ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿದೆ. ಮೇ 22ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಖ್ಯಾತ ಉದ್ಯಮಿ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು 2025 ಸಾಲಿನ ಆರ್ಯಭಟ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಾರಾಯಣಗುರುಗಳು: ಮಾನವೀಯ ಶಿಕ್ಷಣದ ಪ್ರೇರಕ ಶಕ್ತಿ : ಪ್ರಕಾಶ್ ಅಂಚನ್ –ಕಹಳೆ ನ್ಯೂಸ್

ಬಂಟ್ವಾಳ : ನಾರಾಯಣಗುರುಗಳು ಭಾರತದ ಸಾಮಾಜಿಕ ಪುನರ್ ನಿರ್ಮಾಣದ ಅಗ್ರಗಣ್ಯ ಧಾರ್ಮಿಕ ದಾರ್ಶನಿಕರು. ಅವರು ಜಾತಿ, ಧರ್ಮ, ಭಾಷೆ ಅಥವಾ ವರ್ಗದ ಭೇದವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಪ್ರತಿಪಾದಿಸಿದರು. ನಾರಾಯಣಗುರುಗಳ ಶಿಕ್ಷಣದ ತತ್ವಗಳು ಮೌಲ್ಯಾಧಾರಿತವಾಗಿದ್ದವು. ಅವರು ತಿಳಿಸಿದಂತೆ, ನೈತಿಕತೆ, ಸತ್ಯ, ಸಹಾನುಭೂತಿ, ಸಹಿಷ್ಣುತೆ ಮತ್ತು ಪ್ರೀತಿಯಂಥ ಮಾನವೀಯ ಗುಣಗಳು ಶಿಕ್ಷಣದ ಕೇಂದ್ರವಾಗಿರಬೇಕು. ಅವರು ಶಿಕ್ಷಣವನ್ನು ಕೇವಲ ಪುಸ್ತಕದ ಪಾಠಗಳಾಗಿ ಕಾಣದೆ, ಜೀವನವನ್ನೇ ಬದಲಾಯಿಸುವ ಶಕ್ತಿಯಾಗಿ ನೋಡಿದರು. ಈ ನಿಟ್ಟಿನಲ್ಲಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಟೀಮ್ ವೀರಕಂಭ ಆಶ್ರಯದಲ್ಲಿ ಸಿಂಧೂರ್ ಟ್ರೋಫಿ ಕ್ರಿಕೆಟ್ ಪಂದ್ಯಾಟ–ಕಹಳೆ ನ್ಯೂಸ್ 

ಬಂಟ್ವಾಳ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಟೀಮ್ ವೀರಕಂಭ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಸಿಂಧೂರ್ ಟ್ರೋಫಿ ದಿನಾಂಕ 25-05-2025 ನೇ ಆದಿತ್ಯವಾರ ವೀರಕಂಭ ಗ್ರಾಮದ ನಂದನತಿಮಾರ್ ಕ್ರಿಕೆಟ್ ಮೈದಾನದಲ್ಲಿ ಜರಗಲಿರುವುದು. ಪಂದ್ಯಾಟದ ಉದ್ಘಾಟನೆಗೆ ಮೊದಲು ಭಯೋತ್ಪಾದಕರ ದಾಳಿಯಿಂದ ಮರಣ ಹೊಂದಿದ ಭಾರತೀಯರಿಗೆ ಗೌರವ ಶ್ರದ್ಧಾಂಜಲಿ ಹಾಗೂ ಯಶಸ್ವಿ ಸಿಂಧೂರ ಆಪರೇಷನ್ ನಲ್ಲಿ ವೀರಮರಣ ಹೊಂದಿದ ಐದು ಮಂದಿ ಭಾರತೀಯ ಸೈನಿಕರಿಗೆ ಪುಷ್ಪಾರ್ಚನೆ ಕಾರ್ಯಕ್ರಮ ನೆರವೇರಲಿದ್ದು, ವೀರಕಂಭ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಪತ್ನಿಯ ಸೀಮಂತದ ದಿನವೇ ಕುಸಿದು ಬಿದ್ದು ಪತಿ ಸಾವು-ಕಹಳೆ ನ್ಯೂಸ್

ವಿಟ್ಲ : ಪತ್ನಿಯ ಸೀಮಂತದ ದಿನವೇ ಪತಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕನ್ಯಾನದಲ್ಲಿ ನಡೆದಿದೆ. ಪತ್ನಿಯ ಸೀಮಂತದ ದಿನದಂದೆ ಸಾವನ್ನಪ್ಪಿದ ಪತಿಯನ್ನು ಕನ್ಯಾನ ಮಿತ್ತನಡ್ಕ ನಿವಾಸಿ ಪಿಕಪ್ ವಾಹನದ ಚಾಲಕ ಸತೀಶ್ (33) ಎಂದು ತಿಳಿದುಬಂದಿದೆ. ನಿನ್ನೆ ಅವರ ಪತ್ನಿಯ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮನೆಯಲ್ಲಿ ಬೆಳಿಗ್ಗೆ ಕುಸಿದು ಬಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ...
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಶ್ರೀ ಕೃಷ್ಣ ಭಜನಾಮಂದಿರ (ರಿ.) ಕರಾಯ ದಲ್ಲಿ ಮಕ್ಕಳಿಗೆ ಒಂದು ವಾರದ ಕುಣಿತ ಭಜನಾ ತರಬೇತಿ ಶಿಬಿರ -ಕಹಳೆ ನ್ಯೂಸ್

ಬೆಳ್ತಂಗಡಿ : ಶ್ರೀ ಕೃಷ್ಣ ಭಜನಾ ಮಂದಿರ (ರಿ.) ಕರಾಯ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ.) ಗುರುವಾಯನಕೆರೆ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾಪರಿಷತ್ ತಣ್ಣಿರುಪಂತ ವಲಯ ಇವರ ಸಹಯೋಗದೊಂದಿಗೆ ಶ್ರೀ ಕೃಷ್ಣ ಭಜನಾಮಂದಿರ (ರಿ.) ಕರಾಯ ಇಲ್ಲಿ ಮಕ್ಕಳಿಗೆ ಒಂದು ವಾರದ ಕುಣಿತ ಭಜನಾ ತರಬೇತಿಯನ್ನು ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನ ಕರಾಯದ ಆಡಳಿತ ಮೊಕ್ತೇಸರರಾದ ಅನಂತಕೃಷ್ಣ ಕುದ್ದನಾಯ ದೀಪ ಪ್ರಜ್ವಲನೆ ಮಾಡುವುದರ ಮುಖಾಂತರ...
1 133 134 135 136 137 727
Page 135 of 727