Recent Posts

Friday, June 19, 2026

ಸುದ್ದಿ

ಸುದ್ದಿ

ಇರಾನ್‌ ದಾಳಿಗೆ ಒಮಾನ್‌ನಲ್ಲಿ ಮೂವರು ಭಾರತೀಯರ ಸಾವು; 20 ಮಂದಿಗೆ ಗಾಯ- ಕಹಳೆ ನ್ಯೂಸ್

ದುಬೈ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಕದನದಲ್ಲಿ ಮೂವರು ಭಾರತೀಯರು ಅಸುನೀಗಿದ್ದಾರೆ. ಯುದ್ಧವು ಪ್ರಮಾಣ ಮತ್ತು ವ್ಯಾಪ್ತಿಯಲ್ಲಿ ವಿಸ್ತರಿಸುತ್ತಿದ್ದಂತೆ, ಒಮನ್ ಕರಾವಳಿಯ ನೀರಿನಲ್ಲಿ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಕನಿಷ್ಠ ಮೂವರು ಭಾರತೀಯರು ಸಾವನ್ನಪ್ಪಿದರು ಮತ್ತು 20 ಮಂದಿ ಗಾಯಗೊಂಡರು ಎಂದು ವರದಿ ಹೇಳಿದೆ. ಮಸ್ಕತ್ ಕರಾವಳಿಯಲ್ಲಿ ಮಾನವರಹಿತ ಬೋಟ್‌ ನಿಂದ ದಾಳಿಗೊಳಗಾದ ಎಂಕೆಡಿ ವ್ಯೋಮ್ ಹಡಗಿನಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದ್ದಾನೆ ಎಂದು ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ...
ಸುದ್ದಿ

ರಶ್ಮಿಕಾ ಗೃಹಲಕ್ಷ್ಮಿಯಾದ ಖುಷಿಯಲ್ಲಿ ಬಡವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ವಿಜಯ್ ದೇವರಕೊಂಡ- ಕಹಳೆ ನ್ಯೂಸ್

ಸೌತ್‌ನ ಕ್ಯೂಟ್ ಕಪಲ್ ಎಂದೇ ಕರೆಯುವ ನಟ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದರು. ಈಗ ಈ ಜೋಡಿ ತಮ್ಮ ಮಾನವೀಯ ಗುಣದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ. ಮದುವೆಯಾದ ಬಳಿಕ ವಿಜಯ್ ಮೊದಲ ಬಾರಿಗೆ ಪತ್ನಿ ರಶ್ಮಿಕಾ ಜೊತೆ ತಮ್ಮ ಹುಟ್ಟೂರಾದ ತೆಲಂಗಾಣದ ನಾಗರ್ಕುರ್ಣೂಲ್ ಜಿಲ್ಲೆಯ ತಮ್ಮನಪೇಟೆ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ...
ಸುದ್ದಿ

ದುಬೈಗೆ ಹೊರಟಿದ್ದ ವಿಮಾನ ಬೆಂಗಳೂರಿಗೆ ವಾಪಸ್‌- ಕಹಳೆ ನ್ಯೂಸ್

ಬೆಂಗಳೂರು: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದಿಂದ ದುಬೈ ವಾಯು ಪ್ರದೇಶ ಮತ್ತೆ ಬಂದ್ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿಂದ  ದುಬೈಗೆ 113 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನ ವಾಪಸ್‌ ಆಗಿದೆ. ಬೆಂಗಳೂರು ಏರ್‌ಪೋರ್ಟ್‌ನಿಂದ ಇಂದು (ಮಾ.3) ಮುಂಜಾನೆ 04:30ಕ್ಕೆ ಎಮಿರೇಟ್ಸ್ ವಿಮಾನ ಟೇಕಾಫ್‌ ಆಗಿತ್ತು. ಆದರೆ ಭಾರತದ ಗಡಿ ದಾಟುವಷ್ಟರಲ್ಲಿ ದುಬೈ ವಾಯು ಪ್ರದೇಶ ಬಂದ್ ಮಾಡಲಾಗಿದೆ. ಬಂದ್ ಆದ ಕಾರಣ ಹೋದ ಮಾರ್ಗದಲ್ಲೇ ಮತ್ತೆ ವಿಮಾನ ವಾಪಸ್‌ ಆಗಿದೆ....
ಸುದ್ದಿ

ಇರಾನ್ ಕ್ಷಿಪಣಿ ದಾಳಿಯ ಭೀತಿ: ದುಬೈನಲ್ಲಿ ಸಿಲುಕಿ ತವರಿಗೆ ಮರಳಿದ ಪಿ.ವಿ. ಸಿಂಧು…!- ಕಹಳೆ ನ್ಯೂಸ್

ಹೈದರಾಬಾದ್: ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಕ್ಷಿಪಣಿ ದಾಳಿಯ ಸಂಘರ್ಷದ ನಡುವೆ ದುಬೈನಲ್ಲಿ ಸಿಲುಕಿಕೊಂಡಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಕೊನೆಗೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಆದರೆ, ಈ ಜಾಗತಿಕ ಬಿಕ್ಕಟ್ಟಿನಿಂದಾಗಿ ಅವರು ಪ್ರತಿಷ್ಠಿತ 'ಆಲ್ ಇಂಗ್ಲೆಂಡ್ ಓಪನ್' ಟೂರ್ನಿಯಲ್ಲಿ ಭಾಗವಹಿಸುವ ಸುವರ್ಣಾವಕಾಶವನ್ನು ಕಳೆದುಕೊಂಡಿದ್ದಾರೆ. ಪಿ.ವಿ. ಸಿಂಧು ಅವರು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ದುಬೈ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಅವರು ದುಬೈ ತಲುಪಿದ...
ಸುದ್ದಿ

ಇರಾನ್ ಇಸ್ರೇಲ್ ಯುದ್ಧ | ಬ್ಯಾರಲ್‌ಗೆ 100 ಡಾಲರ್‌ ಸಮೀಪಿಸಿದ ತೈಲ ಬೆಲೆ- ಕಹಳೆ ನ್ಯೂಸ್

ಫ್ರಾಂಕ್‌ಫರ್ಟ್: ಇರಾನ್ ಸೇರಿ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ಹೋರ್ಮುಜ್ ಜಲಸಂಧಿಯ ಪ್ರವೇಶವನ್ನೂ ನಿರ್ಬಂಧಿಸಿರುವುದು ಜಾಗತಿಕ ತೈಲ ಬೆಲೆಯ ಮೇಲೆ ವಿಪರೀತ ಪರಿಣಾಮ ಬೀರಿದೆ. ಅಮೆರಿಕದ  ತೈಲ ಬೆಲೆಯಲ್ಲಿ 7.6% ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ (159 ಲೀಟರ್) 6604.83‌ ರೂ. ಆಗಿದೆ. ಬ್ರೆಂಟ್‌ ದರದಲ್ಲಿ 8.6% ಹೆಚ್ಚಳವಾಗಿ 7244.98 ರೂ. ತಲುಪಿದೆ. ಹೋರ್ಮುಜ್ ಜಲಸಂಧಿಯ ಮೂಲಕ ಜಗತ್ತಿನ 20% ರಷ್ಟು ತೈಲ ಸಾಗಣೆಯಾಗುತ್ತಿತ್ತು. ಆದರೆ ಅಲ್ಲಿ ಸಾಗುತ್ತಿದ್ದ ಹಡಗುಗಳ...
ಸುದ್ದಿ

ಅಬುಧಾಬಿಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು : 2 ವಿಮಾನಗಳಲ್ಲಿ 500 ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ- ಕಹಳೆ ನ್ಯೂಸ್

ಬೆಂಗಳೂರು: ಇಸ್ರೇಲ್‌-ಇರಾನ್‌ ಯುದ್ಧದಿಂದಾಗಿ  ರದ್ದಾಗಿದ್ದ ವಿಮಾನಯಾನ ಸೇವೆ ಸೋಮವಾರ (ಮಾ.3) ದಿಂದ ಆರಂಭವಾಗಿದ್ದು, ಸಾಕಷ್ಟು ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ. ಅಬುಧಾಬಿಯಿಂದ ಬೆಂಗಳೂರಿಗೆ ಬಂದ 2 ವಿಮಾನಗಳಲ್ಲಿ ಹಂತ ಹಂತವಾಗಿ 500 ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಬಂದಿಳಿದಿದ್ದಾರೆ. ಸೋಮವಾರ ರಾತ್ರಿ 10 ಗಂಟೆ ಹೊತ್ತಿಗೆ ಅಬುಧಾಬಿಯಿಂದ ಬಂದ ವಿಮಾನದಲ್ಲಿ 210 ಪ್ರಯಾಣಿಕರು (ಕನ್ನಡಿಗರು) ಸೇಫಾಗಿ ಲ್ಯಾಂಡ್‌ ಆಗಿದ್ದರು. ಮಂಗಳವಾರ (ಇಂದು) ಬೆಳಗ್ಗಿನ ಜಾವ 3:20...
ಸುದ್ದಿ

ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ : ಭಾರತೀಯ ಮೂಲದ ವಿದ್ಯಾರ್ಥಿನಿ ದುರ್ಮರಣ- ಕಹಳೆ ನ್ಯೂಸ್

ನ್ಯೂಯಾರ್ಕ್: ದುಷ್ಕರ್ಮಿಯೊಬ್ಬ ಅಮಾಯಕರ ಮೇಲೆ ಮನಬಂದಂತೆ ಗುಂಡು ಹಾರಿಸಿ ಇಬ್ಬರು ವಿದ್ಯಾರ್ಥಿಗಳನ್ನು ಹತ್ಯೆ ಮಾಡಿರುವ ಘಟನೆ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ನಡೆದಿದೆ. ಮೃತಪಟ್ಟವರ ಪೈಕಿ ಒಬ್ಬ ವಿದ್ಯಾರ್ಥಿನಿ ಭಾರತೀಯ  ಮೂಲದವಳಾಗಿದ್ದಾಳೆ. ಗುಂಡಿನ ದಾಳಿಯಲ್ಲಿ ಮೃತಪಟ್ಟ ಭಾರತೀಯ ಮೂಲದ ವಿದ್ಯಾರ್ಥಿನಿಯನ್ನು ಸವಿತಾ ಶಾನ್ (21)  ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಇತರೆ 14 ಜನರು ಗಾಯಗೊಂಡಿದ್ದಾರೆ. ದಾಳಿಕೋರನನ್ನು ಸೆನೆಗಲ್‌ನ ವಲಸೆಗಾರ ನ್ಡಿಯಾಗಾ ಡಯಾಗ್ನೆ (53) ಎಂದು ಗುರುತಿಸಲಾಗಿದೆ. ಈತನಿಗೆ ಭಯೋತ್ಪಾದಕ ಚಟುವಟಿಕೆಗಳ ಸಂಬಂಧವಿರುವ...
ಸುದ್ದಿ

ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ: ಟಿಡಿಬಿ ಮಹತ್ವದ ನಿರ್ಣಯ- ಕಹಳೆ ನ್ಯೂಸ್

ತಿರುವಂತಪುರ : ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಟಿಬಿಟಿ ಅಧ್ಯಕ್ಷ ಕೆ.ಜಯಕುಮಾರ್ ಅವರು, "ಗರ್ಭ ಧರಿಸುವ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶ, ಪೂಜೆ ಸಲ್ಲಿಕೆಗೆ ಅವಕಾಶ ಕೊಟ್ಟಿರುವ ಸುಪ್ರೀಂ ಕೋರ್ಟ್ 2018ರ ತೀರ್ಪನ್ನು ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದೇವೆ" ಎಂದು ತಿಳಿಸಿದರು. "ಟಿಡಿಬಿಯು ಶಬರಿಮಲೆ ಪದ್ಧತಿ, ಸಂಪ್ರದಾಯ ಹಾಗೂ ನಂಬಿಕೆಗಳನ್ನು ಕಾಪಾಡಲು ಒತ್ತು ಕೊಡುತ್ತದೆ. ರಾಜ್ಯ...
1 117 118 119 120 121 3,396
Page 119 of 3396