Recent Posts

Friday, June 19, 2026

ಸುದ್ದಿ

ದಕ್ಷಿಣ ಕನ್ನಡಮಂಗಳೂರುಸುದ್ದಿ

ಒಳಮೀಸಲಾತಿ ವರ್ಗೀಕರಣದಲ್ಲಿ ಆದಿದ್ರಾವಿಡ ಸಮುದಾಯಕ್ಕೆ ಅನ್ಯಾಯ: ಕುಲಶಾಸ್ತ್ರೀಯ ಅಧ್ಯಯನಕ್ಕೆ ಒತ್ತಾಯ-ಕಹಳೆ ನ್ಯೂಸ್

ಮಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳಮೀಸಲಾತಿ ಪದ್ಧತಿಯಲ್ಲಿ ಆದಿದ್ರಾವಿಡ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಕೂಡಲೇ ಈ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸಮುದಾಯವನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಮುಖಂಡರಾದ ಅನಿಲ್ ಕುಮಾರ್ ಕಂಕನಾಡಿ ಆಗ್ರಹಿಸಿದರು. ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಹೊಸ ವರ್ಗೀಕರಣದಿಂದ ಉಂಟಾಗಿರುವ ಗೊಂದ ಗಳು ಮತ್ತು ಸಮುದಾಯ ಎದುರಿಸುತ್ತಿರುವ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ರಾಜ್ಯದ 101 ಜಾತಿಗಳನ್ನು ಮೂರು ವಿಭಾಗಗಳಾಗಿ ವರ್ಗೀ ರಿಸಿ ಮೀಸಲಾತಿ ನೀಡುವ...
ಸುದ್ದಿ

ಅಡ್ಯಾರ್ ವೀರಾಂಜನೇಯ ದೇವಸ್ಥಾನದಲ್ಲಿ ಗೋ ನಂದಿ ಪರಿವಾರ ರಥಯಾತ್ರೆಯ ಉದ್ಘಾಟನೆ :ಗೋವು ಭಾರತದ ರಾಷ್ಟ್ರೀಯ ಪ್ರಾಣಿಯಾಗಬೇಕು : ಶ್ರೀ ರಾಜಶೇಖರಾನಂದ ಸ್ವಾಮೀಜಿ -ಕಹಳೆ ನ್ಯೂಸ್

ಬಂಟ್ವಾಳ : ದೇಶಿ ಗೋವಿನ ಕುರಿತಾಗಿ ಜಾಗೃತಿ ಮೂಡಿಸಿ, ಅವುಗಳ ಪ್ರಾಮುಖ್ಯತೆ ತಿಳಿಸುವ ನಿಟ್ಟಿನಲ್ಲಿ ಬಂಟ್ವಾಳದ ಪುದು ಗ್ರಾಮದಲ್ಲಿ ಇರುವ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ). ವತಿಯಿಂದ ಮಾರ್ಚ್ 5 ರಂದು ಗೋನಂದಿ ಪರಿವಾರ ರಥಯಾತ್ರೆ ಉದ್ಘಾಟನೆ ಕಾರ್ಯಕ್ರಮವು ಅಡ್ಯಾರ್ ವೀರಾಂಜನೇಯ ದೇವಸ್ಥಾನದ ಸನ್ನಿಧಾನದಲ್ಲಿ ನಡೆಯಿತು. ಅಡ್ಯಾರ್ ಕಟ್ಟೆಯಿಂದ ರಥದ ಪುರ ಪ್ರವೇಶವನ್ನು,ಊರ ಪರವೂರ ಗಣ್ಯರು,ವೀರಾಂಜನೇಯ ದೇವಸ್ಥಾನದ ಪದಾಧಿಕಾರಿಗಳು,ಗ್ರಾಮಸ್ತರು ಭವ್ಯ ಮೆರವಣಿಗೆಯಲ್ಲಿ...
ಸುದ್ದಿ

ರಾಜ್ಯ ಬಜೆಟ್‌ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: 56,432 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ – ಕಹಳೆ ನ್ಯೂಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ 6) ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಈ ವೇಳೆ ರಾಜ್ಯದ ನಿರುದ್ಯೋಗಿ ಯುವಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಬರೋಬ್ಬರಿ 56,432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಮೂಲಕ ಆಡಳಿತ ಯಂತ್ರವನ್ನು ಬಲಪಡಿಸುವುದು ಮತ್ತು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ...
ಕ್ರೀಡೆಮುಂಬೈರಾಜ್ಯಸುದ್ದಿ

ಸಂಜು ಬ್ಯಾಟಿಂಗ್‌, ಬುಮ್ರಾ ಬೌಲಿಂಗ್‌, ಅಕ್ಷರ್‌ ಸ್ಟನ್ನಿಂಗ್‌ ಕ್ಯಾಚ್‌ ; 7 ರನ್‌ಗಳ ರೋಚಕ ಜಯ, 4ನೇ ಬಾರಿ ಟೀಂ ಇಂಡಿಯಾ ಫೈನಲಿಗೆ – ಕಹಳೆ ನ್ಯೂಸ್

ಮುಂಬೈ: ಸಂಜು ಸ್ಯಾಮ್ಸನ್‌ ಸ್ಫೋಟಕ ಬ್ಯಾಟಿಂಗ್‌, ಅಕ್ಷರ್‌ ಪಟೇಲ್‌ ಸ್ಟನ್ನಿಂಗ್‌ ಕ್ಯಾಚ್‌, ಕೊನೆಯಲ್ಲಿ ಬುಮ್ರಾ ಬೌಲಿಂಗ್‌ ಕಮಾಲ್‌ನಿಂದ ಇಂಗ್ಲೆಂಡ್‌ ವಿರುದ್ಧ ಭಾರತ 7 ರನ್‌ಗಳ ರೋಚಕ ಜಯ ಸಾಧಿಸಿ ನಾಲ್ಕನೇ ಬಾರಿ ಟಿ20 ವಿಶ್ವಕಪ್‌ ಫೈನಲ್‌ ಪ್ರವೇಶಿಸಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ 7 ವಿಕೆಟ್‌ ನಷ್ಟಕ್ಕೆ 253 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಬೆಥೆಲ್‌ ಸ್ಫೋಟಕ ಶತಕ ಸಿಡಿಸಿಯೂ 7 ವಿಕೆಟ್‌ ನಷ್ಟಕ್ಕೆ...
ದೆಹಲಿರಾಜ್ಯಸುದ್ದಿ

ಶ್ರೀಲಂಕಾ ಬಳಿ ಮುಳುಗಿ ಸಂಕಷ್ಟದಲ್ಲಿದ್ದ ಇರಾನ್‌ ನೌಕೆಗೆ ಭಾರತದ ನೌಕಾಪಡೆ ಸಹಾಯ -ಕಹಳೆ ನ್ಯೂಸ್

ನವದೆಹಲಿ: ಅಮೆರಿಕ (US) ದಾಳಿಯಿಂದ ಹಿಂದೂ ಮಹಾಸಾಗರದಲ್ಲಿ ಮುಳುಗಿದ ಇರಾನಿನ ಯುದ್ಧನೌಕೆಗೆ ಸಹಾಯಕ್ಕೆ ಭಾರತೀಯ ನೌಕಾಪಡೆ ಧಾವಿಸಿದೆ. ಅಮೆರಿಕದ ಜಲಾಂತರ್ಗಾಮಿ ನೌಕೆಯ ಟಾರ್ಪಿಡೊ ದಾಳಿಗೆ ಹಿಂದೂ ಮಹಾಸಾಗರದಲ್ಲಿ ಇರಾನಿನ ಯುದ್ಧನೌಕೆ ಐರಿಸ್ ದೇನಾದಿಂದ ಬಂದ ಸಂಕಷ್ಟದ ಸಂಕೇತವನ್ನು ಅನುಸರಿಸಿ ಭಾರತೀಯ ನೌಕಾಪಡೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಮಾರ್ಚ್ 4 ರ ಮುಂಜಾನೆ ಕೊಲಂಬೊದಲ್ಲಿರುವ ಸಾಗರ ರಕ್ಷಣಾ ಸಮನ್ವಯ ಕೇಂದ್ರ (MRCC)ಕ್ಕೆ IRIS ದೇನಾದಿಂದ ಸಂಕಷ್ಟದ ಕರೆ ಬಂದಿತು...
ದೆಹಲಿರಾಜ್ಯಸುದ್ದಿ

ರಷ್ಯಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ವಿನಾಯಿತಿ ಕೊಟ್ಟ ಅಮೆರಿಕ -ಕಹಳೆ ನ್ಯೂಸ್

ನವದೆಹಲಿ: ಇರಾನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ 30 ದಿನಗಳ ವಿನಾಯಿತಿ ನೀಡಿದೆ. ಇದರಿಂದ ಭಾರತದ ನಿರ್ಣಾಯಕ ಇಂಧನ ಪೂರೈಕೆಗೆ ತಾತ್ಕಾಲಿಕ ಉತ್ತೇಜನ ಸಿಕ್ಕಂತಾಗಿದೆ. 2026ರ ಮಾ.5 ರಂದು ಹಡಗುಗಳಲ್ಲಿ ಲೋಡ್ ಮಾಡಲಾದ ರಷ್ಯಾದ ಒಕ್ಕೂಟ ಮೂಲದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಮತ್ತು ಮಾರಾಟಕ್ಕೆ ಅಧಿಕಾರ ನೀಡುವ ರಷ್ಯಾ ಸಂಬಂಧಿತ ಪರವಾನಗಿಯನ್ನು ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ ನೀಡಿದೆ....
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಉಮಾ ಶಿವಾ ಕ್ಷೇತ್ರ ಗೇರುಕಟ್ಟೆ ಕಲ್ಲಡ್ಕ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜುರಾದ ಅನುದಾನದ ಡಿಡಿ ಹಸ್ತಾಂತರ -ಕಹಳೆ ನ್ಯೂಸ್

ಕಲ್ಲಡ್ಕ : ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾ ಶಿವ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ರೂ ಒಂದು ಲಕ್ಷದ 50 ಸಾವಿರ ಅನುದಾನ ಮಂಜೂರಾಗಿದ್ದು, ಅನುದಾನದ ಡಿ ಡಿ ಯನ್ನು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಗೆ ಮಾರ್ಚ್ 5 ಗುರುವಾರ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಏ ರುಕ್ಮಯ ಪೂಜಾರಿ ಏಳ್ತೀಮಾರು, ಸದಸ್ಯರಾದ ವೀರಪ್ಪ...
ರಾಷ್ಟ್ರೀಯಸುದ್ದಿ

ಹೋಟೆಲಿನ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ – ಪಾಕ್‌ ಆಟಗಾರನಿಗೆ ಬಿತ್ತು ದಂಡ -ಕಹಳೆ ನ್ಯೂಸ್

ಕೊಲಂಬೋ : ಟಿ20 ವಿಶ್ವಕಪ್‌ ಟೂರ್ನಿಯಾಡಲು ಶ್ರೀಲಂಕಾಗೆ ಬಂದಿದ್ದ ಪಾಕಿಸ್ತಾನದ ಆಟಗಾರನೊಬ್ಬ ಕ್ಯಾಂಡಿಯ ಹೋಟೆಲಿನ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆತಿಥೇಯ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಕೊನೆಯ ಸೂಪರ್ 8 ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದೆ. ಮಹಿಳಾ ಸಿಬ್ಬಂದಿ ಕೂಗುತ್ತಾ ಸಹಾಯಕ್ಕಾಗಿ ಕರೆ ಮಾಡಿದಾಗ ಹೋಟೆಲ್ ಸಿಬ್ಬಂದಿ ಆಕೆಯ ರಕ್ಷಣೆಗೆ ಬಂದು ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಅವರಿಗೆ ವಿಷಯ...
1 114 115 116 117 118 3,396
Page 116 of 3396