Recent Posts

Friday, June 19, 2026

ಸುದ್ದಿ

ಕೊಡಗುಜಿಲ್ಲೆಸುದ್ದಿ

ಹಾಡಹಗಲೇ ಕಾಡಾನೆ ದಾಳಿ :ಮಹಿಳೆ ಸಾವು -ಕಹಳೆ ನ್ಯೂಸ್

ಮಡಿಕೇರಿ: ಹಾಡಹಗಲೇ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೆಗುಂಡಿ ಗಿರಿಜನ ಹಾಡಿಯಲ್ಲಿ ಘಟಿಸಿದೆ. ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಹಾಡಿಯ ವಾಸಿ ಜಲಜಾಕ್ಷಿ ಮೃತ ದುರ್ದೈವಿ. ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ತಮ್ಮ ಕುಲಕಸುಬು ಅರಣ್ಯ ಉತ್ಪನ್ನಗಳ ಸಂಗ್ರಹಕ್ಕೆಂದು ತಮ್ಮ ಮನೆಯಂಗಳದ ಆಸುಪಾಸಿನ ಅರಣ್ಯಕ್ಕೆ ತೆರಳಿ ಸೀಗೆ ಹೆರಕುತ್ತಿದ್ದಾಗ ಏಕಾಏಕಿ ಧಾವಿಸಿದ...
ಜಿಲ್ಲೆಸುದ್ದಿ

ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಲಾಟೆ : ನೇಣುಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ-ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ: ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಂಡ ಹಾಗೂ ಹೆಂಡತಿ ಮಧ್ಯೆ ಗಲಾಟೆಯಾಗಿ ಕೊನೆಗೆ ಪತ್ನಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಆರ್.ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ವರಲಕ್ಷ್ಮಿ(25) ಎಂದು ಗುರುತಿಸಲಾಗಿದ್ದು, ಗಂಡ ಗಂಗರಾಜು ಪತ್ನಿಯನ್ನು ಕೊಂದು ನೇಣು ಹಾಕಿರುವ ಆರೋಪ ಕೇಳಿಬಂದಿದೆ. ಘಟನೆ ನಡೆದ ದಿನ ಮೃತ ವರಲಕ್ಷ್ಮಿ ಸ್ನೇಹಿತೆ ಶ್ರಾವಣಿಯ ಪ್ರಿಯಕರ ಕರೆ ಮಾಡಿದ್ದ. ಆತನ ಕರೆಯನ್ನು ವರಲಕ್ಷ್ಮಿ ರಿಸೀವ್ ಮಾಡಿದ್ದಳು. ಇದೇ ವಿಚಾರಕ್ಕೆ...
ಜಿಲ್ಲೆಮಂಡ್ಯಸುದ್ದಿ

ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ : ಕತ್ತು ಹಿಸುಕಿ ಕೊಂದಿದ್ದ 2ರ ಮಗು ಅದೃಷ್ಟವಶಾತ್ ಪಾರು -ಕಹಳೆ ನ್ಯೂಸ್

ಮಂಡ್ಯ: ಕೌಟುಂಬಿಕ ಕಲಹಕ್ಕೆ 2ರ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣು ಶರಣಾಗಿದ್ದಾರೆ. ಆದರೆ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪಾರಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ನೇಣಿಗೆ ಶರಣಾದ ದಂಪತಿ. ತಮ್ಮ ಎರಡು ವರ್ಷದ ಮಗುವನ್ನು ಕತ್ತು ಹಿಸುಕಿ, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತ ದಂಪತಿ ಕಳೆದ ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ...
ಸುದ್ದಿ

ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿ ಶಿವ ಕಿರಣ್ ಭಟ್ ಬೈಪದವು ಆಯ್ಕೆ- ಕಹಳೆ ನ್ಯೂಸ್

ವಿಟ್ಲ : ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿ ಶಿವ ಕಿರಣ್ ಭಟ್ ಬೈಪದವುರವರು ಆಯ್ಕೆಯಾಗಿದ್ದಾರೆ. ​ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಅವರ ಮಾರ್ಗದರ್ಶನ ಹಾಗೂ ಆದೇಶದ ಮೇರೆಗೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಅವರು ಜಿಲ್ಲಾ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿ ಶಿವ ಕಿರಣ್ ಭಟ್ ಬೈಪದವುರವರನ್ನು ಆಯ್ಕೆ ಮಾಡಿದ್ದಾರೆ. ​ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ...
ಸುದ್ದಿ

ಇರಾನ್ ಯುದ್ಧದಿಂದ ಭಾರತಕ್ಕೆ ಸಂಕಷ್ಟ : ಅಕ್ಕಿ ವರ್ತಕರಿಗೆ ರೈಸ್ ಮಿಲ್ ಮುಚ್ಚುವ ಭೀತಿ- ಕಹಳೆ ನ್ಯೂಸ್

ಯಾದಗಿರಿ: ಇರಾನ್-ಇಸ್ರೇಲ್-ಅಮೆರಿಕ  ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತಕ್ಕೆ  ಯುದ್ದದ ಎಫೆಕ್ಟ್ ತಟ್ಟಿದೆ. ರಾಜ್ಯದ ಅಕ್ಕಿ ವರ್ತಕರು ಈಗ ಕಂಗಲಾಗಿದ್ದಾರೆ. ಅಕ್ಕಿ ರಫ್ತು ಸ್ಥಗಿತಗೊಂಡ ಪರಿಣಾಮ ರೈಸ್ ಮಿಲ್‌ಗಳು ಮುಚ್ಚುವ ಭೀತಿ ಎದುರಾಗಿವೆ. ಯುದ್ಧ ಕಾರ್ಮೋಡದಿಂದ ಕೋಟ್ಯಂತರ ರೂಪಾಯಿ ವಹಿವಾಟು ನಷ್ಟವಾಗಿದೆ. ಇರಾನ್-ಇಸ್ರೇಲ್ ಹಾಗೂ ಅಮೆರಿಕ ನಡುವಿನ ಸಂಘರ್ಷದಲ್ಲಿ ಭಾರತ ದೇಶಕ್ಕೆ ಕೂಡ ಹೊಡೆತ ಬಿಳುತ್ತಿದೆ. ಗ್ಯಾಸ್ ದರ ಏರಿಕೆ ಬಿಸಿ ಜನರಿಗೆ ತಟ್ಟಿದೆ. ರಾಜ್ಯದ ಬಾಸ್ಮತಿ ಅಕ್ಕಿ ಹಾಗೂ ಸೋನಾ...
ಸುದ್ದಿ

ಇರಾನ್‌-ಇಸ್ರೇಲ್‌ ಯುದ್ಧ; ಬೆಂಗಳೂರಿಗೆ ಆಗಮಿಸಬೇಕಿದ್ದ 9, ನಿರ್ಗಮಿಸಬೇಕಿದ್ದ 10 ವಿಮಾನಗಳು ರದ್ದು- ಕಹಳೆ ನ್ಯೂಸ್

ಬೆಂಗಳೂರು: ಇರಾನ್‌-ಇಸ್ರೇಲ್‌ ಯುದ್ಧ ಮತ್ತೆ ತೀವ್ರಗೊಂಡಿದ್ದು, ಮಧ್ಯಪ್ರಾಚ್ಯದ ಏರ್‌ಸ್ಪೇಸ್‌ಗೆ ನಿರ್ಬಂಧ ವಿಧಿಸಲಾಗಿದೆ. ಪರಿಣಾಮವಾಗಿ ಬೆಂಗಳೂರಿಗೆ  ಆಗಮಿಸಬೇಕಿದ್ದ 9 ಮತ್ತು ನಿರ್ಗಮಿಸಬೇಕಿದ್ದ 10 ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಲ ವಿಮಾನಗಳು ರದ್ದಾಗಿವೆ. ಅಬುಧಾಬಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ, ದೋಹಾ ಮಾರ್ಗಗಳ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಏರ್‌ಸ್ಪೇಸ್ ನಿರ್ಬಂಧ ಮತ್ತು ಭದ್ರತಾ ಕಾರಣದಿಂದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ತಮ್ಮ ವಿಮಾನ ವೇಳಾಪಟ್ಟಿಯನ್ನು ಪರಿಶೀಲಿಸಲು ವಿಮಾನ...
ಸುದ್ದಿ

ನೆಹರು ಮೆಮೊರಿಯಲ್ ಕಾಲೇಜು ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ಮಾದರಿ ರಚನೆ ಸ್ಪರ್ಧೆ- ಕಹಳೆ ನ್ಯೂಸ್

ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಒಂದು ದಿನದ ವಿಜ್ಞಾನ ಮಾದರಿ ರಚನೆ ಸ್ಪರ್ಧೆಯು ವಿಜ್ಞಾನ ಸಂಘದ ವತಿಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರ ಕುಮಾರ್ ಎಂ. ಎಂ ಮಾತನಾಡಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ರಚನಾತ್ಮಕತೆಯನ್ನು ಮೂಡಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿ ಎಂದರು. ಕಾಲೇಜು ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ಐಕ್ಯುಎಸಿ ಸಂಯೋಜಕಿ ಡಾ....
ರಾಜ್ಯಸುದ್ದಿ

ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ – ಕಹಳೆ ನ್ಯೂಸ್

ಭಾರತಕ್ಕೆ ರಷ್ಯಾ ತೈಲ ಖರೀದಿಗೆ ಅನುಮತಿ ಕೊಟ್ಟಿದ್ದೇವೆ ಎಂದ ಅಮೆರಿಕ ವಿರುದ್ಧ ಬಹುಭಾಷಾ ನಟ ಕಮಲ್ ಹಾಸನ್‌ ಕಿಡಿಕಾರಿದ್ದಾರೆ. ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ ಎಂದು ಎಕ್ಸ್‌ನಲ್ಲಿ ಟ್ರಂಪ್‌ ವಿರುದ್ಧ ಅವರು ಪೋಸ್ಟ್‌ ಮಾಡಿದ್ದಾರೆ. ಸಾರ್ವಭೌಮ ರಾಷ್ಟ್ರಗಳ ನಡುವಿನ ಪರಸ್ಪರ ಗೌರವವು ಶಾಶ್ವತ ಜಾಗತಿಕ ಶಾಂತಿಯ ಏಕೈಕ ಅಡಿಪಾಯವಾಗಿದೆ. ನಿಮ್ಮ ದೇಶ ಅಲ್ಲಿನ ಜನರ ಶಾಂತಿ ಮತ್ತು ಸಮೃದ್ಧಿಯನ್ನು ನಾವು ಬಯಸುತ್ತೇವೆ. ಭಾರತವು ಇತರ ದೇಶಗಳ ಆದೇಶಗಳನ್ನು ಒಪ್ಪಿಕೊಳ್ಳುವುದಿಲ್ಲ....
1 111 112 113 114 115 3,396
Page 113 of 3396