Thursday, April 23, 2026

ಬೆಂಗಳೂರು

ಬೆಂಗಳೂರುರಾಜ್ಯಸುದ್ದಿ

ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ : ಕೊಲೆ ಶಂಕೆ -ಕಹಳೆ ನ್ಯೂಸ್

ಬೆಂಗಳೂರು: ಭಾನುವಾರ ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರಿನ ಮಣಿಪಾಲ್ ಕೌಂಟಿ ರಸ್ತೆಯಲ್ಲಿ ನಡೆದಿದೆ. ಬಸಾಪುರ ನಿವಾಸಿ ನಾರಾಯಣಪ್ಪ (56) ಮೃತ ದುರ್ದೈವಿ. ನಾರಾಯಣಪ್ಪ ಮುಂಜಾನೆ 5 ಗಂಟೆಗೆ ಮನೆಯಿಂದ ತೆರಳಿದ್ದರು. ಬಳಿಕ ಸ್ವಿಫ್ಟ್ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾರಿನಲ್ಲಿದ್ದ ಶವವನ್ನು ನೋಡಿ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಇದನ್ನೂ ಓದಿ:‌ ಯೋಗೇಶ್ ಗೌಡ ಹತ್ಯೆ ಕೇಸ್; ಪರಸ್ಪರ 57 ಬಾರಿ ಮೊಬೈಲ್ ಕರೆ...
ಬೆಂಗಳೂರುರಾಜ್ಯಸುದ್ದಿ

ಪರಪ್ಪನ ಅಗ್ರಹಾರದ ಕ್ವಾರಂಟೈನ್ ಸೆಲ್‌ನಲ್ಲಿ ವಿನಯ್ ಕುಲಕರ್ಣಿ, ಗ್ಯಾಂಗ್ : ದರ್ಶನ್ ಸೆಲ್‌ನ ಕೂಗಳತೆ ದೂರದಲ್ಲೇ ಇರೋ ಕೈದಿಗಳು -ಕಹಳೆ ನ್ಯೂಸ್

ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ವಿನಯ್‌ ಕುಲಕರ್ಣಿ ಮತ್ತು ಗ್ಯಾಂಗ್‌ ಪರಪ್ಪನ ಅಗ್ರಹಾರದ ಕ್ವಾರಂಟೈನ್‌ ಸೆಲ್‌ ಸೇರಿದ್ದಾರೆ. ನಟ ದರ್ಶನ್‌ ಸೆಲ್‌ನ ಕೂಗಳತೆ ದೂರದಲ್ಲೇ ಈ ಕೈದಿಗಳು ಇದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹದಿನೇಳು ಜನರನ್ನು ಅಪರಾಧಿಗಳು ಅಂತಾ ತೀರ್ಪು ಪ್ರಕಟಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ನಿನ್ನೆ ಪರಪ್ಪನ ಅಗ್ರಹಾರ ಜೈಲು...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಡೆಲ್ಲಿ ವಿರುದ್ಧ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ RCB : ಚಿನ್ನಸ್ವಾಮಿಯಲ್ಲಿಂದು ಆರ್‌ಸಿಬಿಯ 100ನೇ ಪಂದ್ಯ -ಕಹಳೆ ನ್ಯೂಸ್

ಬೆಂಗಳೂರು: ಪ್ರತಿ ಐಪಿಎಲ್ ಸೀಸನ್‌ನ ಒಂದು ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿಯಲ್ಲಿ ಆಡುವ ರೂಢಿಯಿದೆ. ಅಂದರಂತೆ ಇಂದು (ಏ.18) ಡೆಲ್ಲಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಪ್ರತಿ ಆವೃತ್ತಿಯಲ್ಲಿಯೂ ಗ್ರೀನ್ ಜೆರ್ಸಿ ಧರಿಸುವ ಮೂಲಕ ಆರ್‌ಸಿಬಿ ತಂಡ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದರ ಇನ್ನೊಂದು ವಿಶೇಷತೆಯೆಂದರೆ ಆಟಗಾರರು ಧರಿಸಿರುವ ಎಲ್ಲಾ ಜೆರ್ಸಿಗಳು ಮರುಬಳಕೆಯಾಗಬಲ್ಲ ವಸ್ತುಗಳಿಂದ ತಯಾರಿಸಲಾಗಿರುತ್ತದೆ. ಪರಿಸರದ ಬಗ್ಗೆ ಕಾಳಜಿ ಮೂಡಿಸಬೇಕೆನ್ನುವ ದೃಷ್ಟಿಯಿಂದ...
ಬೆಂಗಳೂರುವಾಣಿಜ್ಯಸುದ್ದಿ

LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ : 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ..!- ಕಹಳೆ ನ್ಯೂಸ್

ಸಂಕಷ್ಟದಲ್ಲಿರುವವರನ್ನು ಕಂಡರೆ ಮನ ಮಿಡಿಯುವ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ  ಅವರು ಇತ್ತೀಚೆಗೆ ಆಟೋ ಚಾಲಕರು ಎದುರಿಸುತ್ತಿರುವ ಎಲ್‌ಪಿಜಿ ಗ್ಯಾಸ್‌ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ಕೇವಲ ಮಾತಿಗೆ ಸೀಮಿತವಾಗದೇ, 25 ಲಕ್ಷ ರೂಪಾಯಿ ಆರ್ಥಿಕ ನೆರವು ಕೂಡ ನೀಡುವ ಮೂಲಕ ನಟ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಹೌದು. ನಮ್ಮ ಸಮಾಜದ ಸಾರಿಗೆ ವ್ಯವಸ್ಥೆಯಲ್ಲಿ ಆಟೋ ಚಾಲಕರ ಪಾತ್ರ ಬಹಳ ದೊಡ್ಡದು. ಇವರನ್ನ ದೇಶದ ಬೆನ್ನೆಲುಬು ಎಂದು ಕರೆದ ನಟ...
ಬೆಂಗಳೂರುಸುದ್ದಿ

ಯುವವಾಹಿನಿ ನಿಯೋಗದಿಂದ ಮುಖ್ಯಮಂತ್ರಿಗಳ ಭೇಟಿ -ಕಹಳೆ ನ್ಯೂಸ್

ಬೆಂಗಳೂರು: ಸಮಾಜದ ಏಳಿಗೆಗಾಗಿ ಯುವವಾಹಿನಿ ಸಂಸ್ಥೆಯು ಕೈಗೊಳ್ಳುತ್ತಿರುವ ವಿವಿಧ ಸೇವಾ ಚಟುವಟಿಕೆಗಳು ಶ್ಲಾಘನೀಯವಾಗಿದ್ದು, ಸಂಘಟನೆಯ ಕಾರ್ಯವೈಖರಿ ಮೆಚ್ಚುವಂತದ್ದು ಎಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟಿದ್ದಾರೆ. ಏಪ್ರಿಲ್ 11, 2026ರಂದು ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ“ಕೃಷ್ಣಾ" ದಲ್ಲಿ ಯುವವಾಹಿನಿಯ ಪ್ರಮುಖರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿತು. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಂಸ್ಥೆ ಮಾಡುತ್ತಿರುವ ಕಾರ್ಯಗಳ ಕುರಿತು ವಿವರಿಸಿ, ಸಂಸ್ಥೆಯ ಸಾಧನೆಗಳನ್ನು ಒಳಗೊಂಡ...
ಬೆಂಗಳೂರುರಾಜ್ಯಸುದ್ದಿ

ವಾಹನ ಚಾಲಕರ ಬಳಿ ಲಂಚ : ಇಬ್ಬರು RTO ಅಧಿಕಾರಿಗಳು ಲೋಕಾ ಬಲೆಗೆ -ಕಹಳೆ ನ್ಯೂಸ್

ಬೆಂಗಳೂರು: ವಾಹನಗಳ ಚಾಲಕರ ಬಳಿ ಲಂಚ  ಪಡೆಯುತ್ತಿದ್ದ ಬೆಂಗಳೂರು ಹೊರವಲಯ ನೆಲಮಂಗಲದ  ಇಬ್ಬರು ಆರ್‌ಟಿಓ  ಅಧಿಕಾರಿಗಳು ಲೋಕಾಯುಕ್ತ  ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಡಾ.ಕೋನ ವಂಶಿ ಕೃಷ್ಣ ನೇತೃತ್ವದಲ್ಲಿ ಟ್ರ‍್ಯಾಪ್ ಮಾಡಲಾಗಿದೆ. ನೆಲಮಂಗಲ ಆರ್‌ಟಿಓ ಇನ್ಸ್ಪೆಕ್ಟರ್ ಅಧಿಕಾರಿಗಳಾದ ದಿನೇಶ್ ಹಾಗೂ ಕಿರಣ್ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿನಿತ್ಯ ವಾಹನಗಳ ತಪಾಸಣೆ ನಡೆಸುತ್ತಿದ್ದ ಇಬ್ಬರು ಆರ್‌ಟಿಓ ಅಧಿಕಾರಿಗಳು ವಾಹನಗಳ ಚಾಲಕರ ಬಳಿ ಲಂಚ ಪಡೆದು ಕಳುಹಿಸುತ್ತಿದ್ದಾರೆ ಎಂಬ...
ಬೆಂಗಳೂರುಸುದ್ದಿ

ಪ್ರೀತಿಸಿದವಳ ಕಿಡ್ನ್ಯಾಪ್ ಮಾಡಿ ಅತ್ತೆಗೆ ಚಾಕು ಇರಿತ ಕೇಸ್ :ಚಿಕಿತ್ಸೆ ಫಲಿಸದೇ ಮಹಿಳೆ ಸಾವು -ಕಹಳೆ ನ್ಯೂಸ್

ಬೆಂಗಳೂರು: ಪ್ರೀತಿಸಿದವಳ ಕಿಡ್ನ್ಯಾಪ್ ವೇಳೆ ಅಣ್ಣನ ಮಗನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಆಡುಗೋಡಿಯಲ್ಲಿ ನಡೆದಿದೆ.   ಚಿಕಿತ್ಸೆ ಫಲಿಸದೇ ಅತ್ತೆ ಮಾಗೇಶ್ವರಿ (55) ಸಾವನ್ನಪ್ಪಿದ ಮಹಿಳೆ. ಮಾ.25 ರಂದು ಆಡುಗೋಡಿ ಮನೆಯಲ್ಲಿ ಮಾಗೇಶ್ವರಿಗೆ ಚಾಕು ಇರಿಯಲಾಗಿತ್ತು. ಮಾಗೇಶ್ವರಿ ಅಣ್ಣನ ಮಗ ಕಿರಣ್‌ಗೆ ಮದುವೆಯಾಗಿತ್ತು. ಆದರೂ ಮಾಗೇಶ್ವರಿ ಸಂಬಂಧಿಯೊಬ್ಬಳನ್ನು ಕರೆದುಕೊಂಡು ಹೋಗಿದ್ದ. ಕೆಲ ದಿನಗಳ ಹಿಂದೆ ಕಿರಣ್ ಬಿಟ್ಟು ಬಂದಿದ್ದ ಆಕೆ ಅಜ್ಜಿ ಜೊತೆ ಇದ್ದಳು....
ಬೆಂಗಳೂರುರಾಜ್ಯಸುದ್ದಿ

ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ ಆರೋಪ :  ವಿಡಿಯೋ ಕಾಲ್ ಮಾಡಿ ಯುವಕ ಆತ್ಮಹತ್ಯೆ -ಕಹಳೆ ನ್ಯೂಸ್

ಬೆಂಗಳೂರು: ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ ಮಾಡಿದಳೆಂದು ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 23 ವರ್ಷದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿ ಮಾಡುತ್ತಿದ್ದ ಯುವತಿಗೆ ವಿಡಿಯೋ ಕಾಲ್ ಮಾಡಿ ಸಾಯುತ್ತಿರುವುದಾಗಿ ತಿಳಿಸಿದ್ದ ಎನ್ನಲಾಗಿದೆ. ಸಾಯುವ ಮುನ್ನ ಕರೆ ಮಾಡಿದ್ದ ವಿಡಿಯೋ ಕಾಲ್ ಹಾಗೂ ಮೆಸೇಜ್‌ನ ಸ್ಕ್ರೀನ್‌ಶಾಟ್‌ಗಳು ಲಭ್ಯವಾಗಿವೆ. ಅಲ್ಲದೇ ಮನೆಯವರಿಗೆ ಗೊತ್ತಿಲ್ಲದೆ ಮದುವೆಯಾಗಿದ್ದಾಗಿ...
1 2 3 4 218
Page 2 of 218