ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ– ಕಹಳೆ ನ್ಯೂಸ್
ನವದೆಹಲಿ: ರಾಜ್ಯಸಭೆಗೆ ನಾಮಕರಣಗೊಂಡಿರುವ ಇನ್ಫೋಸಿಸ್ ಸಂಸ್ಥಾಪಕಿ, ಉದಾರ ದಾನಿ, ಸಾಹಿತಿ, ಕನ್ನಡತಿ ಸುಧಾ ಮೂರ್ತಿ ಅವರು ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಅತ್ಯಂತ ಸುಂದರ ಭಾಷೆಯಾದ, ಸೊಗಡಿನ ಭಾಷೆಯಾದ ಕನ್ನಡದಲ್ಲೇ ಪ್ರತಿಜ್ಞಾ ವಿಧಿಯನ್ನು ಓದುವ ಮೂಲಕ ಮೆಚ್ಚುಗೆ ಗಳಿಸಿದರು. ರಾಜ್ಯಸಭೆಯ ಅಧ್ಯಕ್ಷರಾಗಿರುವ ಜಗದೀಪ್ ಧನಕರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರಾಗಿರುವ ಪಿಯೂಷ್ ಗೋಯಲ್ ಅವರು ಉಪಸ್ಥಿತರಿದ್ದರು. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಇನ್ಫೋಸಿಸ್ ಸ್ಥಾಪನೆಯಲ್ಲಿ ಜತೆಯಾಗಿದ್ದ,...






