Sunday, June 14, 2026

ರಾಜ್ಯ

ಬೆಂಗಳೂರುರಾಜ್ಯಸುದ್ದಿ

ಇಂದು ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ : ಆಪ್ತರಿಗೆ ಔತಣಕೂಟದ ಜೊತೆ ವಿದಾಯ – ಕಹಳೆ ನ್ಯೂಸ್

ಬೆಂಗಳೂರು: ಅಹಿಂದ ನಾಯಕ ಸಿದ್ದರಾಮಯ್ಯ ರಾಜಕೀಯ ಬದುಕಿನ ಮಹತ್ವದ ಅಧ್ಯಾಯಕ್ಕೆ ತೆರೆ ಬೀಳುತ್ತಿದೆ. ಕಾಂಗ್ರೆಸ್‌ನಲ್ಲಿ (Congress) ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ತಿದ್ದಾರೆ. ರಾಜ್ಯದ ಒಬ್ಬ ಟಾಪ್ ಮಾಸ್ ಲೀಡರ್ ಆಗಿದ್ದ ಸಿದ್ದರಾಮಯ್ಯ ಅಧಿಕಾರ ರಾಜಕೀಯ ಈ ನಿರ್ಗಮನದೊಂದಿಗೆ ಕೊನೆಗೊಳ್ತಿದೆ. ಕಳೆದೆರಡು ದಿನಗಳಿಂದ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬಿರುಸಿನ ವಿದ್ಯಮಾನಗಳು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿವೆ. ಮೊದಲೇ ನಿರ್ಣಯಿಸಿದಂತೆ ಇಂದು ಸಿದ್ದರಾಮಯ್ಯ ತಮ್ಮ ಸಿಎಂ...
ದೆಹಲಿರಾಜ್ಯಸುದ್ದಿ

8 ಗಂಟೆ ಆಗಸದಲ್ಲೇ ಹಾರಾಟ : ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್ – ಕಹಳೆ ನ್ಯೂಸ್

ನವದೆಹಲಿ: 230 ಪ್ರಯಾಣಿಕರನ್ನು ಹೊತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ  8 ಗಂಟೆಗಳ ಕಾಲ ಆಗಸದಲ್ಲೇ ಹಾರಾಟ ನಡೆಸಿ ದೆಹಲಿಗೆ  ವಾಪಸ್ ಆಗಿದೆ. ಮೇ 27ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ  ಹೊರಟಿದ್ದ ಎಐ173 ವಿಮಾನವು ಮೂರು ಗಂಟೆಗಳ ಹಾರಾಟ ನಡೆಸಿ ಬಳಿಕ ತಾಂತ್ರಿಕ ದೋಷ ಹಿನ್ನೆಲೆ ಚೀನಾ ವಾಯುಪ್ರದೇಶದಿಂದ ಯೂಟರ್ನ್ ತೆಗೆದುಕೊಂಡು ದೆಹಲಿಗೆ ಹಿಂತಿರುಗಿದೆ. ಸದ್ಯ ವಿಮಾನ ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ತಾಂತ್ರಿಕ...
ರಾಜ್ಯಸುದ್ದಿ

ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತಾ ಲೋಪ : 78 ಗ್ರಾಂ ಚಿನ್ನ, ಅಮೂಲ್ಯ ವಜ್ರಾಭರಣ ನಾಪತ್ತೆ -ಕಹಳೆ ನ್ಯೂಸ್

ತಿರುವನಂತಪುರಂ: ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ 78 ಗ್ರಾಂ ಚಿನ್ನಾಭರಣಗಳು ಹಾಗೂ ಅಮೂಲ್ಯ ವಜ್ರಾಭರಣ ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ದೇವಸ್ಥಾನದ ಅಮೂಲ್ಯ ಖಜಾನೆಯ ಭದ್ರತೆ ಕುರಿತು ಇದೀಗ ಗಂಭೀರ ಪ್ರಶ್ನೆಗಳು ಕೇಳಿಬಂದಿವೆ. ಪೊಲೀಸ್ ಮಹಾನಿರ್ದೇಶಕರು ಗೃಹ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿ ಪ್ರಕಾರ, ದೇವಸ್ಥಾನದ ಸಂಗ್ರಹದಲ್ಲಿದ್ದ ಸುಮಾರು 78 ಗ್ರಾಂ ಚಿನ್ನಾಭರಣಗಳು ಹಾಗೂ ‘ವೈರಂ ನಾಮ’ ಎಂದು ಕರೆಯಲಾಗುವ ವಜ್ರಾಭರಣ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ದೇವಸ್ಥಾನದಲ್ಲಿನ ಪ್ರಸ್ತುತ ಭದ್ರತಾ ವ್ಯವಸ್ಥೆ...
ರಾಜ್ಯಸುದ್ದಿ

50 ಸಾವಿರ ರೂ.ಗೆ ಸ್ನೇಹಿತರಿಗೆ ಪತ್ನಿಯನ್ನೇ ಮಾರಾಟ ಮಾಡಿದ ಪತಿ : 7 ಮಂದಿ ಅರೆಸ್ಟ್ -ಕಹಳೆ ನ್ಯೂಸ್

ಗಾಂಧಿನಗರ: 50 ಸಾವಿರ ರೂಪಾಯಿಗೆ ಪತಿ ತನ್ನ ಪತ್ನಿಯನ್ನೇ ಸ್ನೇಹಿತರಿಗೆ ಮಾರಾಟ ಮಾಡಿರುವ ಘಟನೆ ಗುಜರಾತ್‌ನಲ್ಲಿ  ನಡೆದಿದೆ. ಬಳಿಕ ಪತಿಯ ಸ್ನೇಹಿತರು ಮಹಿಳೆಯ ಮೇಲೆ 10 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಈ ತಿಂಗಳ ಆರಂಭದಲ್ಲಿ ಪಲನ್‌ಪುರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣದ ತನಿಖೆ ವೇಳೆ ಬೆಳಕಿಗೆ ಬಂದಿದೆ. ಮೇ 11ರಂದು ಪತಿ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ...
ಬೆಂಗಳೂರುರಾಜ್ಯಸುದ್ದಿ

ಆಪ್ತರ ಜೊತೆ ಇಂದು ಸಿದ್ದರಾಮಯ್ಯ ಸಭೆ! -ಕಹಳೆ ನ್ಯೂಸ್

ಬೆಂಗಳೂರು: ದೆಹಲಿಯಿಂದ ರಾಜಧಾನಿಗೆ ಮರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿನ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ವಾಪಸ್ ಆದ ಬೆನ್ನಲ್ಲೇ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ತಡರಾತ್ರಿ ಸಣ್ಣ ಸಭೆ ನಡೆದಿದೆ. ಮಧ್ಯರಾತ್ರಿ 12 ಗಂಟೆಗೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ  ಆಗಮಿಸಿದ ಸಿದ್ದರಾಮಯ್ಯನವರನ್ನು ಸಚಿವರಾದ ಕೃಷ್ಣಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರು ಬರಮಾಡಿಕೊಂಡರು. ನಂತರ ಮುಖ್ಯಮಂತ್ರಿಗಳ ಕಾರಿನಲ್ಲೇ ಸಚಿವ ಜಮೀರ್...
ರಾಜ್ಯಸುದ್ದಿ

ಡಿಕೆಶಿ ಹೇಳಿಕೆಗೆ ವಿರೋಧ : ಮೋದಿಗೆ ಪತ್ರ ಬರೆದು ಮೇಕೆದಾಟು DPR ತಿರಸ್ಕರಿಸುವಂತೆ ವಿಜಯ್‌ ಒತ್ತಾಯ -ಕಹಳೆ ನ್ಯೂಸ್

ಚೆನ್ನೈ: ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ಸರ್ಕಾರದ  ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ಯೋಜನೆಯ ಭೂಮಿ ಪೂಜೆ ಘೋಷಣೆಗೆ ತಮಿಳುನಾಡು  ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್  ಅವರು ಪ್ರಧಾನಿ ನರೇಂದ್ರ ಮೋದಿ  ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಾರ್ವಜನಿಕ ಹೇಳಿಕೆಗಳು ಹಾಗೂ ಭೂಮಿ ಪೂಜೆಯ  ಘೋಷಣೆಯು, ಜೀವನೋಪಾಯಕ್ಕಾಗಿ ಕಾವೇರಿ...
ಬೆಂಗಳೂರುರಾಜ್ಯಸುದ್ದಿ

ವೃದ್ಧೆಗೆ ಡಿಜಿಟಲ್ ಅರೆಸ್ಟ್ : ಬರೋಬ್ಬರಿ 24 ಕೋಟಿ ರೂ. ದೋಚಿದ ಸೈಬರ್ ವಂಚಕರು -ಕಹಳೆ ನ್ಯೂಸ್

ಬೆಂಗಳೂರು: ಮನಿ ಲಾಂಡರಿಂಗ್  ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಸೈಬರ್ ವಂಚಕರು ವೃದ್ಧೆ ಬಳಿ 24 ಕೋಟಿ ರೂ. ದೋಚಿರುವ ಘಟನೆ ಬೆಂಗಳೂರಿನಲ್ಲಿ  ನಡೆದಿದೆ. ಶಿವಾಜಿನಗರ ನಿವಾಸಿಯಾಗಿರುವ ವೃದ್ಧೆ ಲಕ್ಷ್ಮೀ ರಾಮಮೂರ್ತಿಗೆ ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಆಸ್ತಿ ಮಾರಿದ್ದರಿಂದ ವೃದ್ಧೆಗೆ ಕೋಟ್ಯಂತರ ರೂ. ಹಣ ಬಂದಿತ್ತು. ಇವರ ಬ್ಯಾಂಕ್ ಟ್ರಾನ್ಸಾಕ್ಷನ್ ಬಗ್ಗೆ ಮಾಹಿತಿ ತಿಳಿದ ಸೈಬರ್ ವಂಚಕರು ಕಳೆದ ಜನವರಿಯಿಂದ ಮೇವರೆಗೆ ಮನಿ ಲಾಂಡರಿಂಗ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ....
ಬೆಂಗಳೂರುರಾಜ್ಯಸುದ್ದಿ

ವರದಕ್ಷಿಣೆ ಕಿರುಕುಳ ಆರೋಪ : ನೇಣು ಬಿಗಿದು ಕಾನ್‌ಸ್ಟೇಬಲ್ ಪತ್ನಿ ಆತ್ಮಹತ್ಯೆ – ಕಹಳೆ ನ್ಯೂಸ್

ಬೆಂಗಳೂರು: ಪೊಲೀಸ್ ಕ್ವಾರ್ಟಸ್‌ನಲ್ಲೇ ನೇಣುಬಿಗಿದುಕೊಂಡು ಕಾನ್‌ಸ್ಪೇಬಲ್ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರ (KR Pura) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಲಕ್ಷ್ಮೀ ಪ್ರಿಯಾ (26) ಆತ್ಮಹತ್ಯೆಗೆ ಶರಣಾದ ಮಹಿಳೆ. ಮೃತಳ ತಂದೆ ಕುಮಾರ್ ಆರಾಧ್ಯ ಅವರು ನೀಡಿದ ದೂರಿನ ಮೇರೆಗೆ ಹೆಚ್‌ಎಎಲ್ ಠಾಣೆಯ  ಕಾನ್‌ಸ್ಟೇಬಲ್ ರಾಜೇಶ್ ಹಾಗೂ ತಂದೆ-ತಾಯಿ ಸೇರಿದಂತೆ ನಾಲ್ವರ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು...
1 7 8 9 10 11 299
Page 9 of 299