ನೇಪಾಳದಲ್ಲಿ ಮಹಾ ಪ್ರವಾಹದ ಆರ್ಭಟ! : 1,000 ಮಂದಿ ನಾಪತ್ತೆ ಶಂಕೆ – ಕಹಳೆ ನ್ಯೂಸ್
ಕಠ್ಮಂಡು: ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ನೇಪಾಳದಲ್ಲಿ ಭೀಕರ ಪ್ರವಾಹ (Nepal Flash flood) ಸಂಭವಿಸಿದ್ದು, ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ನೇಪಾಳ ರಸುವಾದಲ್ಲಿ ಟಿಬೆಟ್ ಗಡಿಯ (Tibet Border) ಬಳಿಯಿರುವ ಇಡೀ ಗ್ರಾಮವೇ ಕೊಚ್ಚಿಹೋಗಿದ್ದು, ಅಪಾರ ಪ್ರಮಾಣದ ಜೀವಹಾನಿಯಾಗಿರುವ ಭೀತಿ ಹೆಚ್ಚಾಗಿದೆ. ಸ್ಥಳೀಯ ಕಾಲಮಾನ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ನದಿ ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅದ್ರಲ್ಲೂ ಭೋಟೆ...







