Tuesday, June 16, 2026

ರಾಜ್ಯ

ಬೆಂಗಳೂರುರಾಜ್ಯಸುದ್ದಿ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ : ವಾಹನಗಳ ನಡುವಿನ ಅಪಘಾತ ತಪ್ಪಿಸಲು AI ಆಧಾರಿತ ಸ್ಮಾರ್ಟ್ ಸಿಸ್ಟಮ್ ಜಾರಿ -ಕಹಳೆ ನ್ಯೂಸ್

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ  ವಿಮಾನ ಮತ್ತು ವಾಹನಗಳ ನಡುವಿನ ಅಪಘಾತ ತಪ್ಪಿಸಲು ಎಐ (AI) ಆಧಾರಿತ ಸ್ಮಾರ್ಟ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ವಿಮಾನ ನಿಲ್ದಾಣದ ವಾಯುಯಾನ ಪ್ರದೇಶದಲ್ಲಿ ಕಾರ್ಯಾಚರಣೆ ಸುರಕ್ಷತೆ ಮತ್ತು ನಿಯಂತ್ರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು  ಸಮಗ್ರವಾದ `ಸ್ಮಾರ್ಟ್ ಏರ್‌ಸೈಡ್ ಸುರಕ್ಷತಾ ವ್ಯವಸ್ಥೆ’ಯನ್ನು ಪರಿಚಯಿಸಿದೆ.  ವಿಮಾನ ನಿಲ್ದಾಣದ ಅತ್ಯಂತ ಮಹತ್ವದ ಪ್ರದೇಶವಾದ ಏರ್‌ಸೈಡ್ ವಲಯಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸುಧಾರಿತ ತಾಂತ್ರಿಕ ನಿಯಂತ್ರಣವನ್ನು...
ಬೆಂಗಳೂರುರಾಜ್ಯಸುದ್ದಿ

ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಕೇಸ್‌ : ಅಮಾನತು ಆದೇಶ ವಾಪಸ್ ಪಡೆದ ಸರ್ಕಾರ -ಕಹಳೆ ನ್ಯೂಸ್

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ.ರಾಮಚಂದ್ರ ರಾವ್  ಅಮಾನತು ಆದೇಶವನ್ನ ರಾಜ್ಯ ಸರ್ಕಾರ ಹಿಂಪಡೆದಿದೆ. ಐಜಿಪಿಯಾಗಿದ್ದಾಗ ಕಚೇರಿಯಲ್ಲೇ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋ ವೈರಲ್ ಆಗಿ ರಾಜ್ಯ ಸರ್ಕಾರ ರಾಮಚಂದ್ರ ರಾವ್‌ರನ್ನ ಅಮಾನತು ಮಾಡಿತ್ತು. ಇದೀಗ ಅಮಾನತು ಆದೇಶವನ್ನ ವಾಪಸ್‌ ಪಡೆದಿದೆ. ಡಿಜಿಪಿ ಪೊಲೀಸ್ ಮ್ಯಾನ್ಯುವಲ್ ಅಂತಾ ಹೊಸ ಹುದ್ದೆ ಸೃಷ್ಟಿಸಿ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇದೇ ತಿಂಗಳು 31 ರಂದು...
ಬೆಂಗಳೂರುರಾಜ್ಯಸುದ್ದಿ

ಶಾಸಕರಿಗೆ ಟಿಕೆಟ್ ವಿತರಣೆಗೂ ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ: ಡಿಕೆಶಿ -ಕಹಳೆ ನ್ಯೂಸ್

ಬೆಂಗಳೂರು: ಅಹಮದಾಬಾದ್‌ನಲ್ಲಿ  ದೊಡ್ಡ ಕ್ರೀಡಾಂಗಣವಿದೆ, ಹೆಚ್ಚು ಜನ ಸೇರುತ್ತಾರೆ ಎಂಬ ಉದ್ದೇಶದಿಂದ ಐಪಿಎಲ್ ಫೈನಲ್ ಪಂದ್ಯವನ್ನು ಸ್ಥಳಾಂತರ ಮಾಡಿರಬೇಕು. ಶಾಸಕರಿಗೆ ಟಿಕೆಟ್ ವಿತರಣೆಗೂ ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು. ಶಾಸಕರಿಗೆ ಐಪಿಎಲ್ ಟಿಕೆಟ್ ಬೇಡಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದಿಗೆ ಸ್ಥಳಾಂತರಿಸಲಾಗಿದೆ ಎಂಬ ವಿಚಾರವಾಗಿ ಮಾತನಾಡಿ, ಬೇರೆ...
ಬೆಂಗಳೂರುರಾಜ್ಯಸುದ್ದಿ

ರಾಜ್ಯದ ಗೊಂದಲಗಳನ್ನ ಹೈಕಮಾಂಡ್ ಬಗೆಹರಿಸುವ ವಿಶ್ವಾಸವಿದೆ: ಪರಮೇಶ್ವರ್ -ಕಹಳೆ ನ್ಯೂಸ್

ಬೆಂಗಳೂರು: ಪಂಚರಾಜ್ಯ ಚುನಾವಣೆ ಮುಗಿದಿದ್ದು, ರಾಜ್ಯದ ಗೊಂದಲಗಳನ್ನ ಹೈಕಮಾಂಡ್ ಬಗೆಹರಿಸುವ ವಿಶ್ವಾಸ ಇದೆ ಅಂತ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ರಾಜ್ಯ ಕುರ್ಚಿ ಗೊಂದಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗೊಂದಲಗಳು ಬಗೆಹರಿಯಲೇಬೇಕು. ನಮ್ಮ ಉದ್ದೇಶ ಆಡಳಿತದ ಮೇಲೆ ಪರಿಣಾಮ ಬೀರಬಾರದು. ಅದಕ್ಕಾಗಿ ಗೊಂದಲ ಬಗೆಹರಿಯಲೇಬೇಕು. ಹೈಕಮಾಂಡ್ ಗೊಂದಲ ಬಗೆಹರಿಸೋ ವಿಶ್ವಾಸ ಇದೆ. ಬಗೆಹರಿಸಲು ಆಗದೇ ಇರೋ ಗೊಂದಲ ಇದಲ್ಲ. ಚುನಾವಣೆಯಲ್ಲಿ ಹೈಕಮಾಂಡ್ ನಾಯಕರು ಬ್ಯುಸಿ ಇದ್ದರು. ಈಗ ಚುನಾವಣೆ...
ರಾಜ್ಯಸುದ್ದಿ

ಎಮರ್ಜೆನ್ಸಿ ಕೋಡ್‌ ಕಳಿಸಿ ನಾಪತ್ತೆಯಾದ ಅಮೆರಿಕದ ʻಫ್ಲೆಯಿಂಗ್‌ ಗ್ಯಾಸ್‌ ಸ್ಟೇಷನ್‌ʼ -ಕಹಳೆ ನ್ಯೂಸ್

ವಾಷಿಂಗ್ಟನ್: ಅಮೆರಿಕದ ಮಿಲಿಟರಿ ವಿಮಾನಗಳಿಗೆ ಇಂಧನ ಪೂರೈಸಲು ನಿಯೋಜನೆಗೊಂಡಿದ್ದ ಬೋಯಿಂಗ್ KC-135 ಸ್ಟ್ರಾಟೋಟ್ಯಾಂಕರ್  ವಿಮಾನ ಇರಾನ್‌ನ ಪರ್ಷಿಯನ್ ಕೊಲ್ಲಿಯ ಮೇಲೆ ಹಾರುವಾಗ ಎಮರ್ಜೆನ್ಸಿ (7700) ಸಂಕೇತ ರವಾನಿಸಿ ನಾಪತ್ತೆಯಾಗಿದೆ. ವಿಮಾನದೊಳಗೆ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಫ್ಲೈಟ್‌ರಾಡಾರ್ ದತ್ತಾಂಶದಲ್ಲಿ ದಾಖಲಾಗಿದೆ. ವಿಮಾನವು ಕತಾರ್ ಮೇಲೆ ಹಾರುವಾಗ ಸಂಪರ್ಕ ಕಳೆದುಕೊಂಡಿದೆ. ಸಂಪರ್ಕ ಕಳೆದುಕೊಳ್ಳುವ ಮುನ್ನ ಯುಎಇನಲ್ಲಿರುವ ಅಲ್ ಧಫ್ರಾ ವಾಯುನೆಲೆಯಿಂದ ಅದು ಹಾರಾಟ ನಡೆಸಿತ್ತು. ಇರಾನ್‌ ವಿರುದ್ಧದ ಯುದ್ಧದಲ್ಲಿ ಅಮೆರಿಕ ಸೇನೆಗೆ...
ರಾಜ್ಯಸುದ್ದಿ

ಚೀನಾದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : 21 ಮಂದಿ ದಾರುಣ ಸಾವು, 61 ಜನಕ್ಕೆ ಗಾಯ -ಕಹಳೆ ನ್ಯೂಸ್

ಬೀಜಿಂಗ್: ಚೀನಾದ  ಪ್ರಾಂತ್ಯದ ಲಿಯುಯಾಂಗ್ ನಗರದಲ್ಲಿರುವ ಪಟಾಕಿ ಉತ್ಪಾದನಾ ಘಟಕದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, 21 ಮಂದಿ ದಾರುಣ ಸಾವಿಗೀಡಾಗಿದ್ದಾರೆ. ಹುನಾನ್ ಪ್ರಾಂತ್ಯದ ಲಿಯುಯಾಂಗ್ ನಗರದಲ್ಲಿ ಸೋಮವಾರ (ಮೇ 4) ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ದುರಂತದಲ್ಲಿ 21 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 61 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಚೀನಾ ಅಧ್ಯಕ್ಷ ಜಿನ್‌ಪಿಂಗ್  ತನಿಖೆಗೆ ಆದೇಶಿಸಿದ್ದಾರೆ. ಯುಎಇನಲ್ಲಿ ಡ್ರೋನ್...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕತ್ವಕ್ಕೆ ಎನ್‌ಡಿಎ ಭರ್ಜರಿ ಗೆಲುವು : ಅಭಿನಂದನೆ ಸಲ್ಲಿಸಿದ ಹೆಚ್‌ಡಿಕೆ -ಕಹಳೆ ನ್ಯೂಸ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ವಿಕ್ಷಿತ ಭಾರತದ ಮೇಲೆ ಜನರು ಹೊಂದಿರುವ ನಂಬಿಕೆಯಿಂದಾಗಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ  ಅವರು ಅಭಿನಂದನೆ ಸಲ್ಲಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ಪ್ರಧಾನಿ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ವಿಕ್ಷಿತ ಭಾರತದ ಮೇಲೆ ಜನರು ಹೊಂದಿರುವ ನಂಬಿಕೆಯ...
ರಾಜ್ಯಸುದ್ದಿ

ಪಂಚರಾಜ್ಯ ಚುನಾವಣೆಯಲ್ಲಿ ಹಿಂದೂ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ ಮತದಾರರು: ಸತೀಶ್ ಕುಂಪಲ -ಕಹಳೆ ನ್ಯೂಸ್

ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳು ದೇಶದ ರಾಜಕೀಯ ದಿಕ್ಕನ್ನು ಸ್ಪಷ್ಟವಾಗಿ ತೋರಿಸಿವೆ. ವಿಶೇಷವಾಗಿ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸಿಕೊಂಡು ಬಂದಿದ್ದ ರಾಜಕೀಯ ಪಕ್ಷಗಳಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಪುದುಚೇರಿಯಲ್ಲಿ ಎನ್.ಡಿ.ಎ. ಮೈತ್ರಿ ಆಡಳಿತ ಸ್ಥಾಪನೆಗೆ ಮುನ್ನಡೆಯುತ್ತಿದೆ. ಕೇರಳದಲ್ಲಿಯೂ ಭಾರತೀಯ ಜನತಾ ಪಕ್ಷ ತನ್ನ ಮತಶೇರ್ ಅನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದು, ಅಲ್ಲಿನ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿದೆ. ಈ ಫಲಿತಾಂಶಗಳನ್ನು ಅವಲೋಕಿಸಿದಾಗ,...
1 16 17 18 19 20 299
Page 18 of 299