ಹಾರ್ಟ್ ಅಟ್ಯಾಕ್ ಅಲ್ಲ, ಪತ್ನಿಯಿಂದ ಕೊಲೆ ಎಂದ ಸಹೋದರ: ಹೂತಿಟ್ಟ ಶವ ಹೊರತೆಗೆದು ಮರು ತನಿಖೆ -ಕಹಳೆ ನ್ಯೂಸ್
ಬೆಂಗಳೂರು: ನನ್ನ ಸಹೋದರನ ಸಾವಿಗೆ ಆತನ ಪತ್ನಿಯೇ ಕಾರಣವಾಗಿದ್ದು, ಇದು ಹಾರ್ಡ್ ಅಟ್ಯಾಕ್ ಅಲ್ಲ ಕೊಲೆ ಅಂತಾ ಬಂದ ದೂರು ಆಧರಿಸಿ, ಮರು ತನಿಖೆಗೆ ಇಳಿದ ಪೊಲೀಸರು ಬರೋಬ್ಬರಿ 6 ತಿಂಗಳ ಬಳಿಕ ತಹಶೀಲ್ದಾರ್ ಸಮ್ಮುಖದಲ್ಲಿ ಹೂತಿಟ್ಟ ಶವ ಹೊರತೆಗೆದಿದ್ದಾರೆ. ಬೆಂಗಳೂರು ನಗರದ HAL ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ತಿಂಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದ ಇಂತಿಯಾಜ್ ಪಾಷಾ ಶವವನ್ನು ಇಂದು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸಾವಿನ ಕುರಿತು ಅನುಮಾನ...







