ನಿಮ್ಮ ಮೊಬೈಲ್ಗೆ ಅನಿರೀಕ್ಷಿತ ಮೆಸೇಜ್ ಬಂದ್ರೆ, ಸೈರನ್ ಮೊಳಗಿದ್ರೆ ಭಯಪಡಬೇಡಿ! – ಕಹಳೆ ನ್ಯೂಸ್
ನಿಮ್ಮ ಮೊಬೈಲ್ ಫೋನ್ ಜೋರಾಗಿ ಬೀಪ್ ಮಾಡದರೆ ಅಥವಾ ಅನಿರೀಕ್ಷಿತ ಮೆಸೇಜ್ ಬಂದರೆ ಭಯಪಡಬೇಡಿ. ಅದು ತುರ್ತು ಎಚ್ಚರಿಕೆಯ ಸಂದೇಶ. ಹೊಸ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಸರ್ಕಾರ ಪರೀಕ್ಷಿಸುತ್ತಿದೆ. ಪ್ರಕೃತಿ ವಿಕೋಪ ಬಂದಾಗ ತನ್ನ ನಾಗರಿಕರನ್ನು ರಕ್ಷಿಸಲು ಭಾರತ ತನ್ನದೇ ಆದ ಎಚ್ಚರಿಕೆ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಹೆಸರಿನ ಈ ಸಿಸ್ಟಮ್ ಪ್ರಸ್ತುತ ದೇಶಾದ್ಯಂತ ಪರೀಕ್ಷೆಯಲ್ಲಿದೆ. ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ನಾಗರಿಕರ ಮೊಬೈಲ್ಗಳಿಗೆ ನೇರವಾಗಿ ಸಂದೇಶ ಬಿತ್ತರಿಸುವ...







