Recent Posts

Sunday, June 7, 2026
ಸುದ್ದಿ

ಬಳ್ಳಾರಿಯಲ್ಲಿ ಮಳೆ ಅವಾಂತರ : KEB ಘಟಕಕ್ಕೆ ನುಗ್ಗಿದ ನೀರು, ಇಡೀ ನಗರಕ್ಕೆ ಕರೆಂಟ್‌ ಕಟ್‌ – ಕಹಳೆ ನ್ಯೂಸ್

ಬಳ್ಳಾರಿ: ನಗರದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಹತ್ತಾರು ಅವಾಂತರ ಸೃಷ್ಟಿಯಾಗಿದೆ. ಬಳ್ಳಾರಿ ನಗರದ ತಗ್ಗು ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಜನ ಜಾಗರಣೆ ಮಾಡಿದ್ರೆ, ಹಲವು ಸರ್ಕಾರಿ ಕಚೇರಿಗಳ ಆವರಣ ಕೆರೆಯಂತಾಗಿ, ಪೊಲೀಸ್ ಸಿಬ್ಬಂದಿ ಪರದಾಡಿದ್ದಾರೆ. ಕೆಇಬಿಗೂ (KEB) ನೀರು ನುಗ್ಗಿದ್ದು, ಇಡೀ ಬಳ್ಳಾರಿ ನಗರದ ಜನ ಕತ್ತಲೆಯಲ್ಲಿ ರಾತ್ರಿ ಕಳೆಯುವಂತಾಯಿತು.

ಜಾಹೀರಾತು

ಇನ್ನೂ ಮಳೆಯ ಮತ್ತೊಂದು ದೊಡ್ಡ ಪರಿಣಾಮ ನಗರದ ವಿದ್ಯುತ್ ವ್ಯವಸ್ಥೆಯ ಮೇಲೆ ಬಿದ್ದಿದೆ. ಬಳ್ಳಾರಿ ನಗರದ ಬಹುತೇಕ ಭಾಗಕ್ಕೆ ವಿದ್ಯುತ್ ಪೂರೈಕೆ ಮಾಡುವ ಪ್ರಮುಖ ಕೆಇಬಿ ಕೇಂದ್ರವೇ ಮಳೆ ನೀರಿನಿಂದ ಜಲಾವೃತಗೊಂಡಿದೆ. ಕೇಂದ್ರದೊಳಗಿನ ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ನಿಯಂತ್ರಣ ಯಂತ್ರಗಳು ಸೇರಿದಂತೆ ಹಲವು ಉಪಕರಣಗಳ ಸುತ್ತ ನೀರು ಆವರಿಸಿಕೊಂಡಿದೆ. ಇದು ಅಧಿಕಾರಿಗಳ ಆತಂಕಕ್ಕೂ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಹೊರಹಾಕುವ ಕಾರ್ಯಾಚರಣೆಗೆ ಮುಂದಾದರು. ಶನಿವಾರ ರಾತ್ರಿ 10 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಗೊಂಡಿದ್ದು ರಾತ್ರಿಯಿಡೀ ನೀರು ಹೊರ ಹಾಕಲು ಶ್ರಮಿಸಲಾಯಿತು. ಆದರೂ ಜಲಾವೃತ ಸಮಸ್ಯೆಯಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು.