ಕರೊನಾ ಕರಿಛಾಯೆಯಲ್ಲೂ ಜಗಮಗಿಸಲಿದೆ ಅಯೋಧ್ಯೆ-ಕಹಳೆ ನ್ಯೂಸ್
ಲಕ್ನೋ: ಕರೊನಾ ಕರಿಛಾಯೆ ಮೈಸೂರಿನ ವಿಶ್ವವಿಖ್ಯಾತ ದಸರಾ ಆಚರಣೆಯನ್ನು ಮಂಕಾಗಿಸಿದ್ದರೂ, ಅಯೋಧ್ಯೆಯ ದೀಪೋತ್ಸವ ಈ ಸಲ ಎಂದಿಗಿಂತ ವಿಜೃಂಭಣೆಯಿಂದ ನಡೆಯಲಿದ್ದು, ರಾಮನ ಜನ್ಮಕ್ಷೇತ್ರ ಜಗಮಗಿಸಲಿದೆ. ರಾಮ ಮಂದಿರ ನಿರ್ಮಾಣ ಆರಂಭಗೊಂಡ ಬಳಿಕದ ಮೊದಲ ದೀಪೋತ್ಸವ ಇದಾಗಿರುವುದರಿಂದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಸಲದ ದೀಪೋತ್ಸವವನ್ನು ಎಂದಿಗಿಂತ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಈ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಯೋಗಿ, ದೀಪೋತ್ಸವ ಕುರಿತ ಸಮಗ್ರ ವಿವರ ನೀಡುವಂತೆ ಸಂಸ್ಕೃತಿ...







