Thursday, June 18, 2026

ಸುದ್ದಿ

ಸುದ್ದಿ

ಮಂಗಳೂರು: ಮೀನು ಹಿಡಿಯಲು ಹೋದ ಇಬ್ಬರು ದೋಣಿ ಮಗುಚಿ ನೀರುಪಾಲು, ಓರ್ವ ಪಾರು- ಕಹಳೆ ನ್ಯೂಸ್

ಮಂಗಳೂರು: ಮೀನು ಹಿಡಿಯಲೆಂದು ಫಲ್ಗುಣಿ ನದಿಗೆ ಸಣ್ಣ ದೋಣಿಯಲ್ಲಿ ತೆರಳಿದ್ದ ಮೂವರು ಯುವಕರಲ್ಲಿ ಇಬ್ಬರು ನೀರುಪಾಲಾದ ಘಟನೆ ಕಾವೂರು ಠಾಣಾ ವ್ಯಾಪ್ತಿಯ ಕುಂಜತ್‌ಬೈಲಿನಲ್ಲಿ ನಡೆದಿದೆ. ಕುಂಜತ್‌ಬೈಲ್ ನಿವಾಸಿಗಳಾದ ಗಣೇಶ (28) ಹಾಗೂ ರಾಯಲ್ (27) ಎಂಬವರು ನೀರುಪಾಲಾದವರು. ನಸುಕಿನ ವೇಳೆ 1:30 ಗಂಟೆ ಸುಮಾರಿಗೆ ಮೀನು ಹಿಡಿಯಲೆಂದು ಸಣ್ಣ ದೋಣಿಯಲ್ಲಿ ತೆರಳಿದ್ದರು. ಆದರೆ ನದಿಯ ಮಧ್ಯದಲ್ಲಿದ್ದಾಗ ಮೂವರು ಕೂಡ ದೋಣಿ ಮಗುಚಿ ನೀರಿಗೆ ಬಿದ್ದಿದ್ದು ಈಜಲು ಬಾರದ ಗಣೇಶ್ (28)...
ಸುದ್ದಿ

ಡಾ. ಹೇಮಾವತಿ ವಿ ಹೆಗ್ಡೆ ಯವರ ಹುಟ್ಟುಹಬ್ಬದ ಪ್ರಯುಕ್ತ ಮಾಶಾಸನ ಪಡೆಯುವ ವಾತ್ಸಲ್ಯ ಸದಸ್ಯರಿಗೆ ಹಣ್ಣು ಹಂಪಲು ವಿತರಣೆ- ಕಹಳೆ ನ್ಯೂಸ್

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ವಾಸ್ತಲ್ಯ ಮಾಶಾಸನ ಪಡೆಯುತ್ತಿರುವ 62 ಫಲಾನುಭವಿ ಕುಟುಂಬಗಳಿಗೆ ಡಾ. ಹೇಮಾವತಿ ಹೆಗ್ಡೆಯವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ವಿಟ್ಲ ವಲಯದಲ್ಲಿ ಮಾಶಾಸನ ಪಡೆಯುವ ವಾತ್ಸಲ್ಯ ಸದಸ್ಯರಾದ ಪಾರ್ವತಿ, ವಿಮಲಾ,ಗೌರಿಯವರಿಗೆ ಹಣ್ಣು ಹಂಪಲು ನೀಡಿ ಯೋಗ ಕ್ಷೇಮವನ್ನು ವಿಚಾರಿಸಿದ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ -2 ರ ಜಿಲ್ಲಾ ನಿರ್ದೇಶಕ ಬಾಬು...
ಸುದ್ದಿ

ನರಿಕೊಂಬು ಯುವಕ ಮಂಡಲ (ರಿ ) ಮೊಗರ್ನಾಡು ಇದರ ನೂತನ ಅಧ್ಯಕ್ಷ ರಾಗಿ ಕಿರಣ್. ಎo, ಮರ್ದೋಳಿ ಆಯ್ಕೆ- ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನರಿಕೊಂಬು ಯುವಕ ಮಂಡಲ (ರಿ ) ಮೊಗರ್ನಾಡು ಇದರ 2026-2027ನೇ ನೂತನ ಅಧ್ಯಕ್ಷ ರಾಗಿ ಕಿರಣ್. ಎo, ಮರ್ದೋಳಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ=ಪ್ರವೀಣ್ ಕುಮಾರ್, ಪ್ರದಾನ ಕಾರ್ಯದರ್ಶಿಯಾಗಿ ವಸಂತ ಅಂತರ, ಜೊತೆಕಾರ್ಯದರ್ಶಿಯಾಗಿ ಅಶ್ವಿತ್ ಮೊಗರ್ನಾಡು, ಕೋಶಾ ಧಿಕಾರಿ ಯಾಗಿ ರಂಜಿತ್ ಪಲ್ಲತ್ಮಿಲ್ಲ, ಕ್ರೀಡಾ ಕಾರ್ಯದರ್ಶಿ ಯಾಗಿ ಸುದರ್ಶನ್ ಕುಲಾಲ್ ಆಯ್ಕೆಯಾಗಿದ್ದಾರೆ. ಈ ಸಂದರ್ಭ ದಲ್ಲಿ ಗೌರವ ಅಧ್ಯಕ್ಷರಾದ ಪ್ರಕಾಶ್ ಕುಮಾರ್, ಹಾಗೂ ಯುವಕ...
ಸುದ್ದಿ

ಅಧ್ಯಾಪಕನೊಂದಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ : ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ-

ಚಿತ್ರದುರ್ಗ: ಅಧ್ಯಾಪಕನ ಜೊತೆ ಸಂಬಂಧ ಕಲ್ಪಿಸಿ ಅಪಪ್ರಚಾರ ಹಿನ್ನೆಲೆ ಮನನೊಂದು ಬಿಎಎಂಎಸ್ ವಿದ್ಯಾರ್ಥಿನಿ  ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ  ಜಿಲ್ಲೆ ಹೊಳಲ್ಕೆರೆ ನಗರದ ಬಸವ ಲೇಔಟ್‌ನಲ್ಲಿ ನಡೆದಿದೆ. ನಿಖಿತಾ (23) ನೇಣಿಗೆ ಶರಣಾಗಿರುವ ವಿದ್ಯಾರ್ಥಿನಿ. ಡೆತ್ ನೋಟ್ ಬರೆದಿಟ್ಟು ನಿಖಿತಾ ನೇಣಿಗೆ ಶರಣಾಗಿದ್ದಾಳೆ. ಅಧ್ಯಾಪಕ ಡಾ.ರಾಜು ಜೊತೆ ಸಂಬಂಧ ಕಲ್ಪಿಸಿ ಅಪಪ್ರಚಾರ ಮಾಡುತ್ತಿದ್ದ ಹಿನ್ನೆಲೆ ಡೆತ್‌ನೋಟ್‌ನಲ್ಲಿ ಡಾ.ರಾಜು, ಪತ್ನಿ ನಿಶಾ ಹಾಗೂ ಕೆಲ ವಿದ್ಯಾರ್ಥಿನಿಯರ ಹೆಸರು ಬರೆದಿಟ್ಟು ನಿಖಿತಾ ಆತ್ಮಹತ್ಯೆಗೆ...
ಸುದ್ದಿ

ಚಂದಿರನತ್ತ ಮಾನವ : ಐತಿಹಾಸಿಕ ಆರ್ಟೆಮಿಸ್-II ಮಿಷನ್‌ ಉಡಾವಣೆ ಯಶಸ್ವಿ

ಫ್ಲೋರಿಡಾ: 50 ವರ್ಷಗಳ ಬಳಿಕ ಚಂದಿರನ ಅನ್ವೇಷಣೆಗೆ ಹೊರಟಿರುವ ನಾಸಾ  ಐತಿಹಾಸಿಕ ಆರ್ಟೆಮಿಸ್-ಮಿಷನ್‌ ಉಡಾವಣೆ ಯಶಸ್ವಿಯಾಗಿದೆ. ಅಮೆರಿಕದ ಕಾಲಮಾನ ಬುಧವಾರ ಸಂಜೆ 6:35(ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ4:05) ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳಿದ್ದ ಒರಾಯನ್  ಬಾಹ್ಯಾಕಾಶ ನೌಕೆಯನ್ನು ಅತ್ಯಂತ ಶಕ್ತಿಶಾಲಿ ಸ್ಪೇಸ್ ಲಾಂಚ್ ಸಿಸ್ಟಮ್ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಉಡಾವಣೆಯಾದ ಸುಮಾರು 8.5 ನಿಮಿಷಗಳ ನಂತರ SLS ರಾಕೆಟ್‌ನ ಕೋರ್ ಸ್ಟೇಜ್ (ದೊಡ್ಡ ಕೆಳಭಾಗ) ಬೇರ್ಪಟ್ಟಿತು. ಈ...
ಸುದ್ದಿ

ಟ್ರಂಪ್‌ ಭಾಷಣ ಮುಗಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್‌ ಭಾರೀ ಏರಿಕೆ-

ವಾಷಿಂಗ್ಟನ್‌: ಇರಾನ್‌ ಯುದ್ಧಕ್ಕೆ  ಸಂಬಂಧಿಸಿದಂತೆ ಅಮೆರಿಕದ ಪ್ರಜೆಗಳನ್ನು ಉದ್ದೇಶಿಸಿ ಡೊನಾಲ್ಡ್‌ ಟ್ರಂಪ್‌ ಭಾಷಣ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್‌ ಭಾರೀ ಏರಿಕೆಯಾಗಿದೆ. ಅಮೆರಿಕದ ಕಾಲಮಾನ ಬುಧವಾರ ರಾತ್ರಿ 9 ಗಂಟೆಗೆ(ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 6:30) ಟ್ರಂಪ್‌ ಭಾಷಣ ಮಾಡಿ ಯುದ್ಧ ಇನ್ನು 2-3 ವಾರಗಳ ಮುಂದುವರಿಯಲಿದೆ ಎಂದು ಘೋಷಿಸಿದರು. ಟ್ರಂಪ್‌ ವಿಷಯನ್ನು ಪ್ರಸ್ತಾಪ ಮಾಡುತ್ತಿದ್ದಂತೆ ತೈಲ ರಫ್ತು ಮಾಡುವ ಒಪೆಕ್‌ ರಾಷ್ಟ್ರಗಳ ಬ್ರೆಂಟ್‌ ಕಚ್ಚಾತೈಲದ ಬೆಲೆ...
ಸುದ್ದಿ

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ : ಇಬ್ಬರು ಯುವಕರು ನೀರುಪಾಲು ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಮುಂದುವರೆದ ಶೋಧ ಕಾರ್ಯ- ಕಹಳೆ ನ್ಯೂಸ್

ಮಂಗಳೂರು : ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು ನದಿ ಪಾಲಾದ ದಾರುಣ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಲ್ಗುಣಿ ನದಿಯಲ್ಲಿ ಬುಧವಾರ (ಏ.1) ಮುಂಜಾನೆ ಸಂಭವಿಸಿದೆ. ಕುಂಜತ್‌ಬೈಲ್ ನಿವಾಸಿಗಳಾದ ಗಣೇಶ್ (28), ರಾಯಲ್ (24) ನೀರುಪಾಲಾದ ಯುವಕರು. ಬುಧವಾರ ಮುಂಜಾನೆ ಸುಮಾರು 1:30ರ ವೇಳೆಗೆ ಗಣೇಶ್, ರಾಯಲ್ ಹಾಗೂ ನಿತೇಶ್ ಫಲ್ಗುಣಿ ನದಿಗೆ ಮೀನು ಹಿಡಿಯಲು ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ದೋಣಿ...
ಸುದ್ದಿ

ಮೆಲ್ಕಾರ್ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ: ಹತ್ತಡಿ ದೂರಕ್ಕೆ ಹಾರಿ ಬಿದ್ದ ಮಹಿಳೆ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ- ಕಹಳೆ ನ್ಯೂಸ್

ಮಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯೋರ್ವರಿಗೆ ಕಾರು ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ಮಹಿಳೆ ದೂರಕ್ಕೆ ಹಾರಿ ಬಿದ್ದ ಘಟನೆಯ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ಘಟನೆ ನಡೆದಿದ್ದು ಗಂಭೀರ ಗಾಯಗೊಂಡ ಮಹಿಳೆಯನ್ನು ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂದು ಗುರುತಿಸಲಾಗಿದೆ. ಭಾರತಿ ಅವರು ತನ್ನ ಮಗಳು ದೀಪಶ್ರೀ ಎಂಬವರೊಂದಿಗೆ ಗುಳಿಗಜ್ಜ ಕಟ್ಟೆಗೆ ಕಾಣಿಕೆ ಹಾಕಲೆಂದು ಸಜಿಪಮೂಡಕ್ಕೆ ಬಂದಿದ್ದರು. ಈ...
1 80 81 82 83 84 3,395
Page 82 of 3395