ವಿಟ್ಲದ ಯುವಕ – ಯುವತಿಯರೇ ಇವನ ಫೋಟೋ ಒಮ್ಮೆ ನೋಡಿ..!! ಹುಷಾರಾಗಿರಿ..!! ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲೇ ಮಾದಕವಸ್ತು ಸೇವಿಸಿ ತಿರುಗಾಡುತ್ತಿದ್ದ ಕೊಳ್ನಾಡು ಸಿವಾಸಿ ಮಹಮ್ಮದ್ ಅಸ್ಬೀರ್ ಹೆಡೆಮುರಿಕಟ್ಟಿದ ಪೋಲೀಸರು..!! – ಕಹಳೆ ನ್ಯೂಸ್
ವಿಟ್ಲ : ಮೇ 3 ರಂದು ಮಧ್ಯಾಹ್ನ, ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಬಿ.ಎಸ್. ನಾಯಕ್ ಅವರು ಸಿಬ್ಬಂದಿಗಳೊಂದಿಗೆ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ KA-19-HX-0497 ಸಂಖ್ಯೆಯ ಸ್ಕೂಟರ್ನಲ್ಲಿ ಹೆಲ್ಮೆಟ್ ಧರಿಸದೇ ಬಂದ ಸವಾರನನ್ನು ಪೊಲೀಸರು ತಡೆದರು. ತಪಾಸಣೆ ವೇಳೆ ಆರೋಪಿತನು ಉಪ ನಿರೀಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಅತನ ವರ್ತನೆಯಿಂದ ಮಾದಕವಸ್ತು ಸೇವನೆ ಮಾಡಿರುವ ಬಗ್ಗೆ ಅನುಮಾನಗೊಂಡ ಪೊಲೀಸರು...







