ಮಜಾ ಟಾಕೀಸ್ ಮುಗಿತು ಅಂತ ಚಿಂತೆ ಬಿಡಿ ಇಲ್ಲಿದೆ ನೋಡಿ ಮಜಾಟಾಕೀಸ್ ನ ಹೊಸ ಸುದ್ದಿ..!
ಬೆಂಗಳೂರು : 2015ರ ಫೆಬ್ರವರಿ 7 ರಂದು ಶುರುವಾಗಿದ್ದ ಮಜಾ ಟಾಕೀಸ್ ಸತತ ಎರಡುವರೆ ವರ್ಷ ಕಿರುತೆರೆಯ ವೀಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಕಲರ್ಸ್ ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮವಾಗಿದ್ದ ಮಜಾ ಟಾಕೀಸ್ ಈಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದೆ. ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರೆಲ್ಲಾ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಜಾ ಟಾಕೀಸ್ ಸಿನಿಮಾ ತಂಡದ ಪ್ರಮೋಷನ್ ಗಳಿಗೆ ಒಂದು ಒಳ್ಳೆಯ ವೇದಿಕೆಯೂ ಆಗಿತ್ತು. ಇನ್ನು ಮಜಾ ಟಾಕೀಸ್ ಕಾರ್ಯಕ್ರಮ ಮುಗಿಸುತ್ತಿರುವ...







