Recent Posts

Saturday, April 25, 2026

ಸುದ್ದಿ

ಸುದ್ದಿ

ಹರಿದು ಬಂತು ಜನಸಾಗರ, ಸುಳ್ಯದಲ್ಲಿ ಪರಿವರ್ತನಾ ಯಾತ್ರೆ ಭಾರಿ ಜನಸ್ಪಂದನೆ | ಬಿ.ಎಸ್. ವೈ ಸೇರಿದಂತೆ ರಾಜ್ಯನಾಯಕರು ಭಾಗಿ.

ಸುಳ್ಯ : ಪರಿವರ್ತನಾ ಯಾತ್ರೆಗೆ ಸುಳ್ಯದಲ್ಲಿ ಭಾರಿ ಜನಸ್ಪಂದನೆ ವ್ಯಕ್ತವಾಗಿದೆ. ಸಾವಿರಾರು ಜನ ಕೇಸರಿ ಶಾಲು ಧರಿಸಿ. ಬಿ.ಜೆ.ಪಿ. ಧ್ವಜ ಹಿಡಿಕೊಂಡು ಆಗಮಿಸಿದ್ದು ಯಾತ್ರೆಗೆ ಭವ್ಯ ಮೆರುಗನ್ನು ನೀಡಿದೆ. ಕೇಸರಿ ಪಡೆಯ ಭದ್ರಕೋಟೆಯಾದ ಸುಳ್ಯದಲ್ಲಿ ಮತ್ತೊಮ್ಮೆ ಬಿ.ಜೆ.ಪಿ. ಬೃಹತ್ ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ಬಿ.ಜೆ.ಪಿ. ತನ್ನ ಭಲವನ್ನು ತೋರ್ಪಡಿಸಿದೆ. ಯಾತ್ರೆಯಲ್ಲಿ ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಜೆ, ಶ್ರೀರಾಮುಲು, ನಳೀನ್ ಕುಮಾರ್ ಕಟೀಲು,...
ಸುದ್ದಿ

ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವಿರುದ್ಧ ಬೀದಿಗಿಳಿದ ಬಜರಂಗಿಗಳು | ಪ್ರತಿಭಟನಾಕಾರರ ಬಂಧನ.

ಮಡಿಕೇರಿ : ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡರು ಈ ನಡುವೆ ಹಿಂದೂ ಸಂಘಟನೆ ಮತ್ತು ಪ್ರತಿಭಟನಾ ಕಾರರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಟಿಪ್ಪು ಜಯಂತಿಯ ವಿರುದ್ಧ ದಿಕ್ಕಾರ ಕೂಗುತ್ತ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.ಜೈ ಶ್ರೀ ರಾಮ್ ಘೋಷಣೆ ಕೂಗುತ್ತ ಮುನ್ನುಗ್ಗುತಿದ್ದ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ಕಹಳೆ ನ್ಯೂಸ್ ಗೆ ಲಭಿಸಿದೆ....
ಸುದ್ದಿ

ತುರ್ತು ಪರಿಸ್ಥಿತಿ ಹೇರಿದ ಹೆಣ್ಣಿನ ಕಥೆ | ತನ್ನ ರಾಜಕೀಯ ಮಹತ್ವಾಕಾಂಕ್ಷೆಗೆ 700 ಯೋಧರನ್ನೇ ಬಲಿ ಕೊಟ್ಟಿದ್ದಳು ಇಂದಿರಾಗಾಂಧಿ !

ಇಂದಿರಾಗಾಂಧಿಯ ಮುಠ್ಠಾಳತನಕ್ಕೆ,ರಾಜಕೀಯ ದಾಹಕ್ಕೆ,ವೋಟಿನ ಆಸೆಗಾಗಿ ಸುಮಾರು 700 ಯೋಧರ ಬಲಿದಾನವಾದ ,ಸಹಸ್ರಾರು ಸಂಖ್ಯೆಯ ನಾಗರಿಕರು ಹತ್ಯೆಯಾದ ಧಾರುಣ ಕಥೆಯೇ ಈ ಆಪರೇಷನ್ ಬ್ಲ್ಯೂ ಸ್ಟಾರ್ . ರಾಜಕೀಯ ದೂರದೃಷ್ಟಿಯ ಕೊರತೆಯ ಫಲವಾಗಿ ಭಿಂದ್ರನ್ ವಾಲೆಯಂತ ಬಂಡುಕೋರರು ಹುಟ್ಟಿಕೊಳ್ಳುತ್ತಾರೆ. ಆತ ತನ್ನದೇ ಆದ ಸರ್ಕಾರ ನಡೆಸುವವರೆಗೂ ಬೆಳೆಸಿದ್ದು ಯಾರು ಮತ್ತು ಯಾಕೆ ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ. ಸಿಖ್ ಧರ್ಮದ 5 ಪವಿತ್ರ ಕ್ಷೇತ್ರಗಳಲ್ಲಿ ಸ್ವರ್ಣ ಮಂದಿರ (ಗೋಲ್ಡನ್ ಟೆಂಪಲ್)ಕೂಡಾ ಒಂದು....
ಸುದ್ದಿ

ಟಿಪ್ಪು ಹೆಸರಿನಲ್ಲಿ ರಾಜಕೀಯ | ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ 108/ 110 ಬಾಂಡ್ ವಿಧಿಸಲು ಅವರೇನು ತಪ್ಪು ಮಾಡಿದ್ದಾರೆ ? – ಅಶೋಕ್ ರೈ.

ಪುತ್ತೂರು : ರಾಜ್ಯದಲ್ಲಿ ತೀರ್ವ ಗೊಂದಲಕ್ಕೆ ಕಾರಣವಾದ ಟಿಪ್ಪು ಜಯಂತಿಯ ಆಚರಣೆಯನ್ನು ಖಂಡಿಸಿ ಕಹಳೆ ನ್ಯೂಸ್ ಗೆ ಹೇಳಿಕೆ ನೀಡಿದ ಬಿ.ಜೆ.ಪಿ. ಮುಖಂಡ ಅಶೋಕ್ ರೈ ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಯಾವುದೇ ಮುಸ್ಲಿಮರು ಟಿಪ್ಪು ಜಯಂತಿ ಬೇಕು ಎಂದು ಸರಕಾರಕ್ಕೆ ಕೇಳಿರಲಿಲ್ಲ, ಕೇವಲ ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಲು, ಹಿಂದೂಗಳನ್ನು, ಕ್ರಿಶ್ಚಿಯನ್ನರನ್ನು ನೋಯಿಸುವ ಉದ್ದೇಶದಿಂದ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದ ಅವರು, ಸರಕಾರ ಬಜರಂಗದಳ ಮತ್ತು...
ಸುದ್ದಿ

ಟಿಪ್ಪು ಜಯಂತಿ; ದಕ್ಷಿಣಕನ್ನಡ, ಕೊಡಗು ಬೂದಿ ಮುಚ್ಚಿದ ಕೆಂಡ.

ಬೆಂಗಳೂರು : ಸಾಕಷ್ಟು ವಿರೋಧದ ಮಧ್ಯೆ ರಾಜ್ಯಾದ್ಯಂತ ಇಂದು ಟಿಪ್ಪು ಜಯಂತಿ ನಡೆಯುತ್ತಿದೆ. ಶಕ್ತಿ ಕೇಂದ್ರ ವಿಧಾನಸೌಧ ಸಹಿತ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಟಿಪ್ಪು ಜಯಂತಿ ವಿರೋಧಿಸಿ ಹಿಂದೂಪರ ಸಂಘಟನೆಗಳು ಸಹಿತ ಹಲವು ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇಂದು ಶಾಂತಿಯುತವಾಗಿ ಟಿಪ್ಪು ಜಯಂತಿ ಆಚರಿಸಲು ಮಾತ್ರ...
ಸುದ್ದಿ

ಟಿಪ್ಪು ಜಯಂತಿ ; ಕಾರ್ಯಕರ್ತರಿಗೆ ಸರಕಾರದ ಕಿರುಕುಳ, 108 – 110 ಬಾಂಡ್ | ಬಿ.ಎಸ್.ವೈ. ಗೆ ಹಸಂತಡ್ಕ ಮಾಹಿತಿ, ಬಿಎಸ್.ವೈ. ಕೆಂಡಾಮಂಡಲ.

ಪುತ್ತೂರು : ದಕ್ಷಿಣ ಕನ್ನಡದಲ್ಲಿ ಬಜರಂಗದಳ ಹಾಗು ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಟಿಪ್ಪು ಜಯಂತಿಯ ಪ್ರಯುಕ್ತ 108, 110 ಬಾಂಡ್ ಅನ್ನು ಸರಕಾರ ಪ್ರೇರಿತವಾಗಿ ಅಧಿಕಾರಿಗಳು ಪಡೆಯುತ್ತಿದ್ದು ಆದರ ಬಗ್ಗೆ ಯಡಿಯೂರಪ್ಪನವರು ಪುತ್ತೂರಿಗೆ ಬಂದಾಗ ಬಜರಂಗದಳದ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ, ಬಿ.ಎಸ್.ವೈ ಗೆ ಮಾಹಿತಿ ನೀಡಿ ಕಾರ್ಯಕರ್ತರ ನೋವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಬಿ.ಎಸ್.ವೈ. ಸರಕಾರದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ಕಹಳೆ ನ್ಯೂಸ್ ಗೆ...
ಸುದ್ದಿ

ಕಮ್ಯುನಿಸಂ ಬೆಂಕಿಯಲ್ಲಿ ಹೊತ್ತಿ ಉರಿಯಬೇಕೇ ಕೇರಳ | ಪೇಜಾವರ ಶ್ರೀಗಳಿಂದ ಕೃತಿ ಬಿಡುಗಡೆ.

ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಕಟಿಸಿರುವ ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ. ರೋಹಿಣಾಕ್ಷ್ಯ ಶಿರ್ಲಾಲುರವರು ಬರೆದಿರುವ "ಕಮ್ಯುನಿಸಂ ಬೆಂಕಿಯಲ್ಲಿ ಹೊತ್ತಿ ಉರಿಯಬೇಕೇ ಕೇರಳ" ಕೃತಿಯನ್ನು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ತಿನ ಮುಖಂಡರಾದ ಆದೀಶ್ , ರಮೇಶ್, ರಾಜೀವ್ ಮುತ್ತಿತರರು ಉಪಸ್ಥಿತರಿದ್ದರು....
ಸುದ್ದಿ

ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಯಡಿಯೂರಪ್ಪ | ಮಹಾಲಿಂಗೇಶ್ವರ ದೇವರಲ್ಲಿ ವಿಶೇಷ ಪ್ರಾರ್ಥನೆ.

ಪುತ್ತೂರು : ಹತ್ತೂರ ಒಡೆಯ ಪುತ್ತೂರ ಮಹಾಲಿಂಗೇಶ್ವರನ ಸನ್ನಿಧಿಗೆ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮತನಾಡಿದ ಬಿ.ಎಸ್.ವೈ. ರಾಜ್ಯ ಸರಕಾರದ ಧೋರಣೆಯಿಂದ ಜನರು ರೊಸಿಹೋಗಿದ್ದಾರೆ. ಈ ಭಾರಿಯ ಚುನಾವಣೆಯಲ್ಲಿ ಜನ ಕರ್ನಾಟಕದ ಪರಿವರ್ತನೆಗಾಗಿ ಬಿ.ಜೆ.ಪಿ.ಯನ್ನು ಬೆಂಬಲಿಸಲಿದ್ದಾರೆ. ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದ ಉದ್ದಗಲಗಳಲ್ಲಿ ಸಂಚಾರ ಮಾಡಿ ರಾಜ್ಯದ ಜನರ, ರೈತರ ಸಮಸ್ಯೆ ಶಾಶ್ವಥ ಪರಿಹಾರ...
1 3,306 3,307 3,308 3,309 3,310 3,336
Page 3308 of 3336