ವಿಟಿವಿ ವಿಟ್ಲ ಸಾರಥ್ಯದಲ್ಲಿ “ಜ್ಞಾನದಾಟ – ಮಕ್ಕಳ ಸ್ಪರ್ಧಾ ಕೂಟ” ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ : ವಿಟಿವಿ ಸಂಸ್ಥೆ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಜನರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿದೆ- ಕೃಷ್ಣಯ್ಯ ಬಲ್ಲಾಳ್ – ಕಹಳೆ ನ್ಯೂಸ್
ವಿಟ್ಲ: ವಿಟಿವಿ ವಿಟ್ಲ ಇವರ ಸಾರಥ್ಯದಲ್ಲಿ ಪುಟ್ಟ ಮಕ್ಕಳಲ್ಲಿ ಓದುವಿಕೆಯ ಆಸಕ್ತಿ ಚಿಗುರಿಸುವ ದಿಟ್ಟ ಹೆಜ್ಜೆಗಾಗಿ "ಜ್ಞಾನದಾಟ - ಮಕ್ಕಳ ಸ್ಪರ್ಧಾ ಕೂಟ" ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. "ಜ್ಞಾನದಾಟ - ಮಕ್ಕಳ ಸ್ಪರ್ಧಾ ಕೂಟ" ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ನೈಜ್ಯ-ನಿಖರ-ನಿರ್ಭೀತಿ ಸುದ್ದಿಯನ್ನು ಭಿತ್ತರಿಸಿ ಇಂದು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ತನ್ನದೇ ವಿಭಿನ್ನ ಶೈಲಿಯೊಂದಿಗೆ ಮಾಧ್ಯಮ ರಂಗದಲ್ಲಿ ಹೆಸರುವಾಸಿಯಾದ ವಿಟಿವಿ ವಿಟ್ಲ...







