Friday, June 19, 2026
ಸುದ್ದಿ

ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಗುಂಡಿನ ಸದ್ದು : ಅಪ್ರಾಪ್ತ ಅರೆಸ್ಟ್ -ಕಹಳೆ ನ್ಯೂಸ್

ನ್ಯೂಯಾರ್ಕ್: ಜಗತ್ತಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ನ್ಯೂಯಾರ್ಕ್‌ನ  ಟೈಮ್ಸ್ ಸ್ಕ್ವೇರ್ ರಸ್ತೆಯಲ್ಲಿ ಏಕಾಏಕಿ ಗುಂಡಿನ ಸದ್ದು ಕೇಳಿಬಂದಿದೆ. ಸ್ಥಳೀಯರು ಮತ್ತು ಪ್ರವಾಸಿಗರಿಂದ ಕಿಕ್ಕಿರಿದಿದ್ದ ವೇಳೆ ದಿಢೀರ್ ಗುಂಡಿನ ಶಬ್ದ ಕೇಳಿ ಬಂದಿದ್ದು, ಅಲ್ಲಿದ್ದ ಜನ ಹೆದರಿ ದಿಕ್ಕಾಪಾಲಾಗಿ ಓಡಿದ್ದಾರೆ.
ನ್ಯೂಯಾರ್ಕ್ ನಿಕ್ಸ್ ತಂಡದ ಐತಿಹಾಸಿಕ ಚಾಂಪಿಯನ್‌ಶಿಪ್ ಗೆಲುವಿನ ವಿಜಯೋತ್ಸವ ಮುಕ್ತಾಯಗೊಂಡ ಕೆಲವೇ ಗಂಟೆಗಳಲ್ಲಿ ಘಟನೆ ಸಂಭವಿಸಿದೆ. ತಂಡದ ಗೆಲುವನ್ನು ಸಂಭ್ರಮಿಸುತ್ತಿದ್ದ ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ಭೀಕರ ಗುಂಡಿನ ಸದ್ದು ಕೇಳುತ್ತಿದ್ದಂತೆ ಪ್ರಾಣಭಯದಿಂದ ಸುರಕ್ಷಿತ ಸ್ಥಳಗಳಿಗೆ ಓಡಲಾರಂಭಿಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಗೊಂದಲ ಮತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಭದ್ರತಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನ ನಿಯಂತ್ರಿಸಿದ್ದಾರೆ.

ಜಾಹೀರಾತು
ಜಾಹೀರಾತು

ಘಟನೆಗೆ ಕಾರಣವೇನು?
ಎರಡು ಗುಂಪುಗಳ ನಡುವಿನ ಜಗಳ ಹಿಂಸಾಚಾರಕ್ಕೆ(violence) ತಿರುಗಿದ್ದರಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ಗಲಾಟೆಯ ನಡುವೆ ಯುವಕನೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದೆ. ಅದರ ಬೆನ್ನಲೇ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದ್ದು, ಸ್ಥಳೀಯರಲ್ಲಿ ಕೆಲಹೊತ್ತು ಆತಂಕ ಸೃಷ್ಟಿಯಾಗಿದೆ. ಸ್ಥಳೀಯರು ಘಟನೆಯ ದೃಶ್ಯವನ್ನು ಚಿತ್ರೀಕರಿಸಿದ್ದು, ಅದರಲ್ಲಿ ಕಪ್ಪು ಬಟ್ಟೆ ಧರಿಸಿರುವ ಇಬ್ಬರು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿರುವುದು ಕಂಡುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು 17 ವರ್ಷದ ಅಪ್ರಾಪ್ತನನ್ನ ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ. ಈ ದಾಳಿಯ ಹಿಂದಿನ ನಿಖರ ಕಾರಣ ಅಥವಾ ಉದ್ದೇಶ ಇನ್ನೂ ಕೂಡ ತಿಳಿದುಬಂದಿಲ್ಲ. ಈ ಘಟನೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.