Recent Posts

Friday, June 19, 2026

ಸುದ್ದಿ

ಸುದ್ದಿ

ಭಾರೀ ಹೈಡ್ರಾಮಾ : ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನ ಬಂಧಿಸಲು ಶಿಮ್ಲಾಕ್ಕೆ ತೆರಳಿದ್ದ ದೆಹಲಿ ಪೊಲೀಸರೇ ವಶಕ್ಕೆ-ಕಹಳೆನ್ಯೂಸ್

ನವದೆಹಲಿ/ಶಿಮ್ಲಾ: ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ಎಐ ಇಂಪ್ಯಾಕ್ಟ್‌ ಶೃಂಗ ಸಭೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಬಂಧಿಸಿ, ಕರೆತರುವಾಗ ಭಾರೀ ನಾಟಕೀಯ ಬೆಳವಣಿಗೆ ನಡೆದಿದೆ. ಆರೋಪಿಗಳನ್ನ ಬಂಧಿಸಲು ಹಿಮಾಚಲ ಪ್ರದೇಶದ ಶಿಮ್ಲಾ ತೆರಳಿದ್ದ ದೆಹಲಿ ಪೊಲೀಸರನ್ನೇ ಶಿಮ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಎರಡೂ ಖಾಕಿ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಚರ್ಚೆಗೂ ಗ್ರಾಸವಾಗಿದೆ. ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಏಕಾಂಶ್ ಕಪಿಲ್ ಅವರು ನೀಡಿದ ಟ್ರಾನ್ಸಿಟ್ ರಿಮಾಂಡ್...
ಸುದ್ದಿ

ಸುಳ್ಯ ತಾಲೂಕಿನಾದ್ಯಂತ ಗಾಳಿ-ಮಳೆ : ಹಲವೆಡೆ ಮರಗಳು ಉರುಳಿ ಬಿದ್ದು ಮನೆ ಹಾಗೂ ಕಟ್ಟಡಗಳಿಗೆ ವ್ಯಾಪಕ ಹಾನಿ -ಕಹಳೆನ್ಯೂಸ್

ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಬುಧವಾರ ಸಂಜೆ ಗುಡುಗು ಸಹಿತ ಗಾಳಿ-ಮಳೆಯಾಗಿದ್ದು, ಸುಳ್ಯ ಸಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಉರುಳಿ ಬಿದ್ದು ಮನೆ ಹಾಗೂ ಕಟ್ಟಡಗಳಿಗೆ ಹಾನಿಯುಂಟಾಗಿದೆ. ಸುಳ್ಯ ನಗರ, ಸಂಪಾಜೆ, ಕಲ್ಲುಗುಂಡಿ, ಅರಂತೋಡು, ಬೆಳ್ಳಾರೆ, ಮಂಡೆಕೋಲು, ಅಜ್ಜಾವರ, ಎಲಿಮಲೆ, ದೊಡ್ಡತೋಟ, ಸೋಣಂಗೇರಿ ಮತ್ತು ಪೆರುವಾಜೆ ಪರಿಸರದಲ್ಲಿ ಭಾರೀ ಗಾಳಿ-ಮಳೆ ಸುರಿದಿದೆ. ಸುಳ್ಯದ ಗುರುಂಪು ನಿವಾಸಿ ಮುನೀರ್ ಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು...
ಸುದ್ದಿ

ಕುಂದಾಪುರ: ಮೀನುಗಾರಿಕಾ ಬೋಟ್ ಮುಳುಗಡೆ; ಐವರು ಮೀನುಗಾರರ ರಕ್ಷಣೆ-ಕಹಳೆನ್ಯೂಸ್

ಕುಂದಾಪುರ : ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ಕುಂದಾಪುರ ಮತ್ತು ಗಂಗೊಳ್ಳಿ ನಡುವಿನ ಸಮುದ್ರದಲ್ಲಿ ನೀರು ತುಂಬಿ ಮುಳುಗಡೆಯಾಗಿದೆ. ಈ ಬೋಟ್‌ನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟ್‌ನ ಮೀನುಗಾರರು ರಕ್ಷಿಸಿದ್ದಾರೆ. ಬೋಟ್‌ನಲ್ಲಿದ್ದ ಕುಮಟಾ ಮೂಲದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಮತ್ತು ಶ್ರೀನಿವಾಸ ಎಂಬ ಮೀನುಗಾರರನ್ನು ರಕ್ಷಿಸಲಾಗಿದೆ. ಕೆಮ್ಮಣ್ಣು ನಿವಾಸಿ ನಾಗರಾಜ್ ಪುತ್ರನ್ ಅವರಿಗೆ ಸೇರಿದ ಶ್ರೀ ದುರ್ಗಾಪರಮೇಶ್ವರಿ ಎಂಬ ಹೆಸರಿನ ಬೋಟ್ ಫೆಬ್ರವರಿ 23ರ ರಾತ್ರಿ ಮಲ್ಪೆ...
ಸುದ್ದಿ

ನೇಣು ಬಿಗಿದು ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸೂಸೈಡ್-ಕಹಳೆನ್ಯೂಸ್

ಕೋಲಾರ: ನೇಣು ಬಿಗಿದು ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲ್ಲೂಕು ಖಾದ್ರಿಪುರ ಗ್ರಾಮದಲ್ಲಿ ನಡೆದಿದೆ. ಮೊನೀಶ್ (36) ಆತ್ಮಹತ್ಯೆಗೆ ಶರಣಾದ ಉಪನ್ಯಾಸಕ. ಕೋಲಾರದ ಎಂಜಿನಿಯರಿ0ಗ್ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು. ಎಂದು ತಿಳಿದುಬಂದಿದೆ. ಪತ್ನಿ ವೇದವತಿ ಕೆಲಸಕ್ಕೆ ಹೋಗಿದ್ದ ವೇಳೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  ...
ಸುದ್ದಿ

ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ- 2026 ಗೌರವಕ್ಕೆ ಭಾಜನರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ-ಕಹಳೆ ನ್ಯೂಸ್

ಮಂತ್ರಾಲಯ: ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯ ಪರಮ ಪೂಜ್ಯ ಪೀಠಾಧಿಪತಿಗಳಾದ ಡಾ|| ಪರಮಪೂಜ್ಯ ಶ್ರೀ ಶ್ರೀ ಶ್ರೀ 108 ಶ್ರೀಮತ್ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ವಿಶೇಷವಾಗಿ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಪ್ರತಿಷ್ಠಿತ ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ- 2026ನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ ರವರಿಗೆ ಫೆ 25ರಂದು ಶ್ರೀಮಠದಲ್ಲಿ ನಡೆದ...
ಸುದ್ದಿ

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಇಸ್ರೇಲ್ ಜೊತೆ ಸದಾ ನಿಲ್ಲುತ್ತದೆ: ಮೋದಿ – ಕಹಳೆನ್ಯೂಸ್

ಜೆರುಸಲೆಮ್: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಇಸ್ರೇಲ್ ಜೊತೆ ಸದಾ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಐತಿಹಾಸಿಕ ಇಸ್ರೇಲ್ ಪ್ರವಾಸದ ವೇಳೆ ಅಲ್ಲಿನ ಸಂಸತ್ತಿನ ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 7 ರಂದು ನಡೆದ ಹಮಾಸ್ ದಾಳಿಯನ್ನು ಉಗ್ರರ ರಾಕ್ಷಸ ಕೃತ್ಯ ಅಂತ ಕರೆದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವೆಲ್ಲಾ ಒಂದೇ ಎಂಬ ಖಡಕ್ ಮೆಸೇಜ್ ಪಾಸ್ ಮಾಡಿದ್ದಾರೆ. ನಿಮ್ಮ ನೋವನ್ನು ನಾವು ಅನುಭವಿಸುತ್ತೇವೆ....
ಸುದ್ದಿ

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ ಆಗ್ತಿದೆ: ಡಿಕೆಶಿ -ಕಹಳೆನ್ಯೂಸ್

ಬೆಂಗಳೂರು: ಗ್ಯಾರಂಟಿಗಳು ಸರ್ಕಾರಕ್ಕೆ ಹೊರೆಯಾಗುತ್ತಿವೆ ಎಂದು ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವ್ರೇ ತಿಳಿಸಿದ್ರು. ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಆಂಬುಲೆನ್ಸ್ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 200 ಯೂನಿಟ್‌ ಉಚಿತ ಕರೆಂಟ್‌, ಗೃಹಲಕ್ಷ್ಮಿ, ಫ್ರೀ ಬಸ್‌, ಅನ್ನಭಾಗ್ಯ, ಶಕ್ತಿಯೋಜನೆಯಂತಹ ಗ್ಯಾರಂಟಿಗಳನ್ನ ರಾಜ್ಯ ಸರ್ಕಾರ ಕೊಟ್ಟಿದೆ. ಸರ್ಕಾರಕ್ಕೆ ಇದರಿಂದ ಹೊರೆಯಾಗುತ್ತಿರಬಹುದು, ಆದ್ರೆ ನಿಮಗೆ ಮಾನಸಿಕವಾಗಿ ಧೈರ್ಯ ತುಂಬಲು ಹಾಗೂ ಆರ್ಥಿಕವಾಗಿ ಶಕ್ತಿ ತುಂಬಲು ಇಂತಹ...
ಸುದ್ದಿ

ಇಂದಿನಿಂದ (ಫೆ. 25) ಕೊಂಬೆಟ್ಟು ಪಶುಪತಿ ಎಲೆಕ್ಟ್ರಿಕಲ್ಸ್’ನಲ್ಲಿ ಫ್ಯಾನ್ ಮೇಳ!!- ಕಹಳೆ ನ್ಯೂಸ್

ಪುತ್ತೂರು: ಲೈಟಿಂಗ್ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ಪುತ್ತೂರಿನ ಕೊಂಬೆಟ್ಟಿನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್’ನಲ್ಲಿ ಬುಧವಾರ ಫ್ಯಾನ್ ಮೇಳ ಆರಂಭಗೊಳ್ಳಲಿದೆ. ಫೆ. 25ರಿಂದ ಮಾರ್ಚ್ 10ರವರೆಗೆ ನಡೆಯುವ ಈ ಫ್ಯಾನ್ ಮೇಳದಲ್ಲಿ ಬೆಸ್ಟ್ ಬ್ರ್ಯಾಂಡಿನ ಬೆಸ್ಟ್ ಫ್ಯಾನ್ ಗಳನ್ನು ಬೆಸ್ಟ್ ಪ್ರೈಸಿಗೆ ನಿಮ್ಮದಾಗಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. 900 ರೂ.ನಿಂದ ಆರಂಭಿಕ ಬೆಲೆಯಿಂದ ಪ್ರಾರಂಭವಾಗಿ, 2000 ರೂ.ನಿಂದ ಬಿ.ಎಲ್.ಡಿ.ಸಿ. ಪ್ಯಾನ್ ಗಳ ಬೆಲೆ ಆರಂಭವಾಗುತ್ತಿದೆ. ಮೂರು ವರ್ಷಗಳ ವಾರೆಂಟಿಯನ್ನು ಪುತ್ತೂರಿನ...
1 124 125 126 127 128 3,396
Page 126 of 3396