Monday, September 7, 2026

ಸುದ್ದಿ

ಜಿಲ್ಲೆಸುದ್ದಿ

ನೇಪಾಳ ಪ್ರವಾಹ : ಯುಎಸ್ ಪೌರತ್ವ ಹೊಂದಿರುವ ತುಮಕೂರು ಮೂಲದ ಇಬ್ಬರು ನಾಪತ್ತೆ – ಕಹಳೆ ನ್ಯೂಸ್

ತುಮಕೂರು: ನೇಪಾಳದ ಪ್ರವಾಹದಲ್ಲಿ ಯು.ಎಸ್ ಪೌರತ್ವ ಹೊಂದಿರುವ ತುಮಕೂರು ಮೂಲದ ಇಬ್ಬರು ನಾಪತ್ತೆಯಾಗಿದ್ದಾರೆ. ತುಮಕೂರು ನಗರದ ನೃಪತುಂಗನ ಬಡಾವಣೆಯ ರಂಗುಸುಧೀರ್ (53), ಕೀರ್ತಿ ಆಚಾರ್ಯ (50) ನಾಪತ್ತೆಯಾಗಿದ್ದಾರೆ. ಯು.ಎಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಇವರು ಆಗಸ್ಟ್ 22ರಂದು ಯು.ಎಸ್‌ನಿಂದ 10 ಜನರ ತಂಡ ನೇಪಾಳಕ್ಕೆ ಹೊರಟಿದ್ದರು. 26ರ ಬೆಳಗ್ಗೆ 8:29ರಂದು ಸಂಬಂಧಿ ಗುರುಪ್ರಸಾದ್ ಎನ್ನುವವರಿಗೆ ಕೊನೆ ಕಾಲ್ ಮಾಡಿದ್ದರು. ಅಲ್ಲಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಪರಿಣಾಮ ಅವರ ತುಮಕೂರಿನ ಮನೆಯ ಸದಸ್ಯರಲ್ಲಿ...
ಪುತ್ತೂರುಸುದ್ದಿ

ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಬೆಂಗಳೂರಿನ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ – ಕಹಳೆ ನ್ಯೂಸ್

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಬೆಂಗಳೂರಿನ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಹಲವು ಪದಕಗಳನ್ನು ಗಳಿಸಿದ್ದಾರೆ. ಪರ್ಲಡ್ಕದ ಉಮಾಶಂಕರ್ ನಾಯಕ್ ಕೆ. ಮತ್ತು ರಶ್ಮಿ ಅವರ ಪುತ್ರ, ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ 10ನೇ ತರಗತಿಯ ಲಲನ್ ಯು. ನಾಯಕ್ ಅವರು 400 ಮೀಟರ್ ಫ್ರೀಸ್ಟೈಲ್‌ನಲ್ಲಿ...
ದೆಹಲಿರಾಜ್ಯಸುದ್ದಿ

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16ರ ಬಾಲಕಿ ಮೇಲೆ ಗ್ಯಾಂಗ್ ರೇಪ್ ಆರೋಪ – ಡ್ರೈವರ್, ಕಂಡಕ್ಟರ್ ಬಂಧನ – ಕಹಳೆ ನ್ಯೂಸ್

ನವದೆಹಲಿ: ಉತ್ತರ ಪ್ರದೇಶದ  16 ವರ್ಷದ ಬಾಲಕಿಯ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ  ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಸ್ ಚಾಲಕ ಹಾಗೂ ಕಂಡಕ್ಟರ್‌ರನ್ನು  ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಾಲಕಿಯನ್ನು ಸುಮಾರು 47 ಕಿಲೋಮೀಟರ್ ದೂರ ಕರೆದೊಯ್ದು ಬಳಿಕ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಸಮೀಪದ ರಿಂಗ್ ರೋಡ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಆಗಸ್ಟ್ 4ರ ರಾತ್ರಿ ಕಾಶ್ಮೀರಿ ಗೇಟ್...
ಬೆಂಗಳೂರುರಾಜ್ಯಸುದ್ದಿ

ಬೆಂಗಳೂರಲ್ಲಿ ಬಂಧಿತರಾಗಿದ್ದ 31 ಬಾಂಗ್ಲಾ ಪ್ರಜೆಗಳ ಗಡಿಪಾರು – ಕಹಳೆ ನ್ಯೂಸ್

ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ 31 ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಗಡಿಪಾರು ಮಾಡುತ್ತಿದ್ದಾರೆ. ಬೆಂಗಳೂರಿನ ವಿವಿಧ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬಂಧಿಸಲಾಗಿದ್ದ ಇವರನ್ನು ಬಿಗಿ ಭದ್ರತೆಯೊಂದಿಗೆ ಪಶ್ಚಿಮ ಬಂಗಾಳದ ಗಡಿ ಭಾಗಕ್ಕೆ ಕರೆದೊಯ್ಯಲಾಗುತ್ತಿದೆ. ಬೆಳ್ಳಂಬೆಳಗ್ಗೆಯೇ 31 ಮಂದಿಯನ್ನು ಪೊಲೀಸರು ಬೆಂಗಳೂರಿನ ಎಸ್‌ಎಂವಿಟಿ ರೈಲ್ವೆ ಟರ್ಮಿನಲ್ ಮೂಲಕ ರೈಲಿನಲ್ಲಿ ಕರೆದೊಯ್ದಿದ್ದಾರೆ. ಸುಮಾರು 20 ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಈ ಗಡಿಪಾರು ಪ್ರಕ್ರಿಯೆ ನಡೆಯುತ್ತಿದೆ. ಪೊಲೀಸ್ ಸಿಬ್ಬಂದಿ...
ಸುದ್ದಿ

ಬಾಗಲಕೋಟೆ: ಶೆಡ್‌ಗಳಿಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ; 20 ತಾತ್ಕಾಲಿಕ ನಿವಾಸಗಳು ಸುಟ್ಟು ಭಸ್ಮ – ಕಹಳೆ ನ್ಯೂಸ್

ಬಾಗಲಕೋಟೆ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಾರಾಯಣಪುರ  ಜಲಾಶಯದ ಪ್ರವಾಹ ಸಂತ್ರಸ್ತರ ತಾತ್ಕಾಲಿಕ ಶೆಡ್‌ಗಳು  ಸುಟ್ಟು ಕರಕಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 20ಕ್ಕೂ ಹೆಚ್ಚು ಶೆಡ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶ್ರಾವಣ ಮಾಸದ ಹಿನ್ನೆಲೆ ಸಂತ್ರಸ್ತರು ಪುರಾಣ ಕೇಳಲು ತೆರಳಿದ್ದರು. ಇದೇ ವೇಳೆ ಶೆಡ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪುರಾಣ ಕೇಳಲು ಹೋಗದೆ...
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಸ. ಉ. ಪ್ರಾ ಶಾಲೆ, ಮೈರೋಳ್ತಡ್ಕ, ಬಂದಾರು ಇದರ ಅಮೃತ ಮಹೋತ್ಸವ ದ ಸಲುವಾಗಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ – ಕಹಳೆ ನ್ಯೂಸ್

ಬಂದಾರು : ಸ. ಉ. ಪ್ರಾ ಶಾಲೆ, ಮೈರೋಳ್ತಡ್ಕ, ಬಂದಾರು ಇದರ ಅಮೃತ ಮಹೋತ್ಸವ ದ ಸಲುವಾಗಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ ಆ 30 ರಂದು ನೆರವೇರಿತು. ದೇವರಿಗೆ ದೀಪ ಬೆಳಗಿಸುವುರ ಮೂಲಕ ಪ್ರಾರಂಬಿಸಲಾಯಿತು. ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಗುರುಪ್ರಸಾದ್ ಅವರು ಈ ಕಾರ್ಯಕ್ರಮವನ್ನು ನೆರವೇರಿಸಿದರು. ಅಂಚೆ ವಿಭಾಗ ಪುತ್ತೂರು ಇದರ ಉಪ ಅಧೀಕ್ಷರಾದ ಶ್ರೀ ಮೋಹನ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ನೂರಾರು...
ಜಿಲ್ಲೆದಕ್ಷಿಣ ಕನ್ನಡಸುದ್ದಿ

ರೈಲಿನಲ್ಲಿ ಮಹಿಳೆಯ ಅರೆಬೆತ್ತಲೆ ಶವ ಪತ್ತೆ : ಅತ್ಯಾಚಾರ ಎಸಗಿ ಕೊಲೆ ಶಂಕೆ – ಕಹಳೆ ನ್ಯೂಸ್

ಧಾರವಾಡ: ಸೋಲ್ಲಾಪುರದಿಂದ ಧಾರವಾಡಕ್ಕೆ ಬಂದಿದ್ದ ರೈಲಿನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಕಳೆದ ರಾತ್ರಿ ಮಹಾರಾಷ್ಟ್ರದ ಸೊಲ್ಲಾಪೂರದಿಂದ ಹೊರಟಿದ್ದ ರೈಲು ಬೆಳಗ್ಗೆ ಧಾರವಾಡ ತಲುಪಿತ್ತು. ಈ ರೈಲಿನಲ್ಲಿ ರಾತ್ರಿ ಸಮಯದಲ್ಲಿ ಮಹಿಳೆಯ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ರೈಲ್ವೆ ಸಿಬ್ಬಂದಿ ಬೋಗಿ ಸ್ವಚ್ಛ ಮಾಡಲು ಬಂದಾಗ ಶವ ಸಿಬ್ಬಂದಿ ಕಣ್ಣಿಗೆ ಬಿದ್ದಿದೆ. ಬಳಿಕ ಸಿಬ್ಬಂದಿ ರೇಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಮಹಿಳೆ ಯಾರು ಎಂದು...
ರಾಜ್ಯಸುದ್ದಿ

ದೀರ್ಘಾವಧಿಯ ಯುರೇನಿಯಂ ಒಪ್ಪಂದಕ್ಕೆ ಭಾರತ-ಉಜ್ಬೇಕಿಸ್ತಾನ್ ಸಹಿ – ಕಹಳೆ ನ್ಯೂಸ್

ತಾಷ್ಕೆಂಟ್: ಪ್ರಧಾನಿ ನರೇಂದ್ರ ಮೋದಿ  ಅವರ ಪ್ರಮುಖ ಭೇಟಿ ಯಶಕಂಡಿದೆ. ಭಾರತ ಮತ್ತು ಉಜ್ಬೇಕಿಸ್ತಾನ್   ದೀರ್ಘಾವಧಿಯ ಯುರೇನಿಯಂ ಒಪ್ಪಂದಕ್ಕೆ  ಸಹಿ ಹಾಕಿವೆ. ಭಾರತವು ವರ್ಷಗಳಲ್ಲಿ ತನ್ನ ಅತ್ಯಂತ ಪ್ರಮುಖ ಪರಮಾಣು ಇಂಧನ ವಿಜಯಗಳಲ್ಲಿ ಒಂದಾಗಬಹುದಾದದನ್ನು ಪಡೆದುಕೊಂಡಿದೆ. ಭಾರತ ಮತ್ತು ಉಜ್ಬೇಕಿಸ್ತಾನ್ ದೀರ್ಘಾವಧಿಯ ಯುರೇನಿಯಂ ಪೂರೈಕೆ ವ್ಯವಸ್ಥೆಯನ್ನು ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಭಾನುವಾರ ದೃಢಪಡಿಸಿದ್ದಾರೆ. ಇದು ಭಾರತದ ಪರಮಾಣು ವಿದ್ಯುತ್ ಯೋಜನೆಗಳನ್ನು ದೀರ್ಘಾವಧಿಯವರೆಗೆ ಟ್ರ್ಯಾಕ್‌ನಲ್ಲಿಡಲು ಸಹಾಯ ಮಾಡುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಉಜ್ಬೆಕ್...
1 10 11 12 13 14 3,531
Page 12 of 3531