Saturday, June 27, 2026
ಸುದ್ದಿ

ಸರ್ಕಾರಿ ಪ್ರೌಢಶಾಲೆ ದರೆಗುಡ್ಡೆ ಯಲ್ಲಿ ತಾಲೂಕು ಮಟ್ಟದ ಕಬ್ಬಡ್ಡಿ ಪಂದ್ಯಾಟ – ಕಹಳೆ ನ್ಯೂಸ್

ಮೂಡುಬಿದಿರೆ : ಸರ್ಕಾರಿ ಪ್ರೌಢಶಾಲೆ ದರೆಗುಡ್ಡೆಯಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವು  ಶನಿವಾರ ನಡೆಯಿತು. 

ಜಾಹೀರಾತು


ಈ ಪಂದ್ಯಾಟದ ಉದ್ಘಾಟನೆಯನ್ನು ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ ಶೆಟ್ಟಿ ಬೆಲೊಟ್ಟು ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ನಳಿನಿ , ಪಂಚಾಯತ್ ಸದಸ್ಯ ಸುಭಾಷ್ ಚಂದ್ರ ಚೌಟ, ಮಾಜಿ ಪಂಚಾಯತ್ ಅಧ್ಯಕ್ಷ ಪ್ರದೀಪ ವಾಲ್ಪಾಡಿ , ಶಾಲಾ ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಮಧುರ, ಎಸ್.ಡಿ.ಎಂ .ಸಿ.ಸದಸ್ಯ ಸಮಿತ್ ರಾಜ್ ದರೆಗುಡ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ, ರಾಜಶ್ರೀ, ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ, ನಿತ್ಯಾನಂದ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಪುತ್ರನ್, ಬೋರುಗುಡ್ಡೆ ಕ್ಲಸ್ಟರ್ ಸಿ.ಆರ್. ಪಿ . ಆದರ್ಶ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸುಮಾರು 45 ಕ್ಕೂ ಹೆಚ್ಚು ತಾಲೂಕಿನ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದವು. ಪಂದ್ಯಾಟವು ಶಾಲಾ ಎಸ್.ಡಿ.ಎಂ. ಸಿ , ಶಾಲಾ ಹಿರಿಯ ವಿದ್ಯಾರ್ಥಿಗಳ , ಊರಿನ ವಿದ್ಯಾಭಿಮಾನಿಗಳ ಸಹಕಾರದಿಂದ ನಡೆಯಿತು.