Recent Posts

Saturday, April 25, 2026
ಬಂಟ್ವಾಳಸುದ್ದಿ

ಕೆದಿಲದಲ್ಲಿ ಧರೆ ಕುಸಿತ – ಕೃಷಿ ಭೂಮಿಗೆ ನುಗ್ಗಿದ ನೀರು : ಸ್ಥಳೀಯರಿಂದ ತೆರವು ಕಾರ್ಯಾಚರಣೆ – ಕಹಳೆ ನ್ಯೂಸ್

ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆದಿಲ ಗ್ರಾಮದ ಮುರುವ ಎಂಬಲ್ಲಿ ಧರೆಕುಸಿದು ನೀರು ಹರಿಯುವ ತೋಡಿಗೆ ಬಿದ್ದ ಹಿನ್ನೆಲೆಯಲ್ಲಿ ಕೃಷಿ ಭೂಮಿ ಜಲಾವೃತವಾಗಿದೆ. ಮುರುವ ನಿವಾಸಿ ಮೋನಪ್ಪ ಗೌಡರವರ ಮಾಲಕತ್ವದ ಕೃಷಿ ಭೂಮಿಗೂ ಮಣ್ಣು ಬಿದ್ದಿದೆ. ತೋಡಿಗೆ ಮಣ್ಣು ಬಿದ್ದ ಮರಿಣಾಮ ನೀರು ಕೃಷಿಭೂಮಿಗಳಿಗೆ ನುಗ್ಗಿದೆ. ಇದರಿಂದಾಗಿ ಕೃಷಿ ನಾಶವಾಗಿದೆ. ಸ್ಥಳೀಯ ನಿವಾಸಿಗಳು ಸೇರಿಕೊಂಡು ತೋಡಿಗೆ ಬಿದ್ದಿರುವ ಅಲ್ಪ ಮಣ್ಣು ತೆಗೆದು ನೀರು ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು