Tuesday, September 8, 2026
ಪುತ್ತೂರುಬಂಟ್ವಾಳಸುದ್ದಿ

ಕುಕ್ಕೆರೆಬೆಟ್ಟು ಹೆದ್ದಾರಿಗೆ ಬಿದ್ದ ಮರ – ರಸ್ತೆ ಸಂಚಾರ ಸ್ಥಗಿತ -ಕಹಳೆ ನ್ಯೂಸ್

ವಿಟ್ಲ: ಮಾಣಿ – ಮೈಸೂರು ಹೆದ್ದಾರಿಯ ಮಿತ್ತೂರು ಬಳಿಯ ಕುಕ್ಕೆರಬೆಟ್ಟು ಎಂಬಲ್ಲಿ ಮರಬಿದ್ದ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ಅಲ್ಪ ಹೊತ್ತು ತೊಡಕಾಗಿತ್ತು. ಈ ಬಗ್ಗೆ ಮಾಹಿತಿ ಅರಿತ ಆಸೀಪ್ ಕೆ.ಎಸ್. ಹಾಗೂ ಅಬ್ದುಲ್ ಜಬ್ಬಾರ್ ಅರ್ಶದಿರವರ ನೇತೃತ್ವದ ಎಸ್.ಕೆ.ಎಸ್.ಎಸ್.ಎಪ್ ಸ್ವಯಂ ಸೇವಾ ವಿಭಾಗದ ವಿಖಾಯ ತಂಡದ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಸೇರಿಕೊಂಡು ಮರತೆರವು ಕಾರ್ಯ ನಡೆಸಿದ್ದಾರೆ.ಆ ಬಳಿಕ ವಾಹನ ಸಂಚಾರ ಆರಂಭವಾಯಿತು.

ಜಾಹೀರಾತು

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರು ಮಂಗಳೂರಿಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಕುಕ್ಕೆರೆಬೆಟ್ಟುವಿನಲ್ಲಿ ಘಟನೆಯನ್ನು ಕಂಡು ತಮ್ಮ ವಾಹನದಿಂದ ಇಳಿದು ಬಂದು ಮರ ತೆರವು ಮಾಡುತ್ತಿದ್ದ ತಂಡವನ್ನು ಪ್ರೋತ್ಸಾಹಿಸಿ ತೆರಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು