Recent Posts

Thursday, June 18, 2026
ಕಡಬ

ಕಡಬ ತಾಲೂಕಿನ ಸಾರ್ವಜನಿಕರೇ ಎಚ್ಚರ..?-ಕಹಳೆ ನ್ಯೂಸ್

ಕಡಬ ಪೊಲೀಸ್ ಠಾಣಾ ವತಿಯಿಂದ ಕಡಬ ತಾಲೂಕಿನ ಸಾರ್ವಜನಿಕರ ಬಳಿ ಮನವಿ ಮಾಡಿಕೊಂಡಿದ್ದಾರೆ. ಕಡಬ ತಾಲ್ಲೂಕಿನ ಗ್ರಾಮಗಳ ಸುತ್ತ ಮುತ್ತ ಯಾರೇ ಕಂಬಳಿ ಅಥವಾ ಇತರೆ ಹೊದಿಕೆಗಳನ್ನು ಮಾರಲು ತಮ್ಮ ಮನೆ ಬಳಿ ಬಂದಲ್ಲಿ ಅವರ ಗುರುತಿನ ಚೀಟಿ ಹಾಗೂ ವಿಳಾಸವನ್ನು ಖಾತರಿ ಮಾಡಿಕೊಳ್ಳಬೇಕು. ಏಕೆಂದರೆ ಮಾರುವೇಷದಲ್ಲಿ ಕಂಬಳಿ ಮಾರುವವರಾಗಿ ಬಂದು ತಮ್ಮ ಮನೆಯ ಸಂಪೂರ್ಣ ವಿವರ ತಿಳಿದುಕೊಂಡು, ಮನೆಕಳ್ಳತನ ದರೋಡೆ ಸುಲಿಗೆ ಅತ್ಯಾಚಾರ ಇತ್ಯಾದಿಗಳನ್ನು ರೋಹಿಂಗಿಯ ಇರಾನಿ ಗ್ಯಾಂಗ್ ಎಂಬ ಹೆಸರಿನ ಹೊರ ರಾಜ್ಯಗಳಿಂದ ಬಂದ ಕಳ್ಳರು ಮಾಡುತ್ತಿದ್ದು, ಅವರ ಮೇಲೆ ನಿಗಾ ಇಡಲು ಮಾನ್ಯ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯು ತಿಳಿಸಿರುತ್ತದೆ. ಆದ್ದರಿಂದ ಈ ಮಾಹಿತಿಯನ್ನು ಆದಷ್ಟು ಎಲ್ಲಾ ಸಾರ್ವಜನಿಕರಿಗೆ ಹಂಚಿಕೊಳ್ಳಬೇಕು, ಹೊರ ರಾಜ್ಯದ ಮಾರಾಟಗಾರರ ಬಗ್ಗೆ ಮಾಹಿತಿಯನ್ನು ನಿಮ್ಮ ಬೀಟ್ ಸಿಬ್ಬಂದಿಗಳಿಗೆ ಅಥವಾ ಪೊಲೀಸ್ ಠಾಣೆಗೆ ನೀಡಬೇಕೆಂದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು