85 ವರ್ಷದ ವೃದ್ದರೋರ್ವರು 40 ವರ್ಷದ ವ್ಯಕ್ತಿಯ ಪ್ರಾಣ ಉಳಿಸಲು ತನ್ನ ಪ್ರಾಣ ತ್ಯಾಗ ಮಾಡಿದ ಘಟನೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

85 ವರ್ಷದ ವೃದ್ದರೋರ್ವರು 40 ವರ್ಷದ ವ್ಯಕ್ತಿಯ ಪ್ರಾಣ ಉಳಿಸಲು ತನ್ನ ಪ್ರಾಣ ತ್ಯಾಗ ಮಾಡಿದ ಘಟನೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ನಾರಾಯಣ್ ದಾಭಲ್ಕರ್ ಅವರು ರಾಷ್ಟ್ರೀಯ ಸ್ವಯಂ ಸೇವಕರಾಗಿದ್ದರು. ಇವರು ನಾಗ್ಪುರದಲ್ಲಿ ಚಾಕೋಲೇಟ್ ಚಿಕ್ಕಪ್ಪ ಎಂದೇ ಚಿರಪರಿಚಿತರು. ಅವರನ್ನು ಭೇಟಿ ಮಾಡಲು ಬಂದ ಎಲ್ಲರಿಗೂ ಅವರು ಚಾಕೋಲೇಟ್ ನೀಡಿ ಕಳುಹಿಸುತ್ತಿದ್ದರು.
“ಎಪ್ರಿಲ್ 22ರಂದು ಅವರ ಆಮ್ಲಜನಕದ ಮಟ್ಟ ಕಡಿಮೆಯಾದ ಸಂದರ್ಭ ನಾವು ಅವರನ್ನು ಐಜಿಆರ್ಗೆ ಕರೆದೊಯ್ದೆವು. ಹೆಚ್ಚಿನ ಪ್ರಯತ್ನದ ಬಳಿಕ ನಮಗೆ ಬೆಡ್ ಲಭಿಸಿತು. ಆದರೆ, ಒಂದೆರಡು ಗಂಟೆಗಳ ಬಳಿಕ ಅವರು ಮನೆಗೆ ವಾಪಾಸ್ಸಾದರು. ನನ್ನ ಕೊನೆಯ ಕ್ಷಣಗಳನ್ನು ನಮ್ಮೊಂದಿಗೆ ಕಳೆಯಲು ಆದ್ಯತೆ ನೀಡುವುದಾಗಿ ನನ್ನ ತಂದೆ ಹೇಳಿದರು” ಎಂದು ದಾಭಲ್ಕರ್ ಅವರ ಪುತ್ರಿ ತಿಳಿಸಿದ್ದಾರೆ.