Recent Posts

Friday, September 11, 2026
ಸುದ್ದಿ

ಆಂಧ್ರ ಪೊಲೀಸರಿಂದ ಪುತ್ತೂರು ಯುವಕನ ಬಂಧನ-ಕಹಳೆ ನ್ಯೂಸ್

ಪುತ್ತೂರು: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಗೆ ಮದುವೆಯಾಗುವುದಾಗಿ ವಂಚಿಸಿ, ದೈಹಿಕ ಸಂಬಂಧ ಬೆಳೆಸಿದ್ದಲ್ಲದೆ ಆಕೆಯ ಭಾವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಬೆದರಿಯೊಡ್ಡಿದ್ದಲ್ಲದೆ ದಲಿತ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ನೊಂದ ಯುವತಿಯೊಬ್ಬರು ನೀಡಿದ ದೂರಿನಂತೆ ಆಂಧ್ರಪ್ರದೇಶದ ಪೊಲೀಸರು ಪುತ್ತೂರಿನ ರಾಜಕೀಯ ಪಕ್ಷದ ಮುಖಂಡರೊಬ್ಬರ ಪುತ್ರನನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಮುದ್ದೋಡಿ ನಿವಾಸಿ ಅಬ್ದುಲ್ ಹಮೀದ್ ಸಾಲ್ಮರ ಎಂಬವರ ಪುತ್ರ ಮೊಹಮ್ಮದ್ ಮೊಹಮ್ಮದ್ ಪೈಝಲ್(24ವ) ಎಂಬವರು ಬಂಧಿತ ಆರೋಪಿ. ಅ.4ರಂದು ಸಂಜೆ ಆರೋಪಿಯ ಹುಡುಕಾಟದಲ್ಲಿ ಪುತ್ತೂರಿಗೆ ಬಂದಿದ್ದ ಆಂಧ್ರಪ್ರದೇಶದ ಪೊಲೀಸರು ರಾತ್ರಿ ವೇಳೆ ಆರೋಪಿ ಮೊಹಮ್ಮದ್ ಫೈಝಲ್ ಅವರನ್ನು ಮನೆಯಿಂದ ಬಂಧಿಸಿ ಆಂಧ್ರಪ್ರದೇಶದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.