Recent Posts

Saturday, September 12, 2026
ರಾಷ್ಟ್ರೀಯಸುದ್ದಿ

ರಾಮ ಮಂದಿರ ಭೂಮಿ ಪೂಜೆಗೂ ಮುನ್ನ ಅಡ್ವಾಣಿ ವಿರುದ್ಧದ ಬಾಬ್ರಿ ಮಸೀದಿ ಪ್ರಕರಣ ಇತ್ಯರ್ಥಗೊಳಿಸಿ : ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಆಗ್ರಹ – ಕಹಳೆ ನ್ಯೂಸ್

ನವದೆಹಲಿ: ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ಅವರ ವಿರುದ್ಧ ಇರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಕೈಬಿಡಬೇಕು ಎಂದು ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

ಜಾಹೀರಾತು

ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಒಂದು ವೇಳೆ ಅಡ್ವಾಣಿ, ಜೋಷಿ ಅವರು ಅಯೋಧ್ಯೆಯಲ್ಲಿನ ಕಟ್ಟಡವನ್ನು ಧ್ವಂಸಗೊಳಿಸಿದ್ದರೂ ಅವರು ಮಸೀದಿಯನ್ನು ಧ್ವಂಸಗೊಳಿಸಿಲ್ಲ, ಬದಲಾಗಿ ದೇವಾಲಯವನ್ನು ಪುನರ್ ನಿರ್ಮಾಣಕ್ಕಾಗಿ ಉರುಳಿಸಿದ್ದಾರೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್ ನಲ್ಲಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ಅಯೋಧ್ಯೆಗೆ ಮಂದಿರ ಭೂಮಿ ಪೂಜೆಗೆ ತೆರಳುವುದಕ್ಕೂ ಮುನ್ನ ಅಡ್ವಾಣಿ, ಜೋಷಿ ಅವರ ವಿರುದ್ಧದ ಬಾಬ್ರಿ ಮಸೀದಿ ಧ್ವಂಸ ಎಂಬ ಕ್ಷುಲ್ಲಕ  ಪ್ರಕರಣವನ್ನು ಕೈಬಿಡಬೇಕು ಎಂದು ಸ್ವಾಮಿ ಆಗ್ರಹಿಸಿದ್ದಾರೆ. ಆ.05 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿಂದಂತೆ 250 ಗಣ್ಯರು ಭಾಗಿಯಾಗಲಿದ್ದಾರೆ.