Friday, May 15, 2026
ಸುದ್ದಿ

98,99ನೇಯ ಬಿಜೆಪಿ ಬೂತ್ ಸಮಿತಿ, ಫ್ರೆಂಡ್ಸ್ ಬಳಂತಿಮೊಗರು ಹಾಗೂ ಯುವಕ ಮಂಡಲ ಮೂಡಂಬೈಲು ಸಹಕಾರದೊಂದಿಗೆ ದಿನ ಸಾಮಗ್ರಿ ವಿತರಣೆ ಹಾಗೂ ಮನೆಯ ಮೇಲ್ಛಾವಣಿ ನಿರ್ಮಾಣ-ಕಹಳೆ ನ್ಯೂಸ್

ಪುಣಚ ಗ್ರಾಮದ ಪಂಡಿತಮೂಲೆಯ ನಾರಾಯಣ ನಾಯ್ಕರವರ ಮನೆಯ ಮೇಲ್ಛಾವಣಿ ತೀರಾ ಹದಗೆಟ್ಟ ಸ್ಥಿತಿಯಲ್ಲಿತ್ತು, ಜೋರಾದ ಮಳೆ ಬಂದರೆ ಕುಸಿದು ಬೀಳುವ ಎಲ್ಲಾ ಲಕ್ಷಣವೂ ಇತ್ತು.

ಇವರ ಮಗ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆ ಸೇರಿದ್ದ ಆದರೆ ಲಾಕ್ ಡೌನ್ ನ ಕಾರಣದಿಂದಾಗಿ ಹುಷಾರಾಗದಿದ್ದರು ಡಿಸ್ಚಾರ್ಜ್ ಆದ್ದರಿಂದ ತನ್ನ ಅಕ್ಕನ ಮನೆಯಲ್ಲಿದ್ದಾನೆ. ಇತ್ತ ಕಡೆ ನಾರಾಯಣ ನಾಯ್ಕರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಲಾಕ್ ಡೌನ್ ನಿಂದಾಗಿ ಮನೆಗೆ ಹಿಂತಿರುಗಳು ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲಾ ಮನಗಂಡ ನಮ್ಮ 98,99ನೇಯ ಬಿಜೆಪಿ ಬೂತ್ ಸಮಿತಿ ತನ್ನ ಮುಂದಾಳತ್ವದಲ್ಲಿ ಫ್ರೆಂಡ್ಸ್ ಬಳಂತಿಮೊಗರು ಹಾಗೂ ಯುವಕ ಮಂಡಲ ಮೂಡಂಬೈಲು ಸಹಕಾರದೊಂದಿಗೆ ಅಕ್ಕಿ ಮತ್ತು ಇನ್ನಿತರ ದಿನ ಉಪಯೋಗಿ ವಸ್ತುಗಳನ್ನ ಒದಗಿಸಿ ಹಾಗೆಯೇ ತೀರಾ ಹದಗೆಟ್ಟಿದ್ದ ಅವರ ಮನೆಯ ಮೇಲ್ಛಾವಣಿಯನ್ನ ದಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಅವಿರತ ಶ್ರಮದ ಮೂಲಕ ಹೊಸದಾಗಿ ಮರುನಿರ್ಮಾಣ ಮಾಡಿಕೊಡಲಾಯಿತು.