Sunday, September 13, 2026
ಸುದ್ದಿ

ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಯುವಕ ನಾಪತ್ತೆ-ಕಹಳೆ ನ್ಯೂಸ್

ಪುತ್ತೂರು: ತಾಲೂಕಿನ ಬನ್ನೂರು ಗ್ರಾಮದ ನೆಕ್ಕಿಲು ನಿವಾಸಿ ಗೌರಿ ಎಂಬವರ ಪುತ್ರ ಮಹೇಶ್ ಎಂಬವರು ಮಾ. ೫ ರಿಂದ ನಾಪತ್ತೆಯಾಗಿರುವುದಾಗಿ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.

ಜಾಹೀರಾತು


ಕಳೆದ ಕೆಲವು ತಿಂಗಳ ಹಿಂದೆ ಶಬರಿ ಮಲೆ ದರ್ಶನಕ್ಕೆ ಮಾಲಧಾರಿಯಾಗಿದ್ದ ಮಹೇಶ್ ಶಾಸ್ತçಕ್ಕೆ ವಿರೋಧವಾಗಿ ಮಧ್ಯ ಪಾನವನ್ನು ಸೇವನೆ ಮಾಡುತ್ತಿದ್ದರು. ಇದನ್ನ ಗಮನಿಸಿದ ಸ್ಥಳೀಯರು ಮಾಲಾಧಾರನೆ ಹಾಕುವುದನ್ನು ವಿರೋಧಿಸಿದರು. ಇದರಿಂದ ಮನನೊಂದ ಮಹೇಶ್ ಸರಿಯಾಗಿ ದುಡಿಮೆಯನ್ನು ಮಾಡದೆ ನಷ್ಟ ಅನುಭವಿಸಿ ಮಾನಸಿಕವಾಗಿ ನೊಂದಿದ್ದರು. ಅಯ್ಯಪ್ಪ ವೃತಕ್ಕೆ ಧಕ್ಕೆ ತಂದರೆ ಶಾಪ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಇದೊಂದು ಸೂಕ್ತ ಉದಾಹರಣೆ ಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೃತ್ತಿಯಲ್ಲಿ ಕಾರು ಚಾಲಕರಾಗಿದ್ದ ಮಹೇಶ್ ಮಾ. ೫ ರಂದು ಮನೆಯಿಂದ ಹೊರಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.