
ಕೋಲ್ಕತ: ಪಶ್ಚಿಮ ಬಂಗಾಳದ ಅಸನ್ಸೋಲ್ನ ಸಲಾನ್ಪುರ ಗ್ರಾಮದಲ್ಲಿರುವ ಬಿಜೆಪಿ ಕಚೇರಿ ಭಾನುವಾರ ತಡರಾತ್ರಿ ಸುಟ್ಟು ಭಸ್ಮವಾಗಿದೆ.
ಬಿಜೆಪಿ ಕಚೇರಿ ಬೆಂಕಿಗಾಹುತಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಇದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಕೃತ್ಯ ಎಂದು ಆರೋಪಿಸಿದೆ. ಪೊಲೀಸರು ಘಟನೆ ಬಗ್ಗೆ ಪ್ರಕರಣದ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅಸನ್ಸೋಲ್ನಲ್ಲಿ ಬಿಜೆಪಿ ಕಾರ್ಯಕರ್ತರು ಸಿಎಎ ಪರ ಜಾಗೃತಿ ಜಾಥಾ ನಡೆಸಲು ಮುಂದಾಗಿದ್ದ ವೇಳೆ, ಪೊಲೀಸರು ಅವರನ್ನು ತಡೆದಿದ್ದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ಸಂಘರ್ಷದ ಪರಿಣಾಮ ಇದು ಹೇಳಲಾಗುತ್ತಿದೆ. (ಏಜೆನ್ಸೀಸ್)









