
ಉತ್ತರ ಕರ್ನಾಟಕ ಮೂಲದ ದಂಪತಿಯರಿಬ್ಬರು ಬಸ್ ಸ್ಟ್ಯಾಂಡಿನಲ್ಲಿ ಪರಸ್ಪರ ಕಚ್ಚಾಟ ನಡೆಸುತ್ತಿದ್ರು.
ಈ ವೇಳೆ ಕುಡಿದ ಮತ್ತಿನಲ್ಲಿದ್ದ ಮಗುವಿನ ತಂದೆಯೇ, ತನ್ನ ಗಂಡು ಮಗುವನ್ನು ನೆಲಕ್ಕೆ ಹೊಡೆದಿದ್ದಾನೆ. ಇನ್ನೂ ಅದೃಷ್ಟವಶಾತ್ ಮಗು ಪ್ರಾಣಾಪಾಯಾದಿಂದ ಪಾರಾಗಿದ್ದು, ಘಟನೆ ಕಂಡ ಜನರು ಗುಂಪು ಸೇರಿಕೊಂಡು ಆತನ ಬಗ್ಗೆ ವ್ಯಾಪಕ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು.
ಈ ವೇಳೆ ಅಪರಾಧಿ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದಾರೆ. ಆದ್ರೆ ಸಾರ್ವಜನಿಕರು ಆತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.









