Recent Posts

Sunday, April 26, 2026
ಸುದ್ದಿ

ಫಿಲೋಮಿನಾ ಬಿಸಿಎ ವಿದ್ಯಾರ್ಥಿಗಳಿಗೆ ಸಮಗ್ರ ತಂಡ ಪ್ರಶಸ್ತಿ-ಕಹಳೆ ನ್ಯೂಸ್

ಪುತ್ತೂರು: ಕಾವೇರಿ ಕಾಲೇಜು ಗೋಣಿಕೊಪ್ಪಲ್‍ನಲ್ಲಿ ಜರಗಿದ ಅಂತರ್ ಕಾಲೇಜು ಮಟ್ಟದ ‘ಕಾವೇರಿ ಅಚಿಂತ್ಯ ಟೆಕ್ ಫೆಸ್ಟ್’ ಇದರಲ್ಲಿ ಸಂತ ಫಿಲೋಮಿನಾ ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.


ಈ ಸ್ಪರ್ಧೆಯ ಟ್ರೆಸರ್ ಹಂಟ್ ವಿಭಾಗದಲ್ಲಿ ಭಾಗವಹಿಸಿದ ರಿಚಾ ಜೆವೆಲ್ ಡಿ’ಕೋಷ್ಟ ಮತ್ತು ಶೋಭಿತ್ ಎಸ್ ಪಿ ತಂಡವು ಪ್ರಥಮ ಸ್ಥಾನ, ಪ್ರೊಡಕ್ಟ್ ಲಾಂಚ್ ವಿಭಾಗದಲ್ಲಿ ಭಾಗವಹಿಸಿದ ವಿಶ್ವಜಿತ್ ಕೆ ಎ ಮತ್ತು ಸಾಯಿಲಿ ವಿಠಲ್ ಸುವರ್ಣ ತಂಡವು ಪ್ರಥಮ ಸ್ಥಾನ, ಕೋಡಿಂಗ್ ವಿಭಾಗದಲ್ಲಿ ಭಾಗವಹಿಸಿದ ಮೋಕ್ಷಿತ್ ಮತ್ತು ಇರ್ಷಾದ್ ತಂಡವು ದ್ವಿತೀಯ ಸ್ಥಾನ, ಫೊಟೋಗ್ರಫಿ ವಿಭಾಗದಲ್ಲಿ ಚೈತನ್ಯ ಹಾಗೂ ಕ್ವಿಜ್ ವಿಭಾಗದಲ್ಲಿ ಆಕಾಶ್ ಸಿ ಭಟ್ ಮತ್ತು ವೇಣುಗೋಪಾಲ್ ತಂಡವು ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸ್ಪರ್ಧೆಯಲ್ಲಿ ಬಿಸಿಎ ವಿಭಾಗದ ಸಹಾಯಕ ಪ್ರಧ್ಯಾಪಕ ರಮೇಶ ಕೆ ಇವರು ತಂಡದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ ಎಂದು ಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.