Sunday, June 21, 2026
ಸುದ್ದಿ

ನನ್ನ ಮನೆಯ ಸುತ್ತಲೂ ಸಿಬಿಐ ಛೂ ಬಿಟ್ಟಿದ್ದಾರೆ; ಡಿಕೆಶಿ ಹೇಳಿಕೆ- ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿಕೊಂಡು ನನ್ನ ಮನೆ ಸುತ್ತಲೂ ಕೇಂದ್ರೀಯ ತನಿಖಾ ಸಂಸ್ಥೆ ಛೂ ಬಿಟ್ಟಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.

ಜಾಹೀರಾತು

ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಬಿಐ ಮೇಲೆ ನನಗೆ ನಂಬಿಕೆ ಇದೆ. ಸಿಬಿಐ ತನ್ನ ಗೌರವ ಉಳಿಸಿಕೊಂಡಿದೆ. ಸಿಬಿಐ ಯಾವುದೇ ನೋಟಿಸ್ ನನಗೆ ಕೊಟ್ಟಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಮತ್ತು ಯಡಿಯೂರಪ್ಪ ಸಿಬಿಐ ಅವರಿಗೆ ನನ್ನ ಮನೆ ಸುತ್ತಲೂ ಇರುವಂತೆ ಹೇಳಿದ್ದಾರೆ ಎಂದು ಡಿಕೆಶಿ ತಿಳಿಸಿದ್ದಾರೆ. ರಾಜ್ಯದಲ್ಲಿ ಲೋಕಾಯುಕ್ತ ಎಸಿಬಿ ಇದ್ದರೂ ಸಿಎಂ ಸಿಬಿಐಗೆ ಪತ್ರ ಬರೆದಿದ್ದಾರೆ.

ಎಲ್ಲವನ್ನೂ ಆರ್‍ಟಿಐ ಅಡಿ ದಾಖಲೆ ತೆಗೆದುಕೊಂಡಿದ್ದೇನೆ. ಮಾಧ್ಯಮಗಳ ಮುಂದೆ ಏನೂ ಹೇಳಲ್ಲ. ದಾಖಲೆಗೆ ಹೋಗುವ ಕಡೆ ಎಲ್ಲವನ್ನೂ ಬಹಿರಂಗ ಮಾಡುವುದಾಗಿ ಖಡಕ್ಕಾಗಿ ನುಡಿದಿದ್ದಾರೆ