Saturday, April 25, 2026
ಸುದ್ದಿ

ಇರಾಕ್​ನಲ್ಲಿ 25 ಸಾವಿರ ಭಾರತೀಯರು ಸದ್ಯಕ್ಕೆ ಸುರಕ್ಷಿತ; ಯುದ್ಧ ಶುರುವಾಗುವ ಆತಂಕದಲ್ಲಿ ಜನ-ಕಹಳೆ ನ್ಯೂಸ್

ಬೆಂಗಳೂರು(ಜ.08): ತನ್ನ ದೇಶದ ಮೇಜರ್ ಜನರಲ್ ಖಾಸಿಮ್ ಸುಲೇಮಾನಿ ಹತ್ಯೆಗೈದ ಅಮೆರಿಕದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನ್​​ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿದೆ.

ರಾಜಧಾನಿ ಬಾದ್ದಾದ್​​ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಇರಾನ್​​ ದಾಳಿ ನಡೆಸಿರುವುದೀಗ ಮೂರನೇ ಮಹಾಯುದ್ಧ ನಡೆಯಲಿದೆ ಎನ್ನುವ ಮಾತುಗಳಿಗೆ ಮತ್ತಷ್ಟು ನೀಡಿದೆ. ಈ ಎರಡು ದೇಶಗಳ ನಡುವಿನ ಸಂಘರ್ಷವೂ ಇರಾನ್​​ನಲ್ಲಿ ನೆಲೆಸಿರುವ ಭಾರತೀಯರಿಗೆ ಆತಂಕ ಮೂಡಿಸಿದೆ. ಭಾರತ ಮೂಲದ ಯುಎನ್ ರಾಯಭಾರಿ(ಹೆಸರು ಹೇಳಲು ಇಚ್ಛಿಸದ) ಪ್ರಕಾರ, ಇರಾನ್​​ನಲ್ಲಿ ನೆಲೆಸಿರುವ ಭಾರತೀಯರಿಗೆ ಯಾವುದೇ ತೊಂದರೆಯಿಲ್ಲ ಎಂದು ತಿಳಿದು ಬಂದಿದೆ. ಇರಾನ್​​ನ ಮೂಲಸೌಕರ್ಯ ಮತ್ತು ತೈಲ ವಲಯದಲ್ಲಿ ಸುಮಾರು 25 ಸಾವಿರ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಇರಾನ್​​ನ ಕುರ್ದಿಸ್ತಾನ್​ ರಾಜಧಾನಿ ಎರ್ಬಿಲ್​​ನಲ್ಲೇ ಹೆಚ್ಚು ಭಾರತೀಯರು ನೆಲೆಸಿದ್ದು, ವ್ಯಾಪರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುತೇಕರು ಸಣ್ಣ ಉದ್ದಿಮೆಗಳಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದ ಬಹುತೇಕ ಕೌಶಲ್ಯರಹಿತ ಕಾರ್ಮಿಕರು ಇರಾನ್​​​ನ ಬಾದ್ದಾದ್ ಮತ್ತು ಬಸ್ರಾ ಪ್ರಾಂತ್ಯದಲ್ಲಿ ಮೂಲಸೌಕರ್ಯ ಮತ್ತು ತೈಲ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಇರಾನ್​​ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಬಿಗಡಾಯಿಸಿದೆ. ಭಾರತೀಯರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಖಾತ್ರಿಪಡಿಸುತ್ತೇನೆ. ಖುದ್ದು ನಾನೇ ಇರಾನ್​​ನ ಭಾರತದ ರಾಯಭಾರಿಯಿಂದ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅಮೆರಿಕದಲ್ಲೂ ಇದೇ ಪರಿಸ್ಥಿತಿ ಇದೆ ಎಂದು ನ್ಯೂಸ್​​​-18ಗೆ ಭಾರತ ಮೂಲದ ಯುಎನ್ ರಾಯಭಾರಿ ಫೋನ್​​ ಮೂಲಕ ಮಾಹಿತಿ ನೀಡಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಇರಾನ್​​ಗೆ ಭಾರತೀಯರನ್ನು ಕಳಿಸಬೇಡಿ ಎಂದು ಭಾರತದ ರಾಯಭಾರಿಗೆ ಯುನ್​​ ಅನಧಿಕೃತ ಸಲಹೆ ನೀಡಿದೆ. ಅಲ್ಲದೇ ಇಲ್ಲಿನ ಪರಿಸ್ಥಿತಿ ಅವಲೋಕಿಸುತ್ತಿದ್ದು, ಶೀಘ್ರದಲ್ಲೇ ಒಂದು ನಿರ್ಧಾರಕ್ಕೆ ಬರುವುದಾಗಿಯೂ ಯುಎನ್​​ ತಿಳಿಸಿದೆ. ಯುಎನ್​ ರಾಯಭಾರಿ ಪ್ರಕಾರ, ತೈಲ ವಲಯದಲ್ಲಿರುವ ಉತ್ತಮ ಸಂಬಳದ ನೌಕರರನ್ನು ಹೊರತುಪಡಿಸಿ ಉಳಿದವರೆಲ್ಲರೂ ಅರೆಕೌಶಲ್ಯ ಮತ್ತು ಕೌಶಲ್ಯರಹಿತ ಕಾರ್ಮಿಕರು ಆಗಿದ್ದಾರೆ.

ಎಬ್ರಿಲ್​​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಈ ಪೈಕಿ ಕೆಲವರು ಆಮದು ಮತ್ತು ರಫ್ತು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕುರ್ದಿಸ್ತಾನ್ ಸುರಕ್ಷಿತ ಸ್ಥಳ, ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಎಬ್ರಿಲ್​​ನಲ್ಲಿ ಮಾತ್ರ ಹೆಚ್ಚಿನ ದಾಳಿಗಳು ನಡೆಯುತ್ತವೆ. ಹಾಗಾಗಿ ಇಲ್ಲಿನ ಭಾರತೀಯರಿಗೆ ಸಹಜವಾಗಿ ಆಂತಕ ಸೃಷ್ಟಿಸಿಯಾಗಿದೆ ಎಂದರು ಯುಎನ್​​​ ರಾಯಭಾರಿ.

2014ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಯಂಡ್ ಸಿರಿಯಾ (ಐಸಿಸ್) ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿದ್ದ 40 ಭಾರತೀಯರು ಹತ್ಯೆಗೀಡಾಗಿದ್ದರು. 40 ಭಾರತೀಯ ಕಾರ್ಮಿಕರು ಇರಾಕ್​​ನ ಮೊಸುಲ್​​​ನಲ್ಲಿ ಹತ್ಯೆಗೀಡಾದ ಬಳಿಕ ಅಂತಹ ಯಾವುದೇ ದುರಂತ ಇಲ್ಲಿಯವರೆಗೂ ಸಂಭವಿಸಿಲ್ಲ. ಆದರೀಗ ಒಂದು ವೇಳೆ ಅಮೆರಿಕ ಮತ್ತು ಇರಾನ್​​ ನಡುವಿ ಸಂಘರ್ಷವೂ ಮತ್ತಷ್ಟು ತಾರಕಕ್ಕೇರಿದರೆ, ಐಸಿಸ್​​ ಮತ್ತೆ ವಾಪಸ್ಸು ಬರಬಹುದು. ಇಂತಹ ಅನಾಹುತಗಳು ಮರುಕಳಿಸಬಹುದು ಎಂದರೆ ಅತಿಶಯೋಕ್ತಿಯಾಗಲಾರದು.

ಇರಾನ್​​ನಲ್ಲಿ ಮತ್ತೆ ಸಂಘರ್ಷ ಶುರುವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಜನವರಿ 7ನೇ ತಾರೀಕು ಸಂಜೆ 5.30ರ ಸುಮಾರಿಗೆ ಇರಾನ್​ 12ಕ್ಕೂ ಹೆಚ್ಚು ಮಿಸೈಲ್​ಗಳನ್ನು ಹಾರಿಸಿದೆ. ಇರಾನ್​​ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಸದ್ಯ ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ದ ಪರಿಸ್ಥಿತಿ ಬಿಗಡಾಯಿಸಿದ್ದು, ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಎಬ್ರಿಲ್​​​​​ ಸದ್ಯ ಸುರಕ್ಷಿತ ಸ್ಥಳ ಎಂದೇಳಲಾಗುತ್ತಿದೆ. ಆದರೂ, ಈ ಸ್ಥಳಗಳನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ ಎಂದು ಇರಾನ್​​ ತನ್ನ ಇಸ್ಲಾಮಿಕ್​​ ರೆವಲೂಷನರಿ ಗಾರ್ಡ್ಸ್ ಕಾರ್ಪ್ಸ್​​​(ಐಆರ್​​ಜಿಸಿ) ಮೂಲಕ ಹೇಳಿಕೆ ಬಿಡುಗಡೆ ಮಾಡಿದೆ. ಸದ್ಯ ಸಂಘರ್ವವೂ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆಯಿದ್ದು, ಏನು ಬೇಕಾದರೂ ಆಗಬಹುದು ಎಂದು ಯುಎನ್​​ ರಾಯಭಾರಿ ಆತಂಕ ವ್ಯಕ್ತಪಡಿಸಿದ್ಧಾರೆ.