BREAKING NEWS:ಇರಾನ್ ವಿಮಾನ ಪತನ ದುರಂತ : 180 ಪ್ರಯಾಣಿಕರೂ ಸಾವು

180 ಪ್ರಯಾಣಿಕರಿದ್ದ ಉಕ್ರೇನ್ ನ ಬೋಯಿಂಗ್ 737 ವಿಮಾನ ಪತನವಾಗಿರುವ ಘಟನೆ ಇರಾನ್ ನ ಟೆಹರಾನ್ ಬಳಿ ನಡೆದಿದೆ.
ಇರಾನ್ ಟೆಹರಾನ್ ಇಮಾಮ್ ಕೋಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್‌ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ ಎನ್ನಲಾಗಿದ್ದು, ಎಲ್ಲಾ 180 ಪ್ರಯಾಣಿಕರೂ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತಾಂತ್ರಿಕ ಸಮಸ್ಯೆಯಿಂದ ಬೋಯಿಂಗ್ 737 ವಿಮಾನ ಪತನವಾಗಿದ್ದು, ಈ ವಿಮಾನದಲ್ಲಿ 180 ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ.









