ಹೊಸವರ್ಷದಂದು ಜಮ್ಮುಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: 2 ಯೋಧರು ಹುತಾತ್ಮ, ಮುಂದುವರೆದ ಕಾರ್ಯಾಚರಣೆ -ಕಹಳೆ ನ್ಯೂಸ್
ಶ್ರೀನಗರ: ಹೊಸವರ್ಷದ ದಿನದಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಉಗ್ರರ ದಾಳಿಗೆ ಇಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ರಜೌರಿ ಜಿಲ್ಲೆಯ ನೌಶೆರಾದಲ್ಲಿ ಬುಧವಾರ ನಡೆದಿದೆ.

ನೌಶೆರಾ ದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಮಾಹಿತಿ ತಿಳಿದಿದ್ದ ಸೇನಾಪಡೆಗಳು ಕಾರ್ಯಾಚರಣೆಗಿಳಿದಿದ್ದವು. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಇಬ್ಬರು ಭಾರತೀಯ ಯೋಧರು ವೀರಮರವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 250 ಉಗ್ರರು ಸಕ್ರಿಯರಾಗಿದ್ದು, ಇದರಲ್ಲಿ 100 ಮಂದಿ ವಿದೇಶಿಗರು ಹಾಗೂ ಇನ್ನುಳಿದವರು ಸ್ಥಳೀಯರಾಗಿದ್ದಾರೆಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ ಬಾಘ್ ಸಿಂಗ್ ಅವರು ಹೇಳಿದ್ದಾರೆ.









