Recent Posts

Saturday, September 12, 2026
ಬೆಂಗಳೂರುರಾಜ್ಯಸುದ್ದಿ

ಯುವಕರು ಮೋದಿ ಮೇಲೆ ವಿಶ್ವಾಸ ‌ಇಟ್ಟಿದ್ದಾರೆ, ಪ್ರಧಾನಿಗಳ ಮಾತು ಸಮಾಧಾನ ತಂದಿದೆ: ಸುನೀಲ್‌ ಕುಮಾರ್‌ – ಕಹಳೆ ನ್ಯೂಸ್

ಬೆಂಗಳೂರು: ನೀಟ್ ಅಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ  ಅವರ ಮಾತು ಸಮಾಧಾನ ತಂದಿದೆ ಅಂತ ಮಾಜಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಜಾಹೀರಾತು

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನೀಟ್ ಪೇಪರ್ ಸೋರಿಕೆ ಬಗ್ಗೆ ವಿದ್ಯಾರ್ಥಿಗಳ ಆಕ್ರೋಶ ಎದ್ದಿತ್ತು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರು ಪೂರಕವಾದ ಸ್ಪಂದನೆ‌ ನೀಡಿದ್ದಾರೆ. ಕೂಡಲೇ ನೀಟ್ ಹಗರಣ ತನಿಖೆಗೆ ಸರ್ಕಾರ ಮಾಡ್ತು. ಮರು ಪರೀಕ್ಷೆ ಮಾಡಿದೆ. ಯಶಸ್ವಿಯಾಗಿ ಫಲಿತಾಂಶ ‌ಕೊಟ್ಟಿದೆ. ಈಗ ಪ್ರಧಾನಿಗಳು ಫಾಸ್ಟ್‌ಟ್ರ್ಯಾಕ್‌ ಕೋರ್ಟ್ ಮಾಡೋದಾಗಿ ಘೋಷಣೆ ಮಾಡಿದ್ರು. ಆರೋಪಿಗಳ ವಿರುದ್ದ ಕಠಿಣ ಕ್ರಮದ ಭರವಸೆ ನೀಡಿರೋದು ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿ ಅವರ ಮಾತು ವಿದ್ಯಾರ್ಥಿಗಳಿಗೆ  ಸಮಾಧಾನ ತಂದಿದೆ. ವಿದ್ಯಾರ್ಥಿಗಳು ಹೋರಾಟ ಮಾಡೋದು ಸರಿ. ಆದರೆ ಇದರ ಲಾಭ ವಿಪಕ್ಷಗಳು ಪಡೆಯೋದಕ್ಕೆ ಮುಂದಾಗಿದೆ. ಪ್ರಧಾನಿಗಳೇ ಹೇಳಿಕೆ, ‌ಪರಿಹಾರ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಪೂರಕವಾಗಿ ಸ್ಪಂದಿಸಬೇಕು. ಯುವಕರು ಮೋದಿ ಮೇಲೆ ವಿಶ್ವಾಸ ‌ಇಟ್ಟಿದ್ದಾರೆ. ಈಗಾಗಲೇ ಹಲವು ‌ಕ್ರಮ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಯಾವುದೇ ಪರೀಕ್ಷೆಗಳು ಸೋರಿಕೆ ಆಗದಂತೆ ನಾವು ಕ್ರಮ ತೆಗೆದುಕೊಳ್ಳಬೇಕು. ಗಂಭೀರವಾಗಿ ತೆಗೆದುಕೊಂಡು ಶಾಶ್ವತ ಪರಿಣಾಮ ತೆಗೆದುಕೊಳ್ಳಬೇಕು ಅಂತ ಕರೆ ನೀಡಿದ್ದಾರೆ.