Recent Posts

Saturday, September 12, 2026
ದೆಹಲಿರಾಜ್ಯಸುದ್ದಿ

ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚಲು ಎಐ, ಫೇಶಿಯಲ್ ರೆಕಗ್ನಿಷನ್ ಮೊರೆ ಹೋದ ಪೊಲೀಸರು – ಕಹಳೆ ನ್ಯೂಸ್

ನವದೆಹಲಿ: ಬುಧವಾರ ರಾತ್ರಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಲು ದೆಹಲಿ ಪೊಲೀಸರು  ಮುಖ ಗುರುತಿಸುವ ತಂತ್ರಜ್ಞಾನ   ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ಉಪಕರಣಗಳನ್ನು ಬಳಸಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಜಾಹೀರಾತು

ಹಿಂಸಾಚಾರದ ವೇಳೆ ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯನ್ನು ಅಟ್ಟಾಡಿಸಿ, ಹಲ್ಲೆ ನಡೆಸಿ, ಅವರ ಲಾಠಿಗಳನ್ನು ಕಸಿದುಕೊಳ್ಳುತ್ತಿರುವ ಹಲವು ವೀಡಿಯೊಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇದುವರೆಗೆ ಒಟ್ಟು 11 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ನವದೆಹಲಿ ಡಿಸಿಪಿ ಸಚಿನ್ ಶರ್ಮಾ ನೀಡಿದ ಮಾಹಿತಿ ಪ್ರಕಾರ, ಕೊಲೆ ಯತ್ನ, ದರೋಡೆ, ಸರ್ಕಾರಿ ಕರ್ತವ್ಯಕ್ಕೆ ಅಡಚಣೆ, ಗಲಭೆ ಮತ್ತು ಅನಧಿಕೃತವಾಗಿ ಗುಂಪುಗೂಡುವುದು ಸೇರಿದಂತೆ ಹಲವು ಗಂಭೀರ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರು ಇದುವರೆಗೆ ಸುಮಾರು 80 ಕ್ಕೂ ಹೆಚ್ಚು ವೀಡಿಯೊ ತುಣುಕುಗಳನ್ನು ಸಂಗ್ರಹಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ರೆಕಾರ್ಡಿಂಗ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳನ್ನು ಎಐ (AI) ಮತ್ತು ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್‌ಗಳ ಮೂಲಕ ತೀವ್ರವಾಗಿ ವಿಶ್ಲೇಷಿಸಿ, ಹಿಂಸಾಚಾರ ಮತ್ತು ಆಸ್ತಿಪಾಸ್ತಿ ಹಾನಿ ಮಾಡಿದ ಆರೋಪಿಗಳನ್ನು ಗುರುತಿಸಲಾಗುತ್ತಿದೆ.

ದೆಹಲಿ ಪೊಲೀಸರು ಪ್ರಸ್ತುತ ದೇಶದ ಅತ್ಯಂತ ದೊಡ್ಡ ಕೃತಕ ಬುದ್ಧಿಮತ್ತೆ (AI) ಚಾಲಿತ ಸಾರ್ವಜನಿಕ ಕಣ್ಣಾವಲು (Surveillance) ಜಾಲವನ್ನು ನಿರ್ವಹಿಸುತ್ತಿದ್ದಾರೆ. ಇಂಟರ್ನೆಟ್ ಫ್ರೀಡಮ್ ಫೌಂಡೇಶನ್ (IFF) ನೀಡಿದ ಮಾಹಿತಿಯಂತೆ, ಈ ಜಾಲದಲ್ಲಿ ಸುಮಾರು 25 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಸಂಯೋಜಿಸಲಾಗಿದೆ. ಇದರಲ್ಲಿ ‘ಸೇಫ್ ಸಿಟಿ ಪ್ರಾಜೆಕ್ಟ್’ ಅಡಿಯಲ್ಲಿ ಅಳವಡಿಸಲಾದ ಕ್ಯಾಮೆರಾಗಳು, ದೆಹಲಿ ಮೆಟ್ರೋ (DMRC) ಮತ್ತು ಭಾರತೀಯ ರೈಲ್ವೆ ನಿರ್ವಹಿಸುವ ಕ್ಯಾಮೆರಾಗಳೂ ಸೇರಿವೆ.

ನೆಟ್‌ವರ್ಕ್ ಆರಂಭವಾಗಿದ್ದು ಯಾವಾಗ?
ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಯೋಜನೆಯ ನೂತನ ಹಂತವನ್ನು ಉದ್ಘಾಟಿಸಿದರು. ದೆಹಲಿ ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ಕೇಂದ್ರವು ನಗರದ ಜಿಲ್ಲಾ ಮತ್ತು ಪೊಲೀಸ್ ಠಾಣೆ ಮಟ್ಟದ ಕಮಾಂಡ್ ಸೆಂಟರ್‌ಗಳನ್ನು ಸಂಪರ್ಕಿಸುತ್ತದೆ.

ಯೋಜನೆ ಪ್ರಾರಂಭವಾದಾಗ 2000 AI ಆಧಾರಿತ ಕ್ಯಾಮೆರಾಗಳು ಕಾರ್ಯಾಚರಣೆಗೆ ಬಂದಿದ್ದವು. ಮೊದಲ ಹಂತದಲ್ಲಿ 15 ಸಾವಿರ ಹಳೆಯ ಕ್ಯಾಮೆರಾಗಳ ಜೊತೆಗೆ 10 ಸಾವಿರ ಹೊಸ ಕ್ಯಾಮೆರಾಗಳನ್ನು ಸೇರಿಸಲು ಯೋಜಿಸಲಾಗಿದೆ.

ಈ ಸಿಸ್ಟಮ್ ಮುಖ ಗುರುತಿಸುವಿಕೆ (Facial Detection), ವಾಹನ ನೋಂದಣಿ ಸಂಖ್ಯೆ ಪತ್ತೆ (ANPR), ಕೈ ಸನ್ನೆ ಗುರುತಿಸುವಿಕೆ ಮತ್ತು ಜನದಟ್ಟಣೆ ಮೇಲ್ವಿಚಾರಣೆ ಮುಂತಾದ ಸುಧಾರಿತ AI ವೈಶಿಷ್ಟ್ಯಗಳನ್ನು ಹೊಂದಿದೆ. ಈ ವ್ಯವಸ್ಥೆಯಲ್ಲಿ3.50 ಲಕ್ಷ ಅಪರಾಧ ದಾಖಲೆಗಳಿದ್ದು, ಕೇವಲ 200 ಮಿಲಿ ಸೆಕೆಂಡುಗಳಲ್ಲಿ ಸುಮಾರು ೧೦ ಲಕ್ಷ ದಾಖಲೆಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹೊಂದಿದೆ.

ಪೊಲೀಸರು 1.5 ಲಕ್ಷಕ್ಕೂ ಹೆಚ್ಚು ರೌಡಿ ಶೀಟರ್‌ಗಳು, 2 ಸಾವಿರಕ್ಕೂ ಹೆಚ್ಚು ಭಯೋತ್ಪದನಾ ಶಂಕಿತರು, ಪ್ರತಿಭಟನೆಗಳ ವೀಡಿಯೊಗಳಿಂದ ಸಂಗ್ರಹಿಸಿದ ಗಲಭೆಕೋರರು ಮತ್ತು ಕಿಡಿಗೇಡಿಗಳ ಪಟ್ಟಿಯನ್ನು ತಯಾರಿಸಿದ್ದಾರೆ.