ವಿಜಯಪುರದ ಜಿಲ್ಲಾಡಳಿತ ಕಚೇರಿ ಸಮೀಪದ ಕರೀಮುದ್ದೀನ್ ಮಸೀದಿ ಬಳಿಯ ಪಾರ್ಕ್ ನಲ್ಲಿ ಬೆಳ್ಳಂಬೆಳಗ್ಗೆ ವಾಯು ವಿಹಾರಕ್ಕೆ ಹೋದವರಿಗೆ ಶಾಕ್ ಆಗಿದೆ.

ಯುವಕನೊಬ್ಬ ಹೊಸ ವರ್ಷದ ಮೊದಲ ದಿನವೇ ಬೆತ್ತಲಾಗಿ ಓಡಾಡಿ ಮುಜುಗರ ಉಂಟು ಮಾಡಿದ್ದಾನೆ. ಹೊಸ ವರ್ಷದ ಮೊದಲ ದಿನ ಬೆಳಿಗ್ಗೆ ಎಂದಿನಂತೆ ಜನರು ವಾಕಿಂಗ್ ಮಾಡಲು ಹೋಗಿದ್ದಾರೆ. ಈ ವೇಳೆ ಯುವಕನೊಬ್ಬ ಬೆತ್ತಲಾಗಿ ಓಡಾಡಿ ಮುಜುಗರ ಉಂಟುಮಾಡಿದ್ದಾನೆ. ಬಟ್ಟೆ ಹಾಕಿಕೊಳ್ಳುವಂತೆ ಕೆಲವರು ಹೇಳಿದರೂ, ಆತ ನಿರಾಕರಿಸಿದ್ದಾನೆ.
ಮದ್ಯದ ಅಮಲಲ್ಲಿ ಹಾಗೆ ಮಾಡಿದ್ದಾನೆಯೇ? ಅಥವಾ ಮಾನಸಿಕ ಅಸ್ವಸ್ಥನಾಗಿದ್ದನೆ ಎಂಬುದು ಗೊತ್ತಾಗಿಲ್ಲ. ನಂತರದಲ್ಲಿ ರಟ್ಟು ಸುತ್ತಿಕೊಂಡು ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.









