
ಸಹೋದರರ ಜೊತೆ ಮನೆ ಮುಂದೆ ಆಡ್ತಿದ್ದ ಎರಡು ವರ್ಷದ ಬಾಲಕನ ಶವ ಪಕ್ಕದ ಮನೆ ವಾಷಿಂಗ್ ಮಶಿನ್ ನಲ್ಲಿ ಸಿಕ್ಕಿದೆ. ಬಾಲಕನನ್ನು ಪಕ್ಕದ ಮನೆಯವರು ಹತ್ಯೆಗೈದಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
ಘಟನೆ ಪಂಜಾಬ್ ನ ಕಪುರ್ಥಾಲಾದ ಗ್ರಾಮವೊಂದರಲ್ಲಿ ನಡೆದಿದೆ. ಮಂಗಳವಾರ ಅಣ್ಣಂದಿರ ಜೊತೆ ಎರಡು ವರ್ಷದ ಬಾಲಕ ಆಡ್ತಿದ್ದನಂತೆ. ಮಧ್ಯಾಹ್ನ 11 ಗಂಟೆ ಸುಮಾರಿಗೆ ಬಾಲಕ ನಾಪತ್ತೆಯಾಗಿದ್ದಾನೆ. ಕುಟುಂಬಸ್ಥರು ಹುಡುಕಾಟ ಶುರು ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.
ಪಕ್ಕದ ಮನೆಯವರ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಪಕ್ಕದ ಮನೆಗೆ ಹೋದ ಪೊಲೀಸರಿಗೆ ವಾಷಿಂಗ್ ಮಶಿನ್ ನಲ್ಲಿ ಬಾಲಕನ ಶವ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.











