
ಬೆಂಗಳೂರು: ಕೆಲವು ದಿನಗಳಿಂದ ದೇಶದಲ್ಲಿ ಚಿನ್ನ, ಬೆಳ್ಳಿಯ ಬೆಲೆ ಇಳಿಕೆಯಾಗಿತ್ತು, ಇಂದು ಮತ್ತೆ ಏರಿಕೆಯಾಗಿದೆ. ಬುಧವಾರ ಗ್ರಾಂ ಚಿನ್ನಕ್ಕೆ 1ರೂ ಏರಿಕೆ ಕಂಡು 3,706 ರೂ. ಇದ್ದು, ಬೆಳ್ಳಿ ಬೆಲೆ ಏರಿಕೆ ಕಂಡು ಕೆಜಿಗೆ 46,810 ರೂ ಇದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 10ರೂ ಏರಿಕೆಯಾಗಿದ್ದು 35,610 ರೂ ಇದೆ . 1 ಕೆಜಿ ಬೆಳ್ಳಿ ಬೆಲೆ 46,810ರೂ ಇದೆ.
ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 10ರೂ ಏರಿಕೆಯಾಗಿ 37,010 ರೂಪಾಯಿ ಮತ್ತು ಒಂದು ಕೆ.ಜಿ. ಬೆಳ್ಳಿ ದರ 46,810ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 37,060 ರೂ, ಒಂದು ಕೆ.ಜಿ. ಬೆಳ್ಳಿ ದರ 46,810 ರೂಪಾಯಿ ಇದೆ.
ಕೋಲ್ಕತಾದಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆಯಾಗಿ 37,350 ರೂಪಾಯಿ ಮತ್ತು ಬೆಳ್ಳಿ ದರ 46,810 ರೂಪಾಯಿ ಇದೆ. ಚೆನ್ನೈನಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 36,260 ರೂ. ಒಂದು ಕೆ.ಜಿ. ಬೆಳ್ಳಿ ದರ 46,810ರೂಪಾಯಿ ಇದೆ.











