Recent Posts

Saturday, May 9, 2026
ಸುದ್ದಿ

ಪರೇಶ್ ಮೇಸ್ತಾ ಸಾವು ಹಿನ್ನೆಲೆ; ಹೋರಾಟಗಾರರ ಕೇಸ್ ವಾಪಾಸ್ ಪಡೆಯುವಂತೆ ಸಿಎಂಗೆ ಮನವಿ ಮಾಡಲು ಒತ್ತಾಯ – ಕಹಳೆ ನ್ಯೂಸ್

ಭಟ್ಕಳ: ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಒಂದು ಸಮುದಾಯದ ಓಲೈಕೆಯ ನೀತಿಯಿಂದ, ಹಲವಾರು ಹಿಂದೂ ಹೋರಾಟಗಾರರ ಸಾವು ನೋವುಗಳು ಸಂಭವಿಸಿದ್ದವು. ಈ ಹೋರಾಟದಲ್ಲಿ ಭಟ್ಕಳ ತಾಲ್ಲೂಕಿನ ಎರಡು ಅಮಾಯಕ ಜೀವ ಬಲಿಯಾಗಿದ್ದವು. ಅವರ ಸಾವಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಬೀದಿಗಿಳಿದ ಅದೆಷ್ಟೋ ಹಿಂದೂ ಹೋರಾಟಗಾರರ ಮೇಲೆ ಸರ್ಕಾರ ಇಲ್ಲ ಸಲ್ಲದ ಪ್ರಕರಣವನ್ನು ದಾಖಲಿಸಿ ಕಾರಾಗೃಹಕ್ಕೆ ತಳ್ಳಿತ್ತು, ಇದರಲ್ಲಿ ಬಹುತೇಕ ಯುವಕರೇ ಹೆಚ್ಚಿದ್ದು ಇಂದಿಗೂ ಕೋರ್ಟು ಕಛೇರಿ ಎಂದು ಅಲೆದಾಡುತ್ತಾ ಇರುವುದು ಅವರ ಶಿಕ್ಷಣಕ್ಕೆ, ಕೂಲಿ ನಾಲಿ ಮಾಡಿ ಬದುಕುವವರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಮಾಯಕ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರ ವಿರುದ್ಧ ಅಂದಿನ ಕಾಂಗ್ರೆಸ್ ಸರ್ಕಾರದ ಪರವಾಗಿ ಪೋಲಿಸ್ ಇಲಾಖೆಯಿಂದ ಹಾಕಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು. ಹಾಗೂ ನೂರಾರು ಅಮಾಯಕ ಕುಟುಂಬಗಳ ರಕ್ಷಣೆಗೆ ಸರ್ಕಾರ ಧಾವಿಸಬೇಕೆಂದು ಭಟ್ಕಳ ಶಾಸಕರಾದ ಸುನಿಲ್ ನಾಯ್ಕ್ ರವರು ಕುಮಟ ಶಾಸಕರಾದ ಸನ್ಮಾನ್ಯ ದಿನಕರ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆಸಿ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವಂತೆ ಕೋರಿದರು…