ಬ್ರೇಕಿಂಗ್ : ಕಾಫಿ ಡೇ ಮುಚ್ಚುವುದಿಲ್ಲ: ಕಾಫಿ ಡೇ ಬೋರ್ಡ್ ಆಫ್ ಡೈರೆಕ್ಟರ್ ಸಭೆಯಲ್ಲಿ ತೀರ್ಮಾನ – ಕಹಳೆ ನ್ಯೂಸ್

ಬೆಂಗಳೂರು : ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವಿನ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡದ ಕಾಫಿ ರುಚಿಯನ್ನು ಪರಿಚಯಿಸಿದ್ದ ಕಾಫಿ ಡೇ ಮುಚ್ಚಲ್ಪಡುತ್ತದೆ ಎಂದು ಹೇಳಲಾಗುತ್ತಿತ್ತು. ಆದರೇ ಇದಕ್ಕೆ ಉತ್ತರಿಸಿರುವ ಕಾಫಿ ಡೇ ಬೋರ್ಡ್ ಆಫ್ ಡೈರೆಕ್ಟರ್ ಸಭೆ, ಕಾಫಿ ಡೇ ಮುಚ್ಚುವುದಿಲ್ಲ. ಮುಂದುವರೆಸಿಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದೆ. ಈ ಮೂಲಕ ಸಾವಿರಾರೂ ಕಾರ್ಮಿಕರಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ.
ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವಿನ ಬಳಿಕ, ಇಂದು ಕಾಫಿ ಡೇ ಬೋರ್ಡ್ ಆಫ್ ಕಂಪನಿಯ ಸಭೆಯನ್ನು ನಡೆಸಲಾಯಿತು. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ದಿ ಸ್ಕೈರ್ ನಲ್ಲಿರುವ ಕಾಫಿ ಡೇ ಮುಖ್ಯ ಕಚೇರಿಯಲ್ಲಿ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ ಸಭೆ ನಡೆಸಲಾಯಿತು.
ದೇಶ-ವಿದೇಶ ಸೇರಿದಂತೆ ವಿವಿಧೆಡೆಯಲ್ಲಿ ತನ್ನ ಕಾಫಿ ಡೇ ಮಳಿಗೆಯನ್ನು ಹೊಂದಿರುವ ಕಾಫಿ ಡೇ ಕಂಪನಿ, ಮಾಲೀಕ ಸಿದ್ಧಾರ್ಥ್ ಸಾವಿನ ಮೂಲಕ ಮುಚ್ಚಲ್ಪಡುತ್ತಾ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಈ ಮೂಲಕ 30 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಲ್ಲಿ ಬೀದಿಗೆ ಬೀಳುವ ಆತಂಕವನ್ನು ಹುಟ್ಟು ಹಾಕಿತ್ತು. ಆದರೇ ಈ ಆತಂಕವನ್ನು ಇದೀಗ ಕಾಫಿ ಡೇ ಬೋರ್ಡ್ ಆಫ್ ಕಂಪನಿಯ ಸಭೆಯಲ್ಲಿ ದೂರ ಮಾಡಿದೆ.
ಈ ಸಭೆಯಲ್ಲಿ, ಕಾಫಿ ಡೇ ಕಂಪನಿಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ. ಕಾಫಿ ಡೇ ಕಂಪನಿಯ ಆಡಳಿತ ಮಂಡಳಿಯ ಒಕ್ಕೊರಲಿನ ನಿರ್ಣಯವನ್ನು ಕೈಗೊಳ್ಳಲಾಯಿತು. ಈ ಮೂಲಕ ಕಾಫಿ ಡೇ ಮುಚ್ಚಲ್ಪಡುತ್ತದೆ ಎಂಬ ಹಲವರ ಅನುಮಾನಕ್ಕೆ ತೆರೆ ಎಳೆದರು. ಅಲ್ಲದೇ 30 ಸಾವಿರಕ್ಕೂ ಹೆಚ್ಚು ನೌಕರರು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದವರಿಗೆ, ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಮಾಡಲಾಯಿತು.









