Recent Posts

Saturday, May 9, 2026
ಸುದ್ದಿ

ತ್ರಿವಳಿ ತಲಾಕ್ ಮಸೂದೆ ಪಾಸ್ : ಮೂರು ಬಾರಿ ತಲಾಕ್ ನೀಡಿದ್ರೆ ಈ ಶಿಕ್ಷೆ ನಿಶ್ಚಿತ – ಕಹಳೆ ನ್ಯೂಸ್

ಮುಸ್ಲಿಂ ಮಹಿಳೆಯರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ರಾಜ್ಯಸಭೆ ಹಾಗೂ ಲೋಕಸಭೆ ಎರಡರಲ್ಲೂ ತ್ರಿವಳಿ ತಲಾಕ್ ಬಿಲ್ ಪಾಸಾಗಿದೆ. ರಾಷ್ಟ್ರಪತಿಗಳ ಅಂಕಿತ ಬೀಳ್ತಿದ್ದಂತೆ ಶಾಸನ ಜಾರಿಗೆ ಬರಲಿದೆ. ಆ ನಂತರ ಮೂರು ಬಾರಿ ತಲಾಕ್-ತಲಾಕ್-ತಲಾಕ್ ಎಂದರೆ ಅಪರಾಧವಾಗಲಿದ್ದು, ಅಪರಾಧಿಗೆ ಮೂರು ವರ್ಷಗಳ ಜೈಲು ಹಾಗೂ ದಂಡ ವಿಧಿಸಲಾಗುವುದು.

ಈ ಅಪರಾಧ ಮಾಡಿದವರಿಗೆ, ಮ್ಯಾಜಿಸ್ಟ್ರೇಟ್ ಕೋರ್ಟ್ ಮಾತ್ರ ಜಾಮೀನು ನೀಡಲಿದೆ. ಪೀಡಿತ ಪತ್ನಿ ವಿಚಾರಣೆ ನಡೆಸಿದ ನಂತರ ಮಾತ್ರ ಜಾಮೀನು ಸಿಗಲಿದೆ. ಆಕೆಯ ಮಾತುಗಳನ್ನು ಆಲಿಸಿದ ಮೇಲೆ ಪತಿಗೆ ಜಾಮೀನು ನೀಡುವುದಾದರೆ ಪತಿ, ಪತ್ನಿ ಮತ್ತು ಮಕ್ಕಳಿಗೆ ಎಷ್ಟು ಹಣ ನೀಡಬೇಕೆಂಬುದನ್ನು ಕೋರ್ಟ್ ನಿರ್ಧರಿಸಲಿದೆ. ಪತಿ-ಪತ್ನಿ ಮಧ್ಯೆ ಒಪ್ಪಂದಕ್ಕೂ ಇಲ್ಲಿ ಅವಕಾಶವಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು