Saturday, May 2, 2026
ಸುದ್ದಿ

ತಮಿಳುನಾಡಿನಲ್ಲಿ ಹಿಂದೂಗಳ ಹತ್ಯೆಯ ಬಗ್ಗೆ ಕಮಲ ಹಾಸನ್ ಮೌನವೇಕೆ?? – ಕಹಳೆ ನ್ಯೂಸ್

ನಾಥುರಾಮ್ ಗೋಡ್ಸೆ ಇವರು ಸ್ವಾತಂತ್ರ್ಯನಂತರದ ಮೊದಲ ಹಿಂದೂ ಭಯೋತ್ಪಾದಕ ಎಂದು ನಟ ಕಮಲ ಹಾಸನ್ ಹೇಳಿಕೆಯನ್ನು ನೀಡಿದ್ದರು. ತಮಿಳುನಾಡಿನಲ್ಲಿ 100 ಕ್ಕೂ ಹೆಚ್ಚು ಹಿಂದೂಗಳನ್ನು ಜಿಹಾದಿ ಕಟ್ಟರವಾದಿಗಳು ಹತ್ಯೆ ಮಾಡಿದ್ದರು, ಅದೇ ರೀತಿ ಶ್ರೀಲಂಕಾದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದೆ, ಆದರೆ ಇದರ ಬಗ್ಗೆ ಕಮಲ ಹಾಸನ್ ಮಾತನಾಡುವ ಧೈರ್ಯ ತೋರಿಸುತ್ತಿಲ್ಲ, ಇಂತಹ ಪ್ರವೃತ್ತಿಯನ್ನು ಹಿಂದೂಗಳು ಧಿಕ್ಕರಿಸಬೇಕು. ಹಿಂದೂಗಳು ಸಂಘಟಿತರಾಗಿ ಈ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದಾಗ ಕಮಲ ಹಾಸನ್ ಇವರು ನನ್ನ ಮಗಳೂ ಹಿಂದೂ ಧರ್ಮದಲ್ಲಿನ ತತ್ತ್ವಗಳ ಬಗ್ಗೆ ಅಭ್ಯಾಸ ಮಾಡುತ್ತಿದ್ದಾಳೆ ಎಂದು ಹೇಳಬೇಕಾಯಿತು ಎಂದು ತಮಿಳುನಾಡಿನ ಶಿವಸೇನೆಯ ರಾಜ್ಯಾಧ್ಯಕ್ಷರಾದ ಶ್ರೀ ಜೀ ರಾಧಾಕೃಷ್ಣನ್ ಇವರು ಪ್ರತಿಪಾದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೇ 31 ರಂದು ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಂಗಣದಲ್ಲಿ ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಮೂರನೇ ದಿನದಂದು ವಿವಿಧ ರಾಜ್ಯಗಳಲ್ಲಿ ಹಿಂದೂಗಳ ದುರ್ದಶೆಯ ಸದ್ಯದ ಸ್ಥಿತಿ. ಬಂಗಾಲದಲ್ಲಿ ಹಿಂದೂಗಳಿಗೆ ಜೀವಿಸಲೂ ಕಠಿಣವಾಗಿದೆ. ಈ ಸ್ಥಿತಿಯಲ್ಲಿ ಬಂಗಾಲದಲ್ಲಿ ಆಗುತ್ತಿರುವ ರಾಜಕೀಯ ಪರಿವರ್ತನೆಯು ಆಧ್ಯಾತ್ಮಿಕ ಶಕ್ತಿಯಿಂದಲೇ ಆಗುತ್ತಿದೆ. ರಾಜಕೀಯ ವ್ಯಕ್ತಿ ಇದನ್ನು ಸ್ವೀಕರಿಸುವುದಿಲ್ಲ, ಆದರೆ ವಾಸ್ತವದಲ್ಲಿ ಇದೇ ಆಗಿದೆ ಎಂದು ಟ್ರುಥ್ ನಿಯತಕಾಲಿಕೆಯ ಸಂಪಾದಕ ಶಿಬನರಾಯಣ ಸೇನ ಹೇಳಿದರು.

ಮಾತನಾಡುತ್ತಾ,
ಬಾಂಗ್ಲಾದೇಶದಿಂದ ಬಹುದೊಡ್ಡ ಪ್ರಮಾಣದಲ್ಲಿ ಮತಾಂಧರು ಅಸ್ಸಾಂ ರಾಜ್ಯಕ್ಕೆ ಬರುತ್ತಿದ್ದಾರೆ. ಅಸ್ಸಾಂದಲ್ಲಿ 9 ಜಿಲ್ಲೆಗಳಲ್ಲಿ ಮತಾಂಧರು ಬಹುಸಂಖ್ಯಾತರಾಗಿದ್ದು ಅವರ ಸಂಖ್ಯೆಯು ಶೇ. 80 ಕ್ಕಿಂತ ಹೆಚ್ಚಿದೆ ಎಂದು ಅಸ್ಸಾಂನ ಸ್ವಾಮಿ ವಿವೇಕಾನಂದ ಕೇಂದ್ರದ ಶ್ರೀಮತಿ ರಾಣು ಬೊರಾಹ ಹೇಳಿದ್ದಾರೆ.

‘ಲವ್ ಜಿಹಾದ್’ ವಿರುದ್ಧ ಜಾಗೃತಿ ಆವಶ್ಯಕ ! – ವಿನೋದಕುಮಾರ ಸರ್ವೋದಯ, ಅಧ್ಯಕ್ಷರು, ಸಾಂಸ್ಕೃತಿಕ ಗೌರವ ಸಂಸ್ಥಾನ, ಗಾಝಿಯಾಬಾದ್ ದೇಶದಲ್ಲಿ ಜಿಹಾದಿಗಳ ದೊಡ್ಡ ಜಾಲಗಳನ್ನು ನಿರ್ಮಿಸಲಾಗುತ್ತಿದೆ, ಇಸ್ಲಾಮಿ ದೇಶಗಳಿಂದ ಶಿಷ್ಯವೇತನ ಪಡೆದು ಮತಾಂಧ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಾರೆ ಮತ್ತು ಇಲ್ಲಿನ ಹಿಂದೂ ಹೆಣ್ಣುಮಕ್ಕಳನ್ನು ‘ಲವ್ ಜಿಹಾದ್’ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. ಇದರ ಬಗ್ಗೆ ದೊಡ್ಡ ಜಾಗೃತಿ ಮಾಡುವ ಆವಶ್ಯಕತೆ ಇದೆ, ಎಂದು ಉತ್ತರ ಪ್ರದೇಶದ ಗಾಝಿಯಾಬಾದ್‍ದಲ್ಲಿನ ಸಾಂಸ್ಕೃತಿಕ ಗೌರವ ಸಂಸ್ಥಾನದ ಅಧ್ಯಕ್ಷರಾದ ಶ್ರೀ. ವಿನೋದಕುಮಾರ ಸರ್ವೋದಯರವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ‘ಹಿಂದೂ ರಾಷ್ಟ್ರ ಕಾರ್ಯ’ ಈ ಸತ್ರದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಛತ್ತೀಸಗಡದಲ್ಲಿನ ರಾಷ್ಟ್ರೀಯ ಸ್ವಾಭಿಮಾನಿ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸತೀಶ ತ್ರಿಪಾಠಿಯವರು ಮಾತನಾಡುತ್ತಾ, “ದೇಶದಲ್ಲಿ ಯಾವ ಪ್ರದೇಶದಲ್ಲಿ ಜಾತಿ ಆಧಾರಿತ ರಾಜಕೀಯ ಮಾಡಲಾಯಿತೋ ಅಲ್ಲಿ ನಮ್ಮ ಜಾತಿವ್ಯವಸ್ಥೆಯವನ್ನು ಕ್ಷೀಣಿಸುವ ಕೃತ್ಯವಾಯಿತು.

ಪ್ರಾಚೀನ ಗ್ರಾಮವ್ಯವಸ್ಥೆಯಲ್ಲಿ ವರ್ಣಾಶ್ರಮವ್ಯವಸ್ಥೆ ಇದ್ದುದರಿಂದ ಅದು ಆದರ್ಶಪ್ರಾಯವಾಗಿತ್ತು. ಆ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಇನ್ನೊಬ್ಬರ ಕಾಳಜಿ ವಹಿಸುತ್ತಿದ್ದರಿಂದ ಅದು ಸ್ವಾವಲಂಬಿಯಾಗಿತ್ತು”, ಎಂದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಹಾಗೂ ಉತ್ತರ-ಪೂರ್ವ ಭಾರತ ಮಾರ್ಗದರ್ಶಕ ಪೂ. ನೀಲೇಶ ಸಿಂಗಬಾಳರವರು ಪ್ರಯಾಗರಾಜ ಕುಂಭಮೇಳದಲ್ಲಿ ‘ಹಿಂದೂ ರಾಷ್ಟ್ರ-ಜಾಗರಣ ಮತ್ತು ಹಿಂದೂ ಸಂಘಟನೆ’ ಇವುಗಳಿಗಾಗಿ ಮಾಡಿದ ಕಾರ್ಯದ ವರದಿಯನ್ನು ಮಂಡಿಸಿದರು. ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸದ್ಗುರು ನಂದಕುಮಾರ ಜಾಧವ ಇವರು ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತರಬೇತಿ ಉಪಕ್ರಮದ ಮಹತ್ವ ಮತ್ತು ಸಾಮೂಹಿಕ ಯೋಜನೆಯ ದಿಶೆ’ ಇವುಗಳ ಬಗ್ಗೆ ಮಾರ್ಗದರ್ಶನ ಮಾಡಿದರು.