Monday, May 4, 2026
ಸುದ್ದಿ

ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರಾದ ಶ್ರೀ ಸುರೇಶ್ ಅಂಗಡಿಗೆ ಸಸಿ ನೀಡಿ ಸ್ವಾಗತ – ಕಹಳೆ ನ್ಯೂಸ್

ಬೆಂಗಳೂರು : ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರಾದ ಶ್ರೀ ಸುರೇಶ್ ಅಂಗಡಿ ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ರೀ ಜಗದೀಶ್ ಹಿರೇಮನಿ ಮತ್ತಿತರ ಮುಖಂಡರು ಮಾನ್ಯ ಸಚಿವರಿಗೆ ಸಸಿ ನೀಡುವ ಮೂಲಕ ಸ್ವಾಗತಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದ ಅವರು ಪಕ್ಷದ ಹಿರಿಯರಾದ ಶ್ರೀ ಜಗನ್ನಾಥ ರಾವ್ ಜೋಶಿ ಅವರ ಪುತ್ಥಳಿಗೆ ಗೌರವ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಎನ್. ರವಿಕುಮಾರ್ ಅವರು ಪುಷ್ಪ ಗುಚ್ಛ ನೀಡಿ ಸ್ವಾಗತಿಸಿದರಲ್ಲದೇ ಸಚಿವರಿಗೆ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡರು. ಕಲಬುರಗಿ ಸಂಸತ್ ಸದಸ್ಯರಾದ ಡಾ.ಉಮೇಶ್ ಜಾಧವ್ ಮತ್ತಿತರರು ಹಾಜರಿದ್ದರು.