Saturday, May 2, 2026
ಸುದ್ದಿ

ಪಟ್ಲ ಸಂಭ್ರಮದಲ್ಲಿ ಅಗರಿ ನೆನಪು – ಕಹಳೆ ನ್ಯೂಸ್

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಆಶ್ರಯದಲ್ಲಿ ಅಡ್ಯಾರ್ ಗಾರ್ಡ್‍ನಲ್ಲಿ ನಡೆದ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವತ, ಪ್ರಸಂಗಕರ್ತ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ರಾವ್ ಅವರ ನೆನಪು ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಲ ಸಂಭ್ರಮದಲ್ಲಿ ವೇದಿಕೆಗೆ ಅಗರಿ ಶ್ರೀನಿವಾಸ್ ರಾವ್ ಅವರ ಹೆಸರಿಡಲಾಗಿತ್ತು. ಚೌಕಿ ಪೂಜೆಯ ನಂತರ ಅಗರಿ ವೇದಿಕೆಯನ್ನು ಭ್ರಮರಾಂಬಿಕೆಯ ಭಾವಚಿತ್ರದ ಬಳಿ ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಲಾಯಿತು.

ಶ್ರೀ ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ಹಾಗೂ ಅಗರಿ ರಾಘವೇಂದ್ರ ರಘುರಾಮ ರಾವ್ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.

ಪಟ್ಲ ಮಹಾಬಲ ಶೆಟ್ಟಿ, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೊತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ , ಸಿಎ ಸುದೇಶ್ ಕುಮಾರ್ ರೈ, ಕದ್ರಿ ನವನೀತ ಶೆಟ್ಟಿ, ಜಗದೀಶ ಶೆಟ್ಟಿ ಕಾರ್‍ಸ್ಟ್ರೀಟ್, ರವಿಚಂದ್ರ ಶೆಟ್ಟಿ ಅಶೋಕನಗರ, ಸವಣೂರು ಸೀತಾರಾಮ ರೈ, ಭುಜಬಲಿ ಧರ್ಮಸ್ಥಳ, ಪ್ರದೀಪ್ ಆಳ್ವ ಕದ್ರಿ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ಘಟಕದವರು ಅಗರಿ ಭಾಗವತರ ಶ್ರೀದೇವಿ ಮಹಾತ್ಮೆಯ ಮಹಿಷ ವಧೆ ಪ್ರಸಂಗವನ್ನು ಪ್ರದರ್ಶಿಸಿ ಅಗರಿ ಕೃತಿಗೆ ಗೌರವಾರ್ಪಣೆ ಮಾಡಿದರು.