Monday, April 27, 2026
ಸುದ್ದಿ

ಮುಕ್ಕೂರು ರಾಘವೇಂದ್ರ ಪ್ರಸಾದ್ ಶಾಸ್ತ್ರೀ ನಿಧನ – ಕಹಳೆ ನ್ಯೂಸ್

ಪುತ್ತೂರು : ಮುಕ್ಕೂರು ರಾಘವೇಂದ್ರ ಪ್ರಸಾದ್ ಶಾಸ್ತ್ರೀ ಹ್ರದಯಾಘಾತದಿಂದ ನಿಧನ ತನ್ನ ಸ್ವಗ್ರಹದಲ್ಲಿ ಮಾ.16ರಂದು ರಾತ್ರಿ ಪೂಜೆ ಕೆಲಸ ಮುಗಿಸಿ ಬಂದು ಮಲಗಿರುವಾಗ ಹ್ರದಯಾಘಾತ ಸಂಭವಿಸಿದೆ.

ಮಾ 17 ಬೆಳಿಗ್ಗೆ ಗ್ರಹ ಪ್ರವೇಶ ಕಾರ್ಯಕ್ರಮ ನಿಮಿತ್ತ ಹೋಗಬೇಕು ಎಂದು ಪತ್ನಿ ಬಳಿ ಹೇಳಿ ಮಲಗಿದ್ದರು. ಬೆಳಿಗ್ಗೆ ಪತ್ನಿ ಎಬ್ಬಿಸಲಿ ಹೋದ ಸಂದರ್ಭದಲ್ಲಿ ಯಾವುದೇ ಉಸಿರಾಟ ಇಲ್ಲದನ್ನ ಗಮನಿಸಿದ ಪತ್ನಿ ವೈದ್ಯರನ್ನ ಸಂಪರ್ಕಿಸಿದರು, ಡಾಕ್ಟರ್ ಬಂದು ಪರೀಕ್ಷಿಸಿ ಹ್ರದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸ್ತ್ರಿಗಳಿಗೆ 52 ವರ್ಷವಾಗಿದ್ದು, ಪುತ್ತೂರು ವಿವಿಧ ಕಡೆಗಳಲ್ಲಿ ಪೂಜೆ ಹಾಗು ತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ದೇರೆಬೈಲು ತಂತ್ರಿಗಳಾಗಿದ್ದ ಇವರು ಎಲ್ಲರಿಗು ಚಿರಪರಿಚಿತರು. ಮೃತರು ಪತ್ನಿ, ಓರ್ವ ಪುತ್ರ ಹಾಗು ಪುತ್ರಿ ಅಗಲಿದ್ದಾರೆ.